ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Samantha Rut Prabhu: ರಾಜ್ ನಿಧಿಮೋರು ಜತೆ ಸಮಂತಾ ಲವ್‌ನಲ್ಲಿ ಬಿದ್ರಾ? ಫೋಟೋ ನೋಡಿ

ನಿರ್ದೇಶಕ ರಾಜ್ ನಿಧಿಮೋರು ಮತ್ತು ನಟಿ ಸಮಂತಾ ರುತ್ ಪ್ರಭು ಅವರು ಡೇಟಿಂಗ್ ಮಾಡುತ್ತಿರುವುದಕ್ಕೆ ಸಾಕ್ಷಿ ಸಿಕ್ಕಿದೆ. ಪದೇ ಪದೇ ಅವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಸಮಂತಾ ಹಂಚಿಕೊಂಡ ಕೆಲವು ಫೋಟೋಗಳಲ್ಲಿ ರಾಜ್ ಕೂಡ ಇದ್ದಾರೆ.

1/5

ಟಾಲಿವುಡ್‌ ಕ್ವೀನ್‌ ಸಮಂತಾ ರುತು ಪ್ರಭು ಅವರ ವಯಕ್ತಿಕ ಜೀವನ ಆಗಾಗ ಚರ್ಚೆಯಲ್ಲಿರುತ್ತದೆ. ಇದೀಗ ಅವರ ಲವ್‌ ಲೈಫ್‌ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ನಿರ್ದೇಶಕ ರಾಜ್ ನಿಧಿಮೋರು (Raj Nidimoru) ಜೊತೆ ಅವರು ರಿಲೇಷನ್​ಶಿಪ್​ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಸಮಂತಾ ಅವರು ರಾಜ್ ಜೊತೆ ಎಲ್ಲ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ಸಮಂತಾ ಅವರ ಜೊತೆ ಫೋಟೋ ಹಾಕಿದ್ದು ಮತ್ತೆ ಸುದ್ದಿಯಲ್ಲಿದ್ದಾರೆ.

2/5

ಈಗ ಮತ್ತೆ ರಾಜ್ ನಿಧಿಮೋರು ಜೊತೆ ಇರುವ ಫೋಟೋಗಳನ್ನು ಸಮಂತಾ (Samantha) ಅವರು ಪೋಸ್ಟ್ ಮಾಡಿದ್ದಾರೆ. ಸಮಂತಾ ಅವರು ಈಗ ನಿರ್ಮಾಪಕಿ ಆಗಿದ್ದಾರೆ. ‘ಶಸಿನಿಮಾಗೆ ಅವರು ಬಂಡವಾಳ ಹೂಡಿದ್ದಾರೆ. ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ. ತಮ್ಮ ಚಿತ್ರ ಬಿಡುಗಡೆಯಾಗುವ ಕೆಲವು ದಿನಗಳ ಮೊದಲು, ಸಮಂತಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. , ಚಿತ್ರತಂಡದೊಂದಿಗಿನ ಕೆಲವು ಚಿತ್ರಗಳು ಮತ್ತು ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗಿನ ಒಂದು ಚಿತ್ರವೂ ಸೇರಿದೆ.

3/5

ಸಮಂತಾ ಇನ್‌ಸ್ಟಾಗ್ರಾಮ್‌ನಲ್ಲಿ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದು ಇದು ದೀರ್ಘ ಪ್ರಯಾಣವಾಗಿತ್ತು ಆದರೆ ಇದು ಹೊಸ ಆರಂಭ ಎಂದು ಬರೆದಿದ್ದಾರೆ. ಈ ಫೋಟೋಗಳು ಇವರಿಬ್ಬರ ನಡುವೆ ಸಂಬಂಧವಿದೆ ಎಂಬ ವದಂತಿಗೆ ಇನ್ನಷ್ಟು ಪುಷ್ಟಿ ನೀಡುವಂತಿವೆ.

4/5

ಇದನ್ನು ನೋಡಿದ ಅಭಿಮಾನಿಗಳು ‘ ನಿಮ್ ಲವ್ ಖಚಿತ’ ಎಂದು ಕಮೆಂಟ್ ಮಾಡುತ್ತಿದ್ದಾರೆ. ರಾಜ್ ನಿಧಿಮೋರು ಮತ್ತು ಸಮಂತಾ ಅವರ ಸೆಲ್ಫಿ ಗಮನ ಸೆಳೆಯುತ್ತಿದೆ. ಸಮಂತಾ ಅವರು ಮುದ್ದಿನ ಶ್ವಾನದ ಜೊತೆಗೂ ರಾಜ್ ಕಾಣಿಸಿಕೊಂಡಿದ್ದಾರೆ. ಸಮಂತಾ ಅವರಿಗೆ ಬೆಂಬಲವಾಗಿ ರಾಜ್ ನಿಧಿಮೋರು ನಿಂತಿದ್ದಾರೆ.

5/5

ಸಮಂತಾ ಮತ್ತು ರಾಜ್ ಬಗ್ಗೆ ಈ ಗಾಸಿಪ್‌ ಗಳಿಗೆ ರಾಜ್ ಅಥವಾ ಸಮಂತಾ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ರಾಜ್ರವರು ಶ್ಯಾಮಲಿ ಡೆ ಎಂಬವರನ್ನು ವಿವಾಹವಾಗಿದ್ದಾರೆ ಮತ್ತು ದಂಪತಿಗಳಿಗೆ ಒಬ್ಬ ಮಗಳು ಇದ್ದಾರೆ. ಸಮಂತಾ ರೂತ್ ಪ್ರಭು, ನಟ ನಾಗ ಚೈತನ್ಯ ಅವರನ್ನು ಮದುವೆಯಾಗಿದ್ದರು. ಆದರೆ ಅವರು 2021ರಲ್ಲಿ ಡಿವೋರ್ಸ್‌ ಪಡೆದಿದ್ದಾರೆ.