ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Republic Day Fashion 2026: ಗಣರಾಜ್ಯೋತ್ಸವದ ಸೆಲೆಬ್ರೇಷನ್‌ಗೆ ಬಂತು ದೇಸಿ ಫ್ಯಾಷನ್‌ವೇರ್ಸ್

ಗಣರಾಜ್ಯೋತ್ಸವದ ಸೆಲೆಬ್ರೇಷನ್‌ಗೆ ವೈವಿಧ್ಯಮಯ ದೇಸಿ ಫ್ಯಾಷನ್‌ವೇರ್‌ಗಳು ಬಿಡುಗಡೆಗೊಂಡಿವೆ. ವಿತ್ ಕಾಲರ್, ಕಾಲರ್ ಲೆಸ್, ಫುಲ್ ಸ್ಲೀವ್ ಸ್ಲಿಟ್ ಸ್ಟ್ರೇಟ್ ಕಟ್, ಲಾಂಗ್ ಕಟ್ ಹೀಗೆ ನಾನಾ ವಿನ್ಯಾಸದಲ್ಲಿ ಲಗ್ಗೆ ಇಟ್ಟಿವೆ. ಇವುಗಳ ಬಗ್ಗೆ ಫ್ಯಾಷನಿಸ್ಟಾಗಳು ಒಂದಿಷ್ಟು ಮಾಹಿತಿ ನೀಡಿದ್ದಾರೆ.

ವಿವಿಧ ಬಗೆಯ ದೇಸಿ ಫ್ಯಾಷನ್‌ವೇರ್ಸ್ (ಚಿತ್ರಕೃಪೆ: ಪಿಕ್ಸೆಲ್)
1/5

ಗಣರಾಜ್ಯೋತ್ಸವದ ಸೆಲೆಬ್ರೇಷನ್‌ಗೆ ಈಗಾಗಲೇ ನಾನಾ ಬಗೆಯ ದೇಸಿ ಫ್ಯಾಷನ್‌ವೇರ್‌ಗಳು ಆಗಮಿಸಿವೆ.

2/5

ರಾಷ್ಟ್ರ ಪ್ರೇಮಕ್ಕೆ ಸಾಥ್ ನೀಡುವ ಕುರ್ತಾ ಫ್ಯಾಷನ್

ಪ್ರತಿ ರಿಪಬ್ಲಿಕ್ ಡೇ ಸಮಯದಲ್ಲಿ ನಯಾ ಡಿಸೈನ್ ಹಾಗೂ ಲೈಟ್ ಶೇಡ್‌ಗಳಲ್ಲಿ ಬಗೆಬಗೆಯ ಡಿಸೆಂಟ್ ಲುಕ್ ನೀಡುವ ಕುರ್ತಾಗಳು ಬಿಡುಗಡೆಗೊಳ್ಳುತ್ತವೆ. ಈ ಬಾರಿಯೂ ಕೂಡ ಪಾಸ್ಟೆಲ್ ಶೇಡ್ಸ್ ಹಾಗೂ ಲೈಟ್ ಶೇಡ್‌ನ ಕುರ್ತಾಗಳು ಬಂದಿವೆ. ವಿತ್ ಕಾಲರ್, ಕಾಲರ್ ಲೆಸ್, ಫುಲ್ ಸ್ಲೀವ್ ಸ್ಲಿಟ್ ಸ್ಟ್ರೇಟ್ ಕಟ್, ಲಾಂಗ್ ಕಟ್ ಹೀಗೆ ನಾನಾ ವಿನ್ಯಾಸದಲ್ಲಿ ಲಗ್ಗೆ ಇಟ್ಟಿವೆ. ಅದರಲ್ಲೂ ಕ್ರೀಮ್, ಐವರಿ, ಹಾಫ್ ವೈಟ್ ಶೇಡ್ನವು ಶಿಮ್ಮರ್ ಸ್ಟ್ರೈಪ್ಸ್ ಹಾಗೂ ಮಾನೋಕ್ರೋಮ್ ಕಲರ್‌ನಲ್ಲಿ ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡಿವೆ.

3/5

ನಯಾ ವಿನ್ಯಾಸದಲ್ಲಿ ಖಾದಿ ಉಡುಗೆಗಳು

ಮಹಿಳೆಯರು ಹಾಗೂ ಪುರುಷರಿಗೆ ಪ್ರಿಯವಾಗುವಂತಹ ಹೊಸ ವಿನ್ಯಾಸದ ಖಾದಿ ಉಡುಗೆಗಳು ಬಿಡುಗಡೆಗೊಂಡಿವೆ. ಲಾಂಗ್ ಸಲ್ವಾರ್, ಚೂಡಿದಾರ್, ತ್ರೀ ಫೋರ್ತ್ ಫ್ರಾಕ್ ಹಾಗೂ ಮ್ಯಾಕ್ಸಿ ಶೈಲಿಯವು ಹುಡುಗಿಯರಿಗಾಗಿ ಬಿಡುಗಡೆಗೊಂಡಿವೆ. ಇನ್ನು ಹುಡುಗರು ಜೀನ್ಸ್ ಪ್ಯಾಂಟ್ ಮೇಲೂ ಧರಿಸಬಹುದಾದ ಖಾದಿಯ ಕಾಲರ್ ಇರುವಂತಹ ಶಾರ್ಟ್ ಎಲ್ಬೋ ಸ್ಲೀವ್‌ನ ಕುರ್ತಾಗಳು ಲಗ್ಗೆ ಇಟ್ಟಿವೆ. ಮಕ್ಕಳ ಸೈಝ್‌ನಲ್ಲೂ ದೊರೆಯುತ್ತಿವೆ ಎನ್ನುತ್ತಾರೆ ಖಾದಿ ನೇಷನ್‌ನ ಸೆಲ್ಸ್ ಮ್ಯಾನೇಜರ್ ರಜತ್.

4/5

ಕಾಟನ್ ಧೋತಿ ಸೆಟ್‌ಗೂ ಸಿಕ್ತು ಆದ್ಯತೆ

ಸರಳತೆ ಬಿಂಬಿಸುವ ಈ ಕಾಟನ್ ಧೋತಿ ಸೆಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇನ್ನು ಹುಡುಗಿಯರಿಗೆ ಕಾಟನ್ ಲಾಂಗ್ ಚೂಡಿದಾರ್, ಸಲ್ವಾರ್, ಮ್ಯಾಕ್ಸಿ, ಅಂಬ್ರೆಲ್ಲಾ ಟಾಪ್‌ನಂತವು ದೊರೆಯುತ್ತಿವೆ. ಮಧ್ಯ ಮಯಸ್ಕ ಪುರುಷರಿಗೆ ಹೊಸ ಶೇಡ್‌ಗಳ ಕಾಟನ್ ಶರ್ಟ್‌ಗಳು ಬಿಡುಗಡೆಗೊಂಡಿವೆ ಎನ್ನುವ ಸ್ಟೈಲಿಸ್ಟ್ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ.

5/5
  • ನಯಾ ವಿನ್ಯಾಸದ ಉಡುಗೆಗಳಿಗೆ ಆದ್ಯತೆ ನೀಡಿ.
  • ಸಿಂಪಲ್ ವಿನ್ಯಾಸದವನ್ನು ಆಯ್ಕೆ ಮಾಡಿ.
  • ಇತರೇ ಸಂದರ್ಭಗಳಲ್ಲೂ ಧರಿಸಬಹುದಾದ ಔಟ್‌ಫಿಟ್ಸ್ ಕೊಳ್ಳಿ.
  • ಎಲಿಗೆಂಟ್ ಲುಕ್ ನೀಡುವಂತದ್ದನ್ನು ಆರಿಸಿ.

ಶೀಲಾ ಸಿ ಶೆಟ್ಟಿ

View all posts by this author