Sankranti Jewel Fashion 2026: ಹಬ್ಬದ ಗ್ರ್ಯಾಂಡ್ ಲುಕ್‌ಗೆ ಆಭರಣಗಳನ್ನು ಮ್ಯಾಚ್ ಮಾಡುವುದು ಹೇಗೆ?
ಹಬ್ಬದ ಗ್ರ್ಯಾಂಡ್ ಲುಕ್‌ಗಾಗಿ ಕೇವಲ ಡಿಸೈನರ್‌ವೇರ್ ಮತ್ತು ಸೀರೆ ಧರಿಸಿದರೇ ಸಾಲದು! ಗ್ರ್ಯಾಂಡ್ ಲುಕ್ ನೀಡುವ ಒಂದಿಷ್ಟು ಆಭರಣಗಳನ್ನು ಧರಿಸಬೇಕಾಗುತ್ತದೆ. ಯಾವ ಬಗೆಯ ಔಟ್‌ಫಿಟ್‌ಗೆ ಯಾವ ಬಗೆಯ ಜ್ಯುವೆಲರಿಗಳನ್ನುಧರಿಸಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಟಿಪ್ಸ್ ನೀಡಿದ್ದಾರೆ.
ಇದೀಗ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಅದು ಸಂಕ್ರಾಂತಿ ಆಗಬಹುದು ಇಲ್ಲವೇ ಪೊಂಗಲ್ ಆಗಬಹುದು. ಹಾಗೆಂದು, ಹಬ್ಬದ ಗ್ರ್ಯಾಂಡ್ ಲುಕ್‌ಗಾಗಿ ಕೇವಲ ಡಿಸೈನರ್‌ವೇರ್ ಇಲ್ಲವೇ ಸಿಂಪಲ್ ಸೀರೆ ಧರಿಸಿದರೇ ಸಾಲದು! ಅದಕ್ಕಾಗಿ ಗ್ರ್ಯಾಂಡ್ ಲುಕ್ ನೀಡುವ ಒಂದಿಷ್ಟು ಆಭರಣಗಳನ್ನು ಧರಿಸಬೇಕಾಗುತ್ತದೆ. ಯಾವ ಬಗೆಯ ಔಟ್‌ಫಿಟ್‌ಗೆ ಯಾವ ಬಗೆಯ ಜ್ಯುವೆಲರಿಗಳನ್ನು ಧರಿಸಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
ಗ್ರ್ಯಾಂಡ್ ಸೀರೆಗಾದಲ್ಲಿ ಆಭರಣಗಳು ಹೀಗಿರಲಿ
ನೀವು ರೇಷ್ಮೆ ಸೀರೆ ಉಡುತ್ತಿದ್ದಲ್ಲಿ, ಈ ಸೀರೆಗೆ ಆದಷ್ಟೂ ಗೋಲ್ಡನ್ ಜ್ಯುವೆಲರಿಗಳು ಅಂದರೇ ಅದು ಬಂಗಾರದ್ದಾಗಬಹುದು ಇಲ್ಲವೇ ಇಮಿಟೇಷನ್, ವನ್ ಗ್ರಾಮ್ ಗೋಲ್ಡ್‌ನದ್ದಾಗಬಹುದು. ಅಂತಹವನ್ನು ಸೆಲೆಕ್ಟ್ ಮಾಡಿ ಧರಿಸಿ. ನೆಕ್ಲೇಸ್, ಹಾರ, ದೊಡ್ಡ ಜುಮಕಿ, ಲೇಯರ್ ಮಾಟಿ, ಕಮರ್‌ಬಾಂದ್, ಬಾಜುಬಂಧ್ ಮಾಂಗ್ ಟೀಕಾ ಧರಿಸಿ. ಗ್ರ್ಯಾಂಡ್ ಲುಕ್ ದೊರೆಯುವುದು.
ಡಿಸೈನರ್‌ವೇರ್‌ಗಳಿಗಾದಲ್ಲಿ ಆಭರಣಗಳು ಹೀಗಿರಲಿ
ಯಾವುದೇ ಡಿಸೈನರ್‌ವೇರ್‌ಗಳಾದರೂ ಅವುಗಳ ಡಿಸೈನ್ ಆಧಾರದ ಮೇಲೆ ಆಭರಣಗಳನ್ನು ಧರಿಸಬೇಕಾಗುತ್ತದೆ. ಉದಾಹರಣೆಗೆ ಹೆವ್ವಿ ವರ್ಕ್ ಇರುವಂತಹ ಉಡುಗೆಗಳಿಗಾದಲ್ಲಿ ಆದಷ್ಟೂ ಸಿಂಪಲ್ ಆಭರಣಗಳು ಸಾಕು! ಫ್ಯಾಷನ್ ಜ್ಯುವೆಲರಿಗಳನ್ನು ಕೂಡ ಧರಿಸಬಹುದು.
ಉದ್ದ-ಲಂಗ ಹಾಗೂ ಲಂಗ-ದಾವಣಿಯ ಜ್ಯುವೆಲರಿಗಳು
ಈ ಬಗೆಯ ಉಡುಗೆಗಳಿಗೂ ಟ್ರೆಡಿಷನಲ್ ಜ್ಯುವೆಲರಿಗಳು ಸೂಕ್ತ. ಆಂಟಿಕ್, ಟೆಂಪಲ್ ಜ್ಯುವೆಲರಿಗಳು ಈ ಟ್ರೆಡಿಷನಲ್ ಔಟ್‌ಫಿಟ್‌ಗಳಿಗೆ ಚೆನ್ನಾಗಿ ಒಪ್ಪುತ್ತವೆ. ನೆಕ್‌ಲೈನ್‌ಗೆ ತಕ್ಕಂತೆ ಅಗಲವಾದ ಚೋಕರ್ಸ್, ರಾಣಿ ಹಾರ, ಲಕ್ಷ್ಮಿ ಹಾರ, ಬಿಗ್ ಜುಮ್ಕಾ, ಡಾಬು ಎಲ್ಲವನ್ನೂ ಧರಿಸಬಹುದು.
ಜ್ಯುವೆಲರಿಗಳನ್ನು ಮ್ಯಾಚ್ ಮಾಡುವಾಗ ಗಮನಿಸಬೇಕಾದ್ದು
- ಸಾದಾ ಬಾರ್ಡರ್ ರೇಷ್ಮೆ ಸೀರೆಗೆ ಭಾರಿ ಜ್ಯುವೆಲರಿಗಳು ಗ್ರ್ಯಾಂಡ್ ಲುಕ್ ನೀಡುತ್ತವೆ.
- ಪ್ರಿಂಟೆಡ್ ಹಾಗೂ ಹೆವಿ ಡಿಸೈನ್ ಸೀರೆಗೆ ಲೈಟ್‌ವೈಟ್ ಹಾಗೂ ಸಿಂಪಲ್ ಜ್ಯುವೆಲರಿಗಳು ಸೂಕ್ತ.
- ಟ್ರೆಡಿಷನಲ್ ಉಡುಗೆಯ ವಿನ್ಯಾಸದ ಆಧಾರದ ಮೇಲೆ ಆಭರಣ ಧರಿಸಿ.
- ಇಂಡೋ-ವೆಸ್ಟರ್ನ್ ಲುಕ್‌ಗಾದಲ್ಲಿ ಬ್ಲ್ಯಾಕ್ ಮೆಟಲ್ ವೈಟ್ ಮೆಟಲ್ ಅಥವಾ ಆಕ್ಸಡೈಸ್ಡ್ ಜ್ಯುವೆಲರಿ ಓಕೆ.
- ಲಂಗ-ದಾವಣಿಗೆ ಆದಷ್ಟೂ ಟ್ರೆಡಿಷನಲ್ ಜ್ಯುವೆಲರಿ ಧರಿಸಿ.
- ಬಂಗಾರದ್ದನ್ನು ಧರಿಸಲಾಗದಿದ್ದಲ್ಲಿ ಇಮಿಟೇಷನ್ ಜ್ಯುವೆಲರಿಗಳನ್ನು ಧರಿಸಬಹುದು.