ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Sankranti Fashion 2026: ಸಂಕ್ರಾಂತಿ ಅತ್ಯಾಕರ್ಷಕ ಸ್ಟೈಲಿಂಗ್‌ಗೆ ಇಲ್ಲಿವೆ 4 ಸಿಂಪಲ್‌ ಐಡಿಯಾ

Sankranti Fashion: ಸಂಕ್ರಾಂತಿ ಹಬ್ಬದಂದು ಅಂದವಾಗಿ ಕಾಣಿಸಲು ನೀವು ಒಂದಿಷ್ಟು ಸಿಂಪಲ್‌ ಸ್ಟೈಲಿಂಗ್‌ ಐಡಿಯಾಗಳನ್ನು ಫಾಲೋ ಮಾಡಿ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್. ಹಬ್ಬದಂದು ಸಾಂಪ್ರದಾಯಿಕ ಲುಕ್‌ಗೆ ಮಾನ್ಯತೆ ನೀಡಬೇಕು ಎನ್ನುತ್ತಾರೆ.‌ ಈ ಕುರಿತಂತೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

ಸಾಂದರ್ಭಿಕ ಚಿತ್ರ (ಚಿತ್ರಕೃಪೆ: ಪಿಕ್ಸೆಲ್‌)
1/5

ಸಂಕ್ರಾಂತಿ ಹಬ್ಬದಂದು ಟ್ರೆಡಿಷನಲ್‌ ಆಗಿ ಅತ್ಯಾಕರ್ಷಕವಾಗಿ ಕಾಣಿಸಲು ಒಂದಿಷ್ಟು ಸಿಂಪಲ್‌ ಸ್ಟೈಲಿಂಗ್‌ ಐಡಿಯಾಗಳನ್ನು ಫಾಲೋ ಮಾಡಬೇಕು ಎನ್ನುವ ಫ್ಯಾಷನ್‌ ಎಕ್ಸ್‌ಪರ್ಟ್ ದಿಯಾ ಪ್ರಕಾರ, ಹಬ್ಬದಂದು ಸಾಂಪ್ರದಾಯಿಕ ಲುಕ್‌ಗೆ ಮಾನ್ಯತೆ ನೀಡಬೇಕು ಎನ್ನುತ್ತಾರೆ. ಈ ಕುರಿತಂತೆ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

2/5

ಟ್ರೆಡಿಷನಲ್‌ವೇರ್‌ ಆಯ್ಕೆ ಮಾಡಿ

ಸಂಕ್ರಾಂತಿ ಹಬ್ಬದಂದು ನೀವು ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳಬೇಕಾದಲ್ಲಿ, ಆದಷ್ಟೂ ಟ್ರೆಡಿಷನಲ್‌ವೇರ್‌ಗಳನ್ನು ಚೂಸ್‌ ಮಾಡಿ. ಆಗಷ್ಟೇ ನೀವು ಹಬ್ಬದ ಲುಕ್‌ನಲ್ಲಿ ಕಾಣಿಸಲು ಸಾಧ್ಯ! ಲಂಗ-ದಾವಣಿ, ರೇಷ್ಮೆ ಸೀರೆ ಇಲ್ಲವೇ ಬಾರ್ಡರ್‌ ಸೀರೆಗಳನ್ನು ಧರಿಸಿ.

3/5

ಧರಿಸುವ ಡಿಸೈನರ್‌ವೇರ್‌ಗೆ ತಕ್ಕ ಜ್ಯುವೆಲರಿ ಧರಿಸಿ

ಹಬ್ಬದಂದು ಧರಿಸುವ ಉಡುಗೆ ಅಥವಾ ಸೀರೆಗೆ ತಕ್ಕಂತೆ ಜ್ಯುವೆಲರಿಗಳನ್ನು ಮ್ಯಾಚ್‌ ಮಾಡಿ. ಇದಕ್ಕಾಗಿ ನೀವು ಬಂಗಾರದ ಆಭರಣಗಳನ್ನೇ ಧರಿಸಬೇಕೆಂಬುದಿಲ್ಲ! ಮಾರುಕಟ್ಟೆಯಲ್ಲಿ ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುವ ನಾನಾ ಬಗೆಯ ಟ್ರೆಡಿಷನಲ್‌ ಇಮಿಟೇಷನ್‌ ಜ್ಯುವೆಲರಿಗಳನ್ನು ಕೊಂಡು ಧರಿಸಬಹುದು.

4/5

ಹೇರ್‌ಸ್ಟೈಲ್‌ ಆಕ್ಸೆಸರೀಸ್‌ನಿಂದ ಹಬ್ಬದ ಲುಕ್‌

ನಿಮ್ಮ ಹೇರ್‌ಸ್ಟೈಲ್‌ ಹಬ್ಬದ ಲುಕ್ಕನ್ನು ಇಮ್ಮಡಿಗೊಳಿಸುವುದು. ಇದೀಗ ಸಿಂಗಾರಗೊಂಡ ಜಡೆ, ಬನ್‌, ಪರ್ಲ್‌, ಬೀಡ್ಸ್ ಹೇರ್‌ ಎಕ್ಸ್ಟೆನ್ಷನ್‌ ಸೇರಿದಂತೆ ನಾನಾ ಬಗೆಯ ರೆಡಿಮೇಡ್‌ ಟ್ರೆಡಿಷನಲ್‌ ಹೇರ್‌ ಆಕ್ಸೆಸರೀಸ್‌ಗಳು ದೊರೆಯುತ್ತವೆ. ಇವು ಧರಿಸುವುದು ಸುಲಭ. ಜತೆಗೆ ಕೂದಲ ಅಂದವನ್ನು ಹೆಚ್ಚಿಸುತ್ತವೆ.

5/5

ಸಂಕ್ರಾಂತಿ ಮೇಕಪ್‌ ಲಕ್ಷಣವಾಗಿರಲಿ

ಸಂಕ್ರಾಂತಿಯ ಮೇಕಪ್‌ ನೋಡಲು ಲಕ್ಷಣವಾಗಿರಬೇಕು. ಹಣೆಗೆ ಬಿಂದಿ, ಕಣ್ಣಿಗೆ ಕಾಡಿಗೆ, ಐ ಲೈನರ್‌, ತೀಡಿದ ಹುಬ್ಬು, ತಿಳಿಯಾದ ಲಿಪ್‌ಸ್ಟಿಕ್‌ ಮೇಕಪ್‌ನಲ್ಲಿರಬೇಕು. ಯಾವುದೇ ಕಾರಣಕ್ಕೂ ಮಾದಕವಾಗಿ ಬಿಂಬಿಸುವ ಮೇಕಪ್‌ ಬೇಡ.

ಶೀಲಾ ಸಿ ಶೆಟ್ಟಿ

View all posts by this author