ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Saree Blouse Fashion 2026: ಸೀರೆಯ ಅತ್ಯಾಕರ್ಷಕ ಲುಕ್‌ಗಾಗಿ ಪ್ರಿನ್ಸೆಸ್‌ ಕಟ್‌ ಬ್ಲೌಸ್‌ ಧರಿಸಿ

Princess Cut Blouse: ಸೀರೆಯ ಅತ್ಯಾಕರ್ಷಕ ಲುಕ್‌ಗಾಗಿ ಪ್ರಿನ್ಸೆಸ್‌ ಕಟ್‌ ವಿನ್ಯಾಸದ ಸೀರೆ ಬ್ಲೌಸ್‌ ಧರಿಸಿ ಎನ್ನುತ್ತಾರೆ ಡಿಸೈನರ್ಸ್. ಇದು ಸೀರೆಯನ್ನು ಹೈಲೈಟ್‌ ಮಾಡಿ ಅಂದವಾಗಿ ಬಿಂಬಿಸುತ್ತದೆ ಎನ್ನುತ್ತಾರೆ ಅವರು. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಗಳು: ಕೃಷ್ಣಾ ಪ್ರಿಯಾ ನಾಯರ್‌, ನಟಿ
1/5

ಪ್ರಿನ್ಸೆಸ್‌ ಕಟ್‌ ಬ್ಲೌಸ್‌ಗಳು ಮರಳಿವೆ. ನಾರಿಯರ ಸೀರೆಯ ಸಿಂಗಾರಕ್ಕೆ ಸಾಥ್‌ ನೀಡುತ್ತಿವೆ.

2/5

ಅಂದಗಾಣಿಸುವ ಪ್ರಿನ್ಸೆಸ್‌ ಕಟ್‌ ಬ್ಲೌಸ್‌

ಹೌದು, ನಾರಿಯರ ಬ್ಲೌಸ್‌ಗಳನ್ನು ಹಲವಾರು ಡಿಸೈನ್‌ನಲ್ಲಿ ಹಾಗೂ ಕಟ್‌ಗಳಲ್ಲಿ ವಿನ್ಯಾಸಗೊಳಿಸಿ, ಹೊಲಿಯಲಾಗುತ್ತದೆ. ಅವುಗಳಲ್ಲಿ ಪ್ರಿನ್ಸೆಸ್‌ ಕಟ್‌ ವಿನ್ಯಾಸ ಕೂಡ ಒಂದು. ಈ ಡಿಸೈನ್‌ನ ಸೀರೆ ಬ್ಲೌಸ್‌ಗಳನ್ನು ಎಲ್ಲಾ ವರ್ಗದ ಮಾನಿನಿಯರು ಹೊಲಿಸುವುದಿಲ್ಲ. ಬದಲಿಗೆ ಶೇಪ್‌ ಬಯಸುವ ಹಾಗೂ ಅಂದವಾಗಿ ಕಾಣಲು ಬಯಸುವ ಮಾನಿನಿಯರು ಮಾತ್ರ ಈ ಡಿಸೈನ್‌ಗೆ ಪ್ರಾಮುಖ್ಯತೆ ನೀಡುತ್ತಾರೆ ಎನ್ನುತ್ತಾರೆ ಸೀರೆ ಬ್ಲೌಸ್‌ ಡಿಸೈನರ್‌ ರಾಶಿ.

3/5

ಪ್ರಿನ್ಸೆಸ್‌ ಕಟ್‌ ಬ್ಲೌಸ್‌ ವಿಶೇಷತೆ

ಪ್ರಿನ್ಸೆಸ್‌ ಕಟ್‌ ಬ್ಲೌಸ್‌ಗಳು ದೇಹದ ಮೇಲ್ಭಾಗವನ್ನು ನೀಟಾಗಿ ಬಿಂಬಿಸುತ್ತವೆ. ಡಾಟೆಡ್‌ ಲೈನ್‌ಗಳ ಹೊಲಿಗೆಗಳಿಲ್ಲದ ಕಾರಣ ಸೀಮ್‌ಲೆಸ್‌ ಆಗಿರುತ್ತವೆ. ತೆಳುವಾದ ಸೀರೆ ಸೆರಗು ಉಟ್ಟರೂ ಕೂಡ ಲೈನ್‌ಗಳು ಇಲ್ಲದಿರುವ ಕಾರಣ ಅಂದವಾಗಿ ಕಾಣಿಸುತ್ತವೆ. ಇದೇ ಪ್ರಿನ್ಸ್ ಕಟ್‌ ಬ್ಲೌಸ್‌ಗಳ ವಿಶೇಷತೆ ಎನ್ನುತ್ತಾರೆ ಬ್ಲೌಸ್‌ ಡಿಸೈನರ್ಸ್.

4/5

ಪ್ರಿನ್ಸೆಸ್‌ ಕಟ್‌ ಬ್ಲೌಸ್‌ ಜತೆ ಸ್ವೀಟ್ ಹಾರ್ಟ್ ನೆಕ್‌ಲೈನ್‌

ಪ್ರಿನ್ಸೆಸ್‌ ಕಟ್‌ ಬ್ಲೌಸ್‌ ಜತೆ ಇತ್ತೀಚೆಗೆ ಟ್ರೆಂಡಿಯಾಗಿರುವುದು ಸ್ವೀಟ್‌ ಹಾರ್ಟ್ ನೆಕ್‌ಲೈನ್‌. ಹೆಸರೇ ಹೇಳುವಂತೆ, ಹೃದಾಯಕಾರದಲ್ಲಿ ಕಾಣಿಸುವ ನೆಕ್‌ಲೈನ್‌ ಡಿಸೈನ್‌ ಇದು ಎನ್ನಬಹುದು. ಇದು ಈ ಕಟ್‌ಗೆ ಪರ್ಫೆಕ್ಟಾಗಿ ಮ್ಯಾಚ್‌ ಆಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

5/5

ಸೀರೆ ಪ್ರಿಯರಿಗೆ 5 ಟಿಪ್ಸ್

  • ಸೀರೆ ಅತ್ಯಾಕರ್ಷಕವಾಗಿ ಕಾಣಿಸಲು ಈ ಕಟ್‌ಗೆ ಪ್ರಾಮುಖ್ಯತೆ ನೀಡಿ.
  • ಆದಷ್ಟೂ ಬ್ಲೌಸ್‌ ಫಿಟ್ಟಿಂಗ್‌ ಸರಿಯಾಗಿರಲಿ.
  • ಈ ಶೈಲಿಯ ಬ್ಲೌಸ್‌ ಹೊಲಿಸುವಾಗ ಡಿಸೈನ್‌ಗೆ ಆದ್ಯತೆ ನೀಡಿ.
  • ನಾನಾ ಕಾಂಟ್ರಾಸ್ಟ್ ಶೇಡ್‌ಗಳಲ್ಲೂ ಈ ಬ್ಲೌಸ್‌ ವಿನ್ಯಾಸ ಮಾಡಿಸಬಹುದು.
  • ನಿಮ್ಮ ಪರ್ಸಾನಾಲಿಟಿಗೆ ತಕ್ಕಂತೆ ಹೊಲಿಸಿ.

ಶೀಲಾ ಸಿ ಶೆಟ್ಟಿ

View all posts by this author