ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Saree Fashion 2026: ಟಿಶ್ಯೂ ಸಿಲ್ಕ್‌ ಸೀರೆಯಲ್ಲಿ ಸೆಲೆಬ್ರೆಟಿಯಂತೆ ಕಾಣಿಸಲು 5 ಐಡಿಯಾ

Tissue Silk Saree: ಟಿಶ್ಯೂ ಸಿಲ್ಕ್‌ ಸೀರೆಯಲ್ಲಿ ನೀವೂ ಕೂಡ ಸೆಲೆಬ್ರೆಟಿಯಂತೆ ಕಾಣಿಸಬೇಕೇ! ಅದಕ್ಕಾಗಿ ನೀವು ಹೆಚ್ಚೇನೂ ಕಷ್ಟ ಪಡಬೇಕಿಲ್ಲ! ಬದಲಿಗೆ ಒಂದಿಷ್ಟು ಸೀರೆ ಸ್ಟೈಲಿಂಗ್‌ ಐಡಿಯಾಗಳನ್ನು ಫಾಲೋ ಮಾಡಿ ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್‌ಗಳು. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಗಳು: ಸೋಫಿ ಚೌಧರಿ, ನಟಿ
1/5

ಟಿಶ್ಯೂ ಸಿಲ್ಕ್‌ ಸೀರೆಯಲ್ಲಿ ಸೆಲೆಬ್ರೆಟಿ ಲುಕ್‌ ಪಡೆಯುವುದು ತೀರಾ ಸುಲಭ! ಹೌದು, ಅದಕ್ಕಾಗಿ ನೀವು ಹೆಚ್ಚೇನೂ ಕಷ್ಟ ಪಡಬೇಕಿಲ್ಲ! ಬದಲಿಗೆ ಒಂದಿಷ್ಟು ಸೀರೆ ಸ್ಟೈಲಿಂಗ್‌ ಐಡಿಯಾಗಳನ್ನು ಫಾಲೋ ಮಾಡಿದರೇ ಸಾಕು! ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್‌ಗಳು.

ಇತ್ತೀಚೆಗೆ ನಟಿ ಸೋಫಿ ಚೌಧರಿ ಆವಾರ್ಡ್ ಇವೆಂಟ್‌ವೊಂದರಲ್ಲಿ ಉಟ್ಟಿದ್ದ ಟೀಲ್‌ ಬ್ಲ್ಯೂ ಟಿಶ್ಯೂ ಸಿಲ್ಕ್‌ ಸೀರೆ ಮಾನಿನಿಯರನ್ನು ಸೆಳೆದಿದೆ. ಈ ರೀತಿಯ ಲುಕ್‌ ಪಡೆಯಲು ನೀವೂ ಒಂದಿಷ್ಟು ಐಡಿಯಾ ಫಾಲೋ ಮಾಡಿ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್ ರೇಷ್ಮಾ.

2/5

ಅತ್ಯಾಕರ್ಷಕ ಕಲರ್ ಆಯ್ಕೆ ಮಾಡಿ

ಟಿಶ್ಯೂ ಸಿಲ್ಕ್‌ ಸೀರೆಯ ಕಲರ್‌ ನೋಡಿ, ಆಯ್ಕೆ ಮಾಡಿ. ನಿಮ್ಮ ಸ್ಕಿನ್‌ ಟೋನ್‌ಗೆ ಸೂಕ್ತವಾಗುವ ಬಣ್ಣದ್ದನ್ನೇ ಚೂಸ್‌ ಮಾಡಿ. ಅದು ಡಾರ್ಕ್‌ ಆಗಬಹುದು ಅಥವಾ ಲೈಟ್‌ ಕಲರ್‌ನದ್ದಾಗಬಹುದು. ಸೋಫಿ ಲುಕ್‌ ಬೇಕಿದ್ದಲ್ಲಿ ಡಾರ್ಕ್‌ ವರ್ಣದ್ದನ್ನು ಆಯ್ಕೆ ಮಾಡಿ. ಉಟ್ಟುಕೊಳ್ಳಿ.

3/5

ಟಿಶ್ಯೂ ಸಿಲ್ಕ್‌ ಫ್ಯಾಬ್ರಿಕ್‌ ಆಯ್ಕೆ

ಟಿಶ್ಯೂ ಸಿಲ್ಕ್‌ ಸೀರೆಗಳು ಅಗಲವಾಗಿ ಹರಡಿಕೊಳ್ಳುತ್ತವೆ ಎಂದು ಬಹಳಷ್ಟು ಪ್ಲಂಪಿಯಾಗಿರುವ ಮಹಿಳೆಯರು ಅವಾಯ್ಡ್ ಮಾಡುತ್ತಾರೆ. ಹಾಗಾಗಿ ಟಿಶ್ಯೂ ಸಿಲ್ಕ್‌ ಫ್ಯಾಬ್ರಿಕ್‌ ಮೊದಲು ನೋಡಿ, ಆದಷ್ಟೂ ಸಾಫ್ಟ್ ಆಗಿರುವಂತದ್ದನ್ನು ಖರೀದಿಸಿ, ಉಡಿ.

ಬಾರ್ಡರ್‌ ಟಿಶ್ಯೂ ಸಿಲ್ಕ್‌ ಸೀರೆ

ಬಾರ್ಡರ್‌ ಇರುವಂತಹ ಟಿಶ್ಯೂ ಸಿಲ್ಕ್‌ ಸೀರೆ ಉಟ್ಟರೇ, ನಿಮಗೆ ರಾಯಲ್‌ ಇಮೇಜ್‌ ದೊರೆಯುವುದು ಗ್ಯಾರಂಟಿ. ನಿಮ್ಮ ಸೀರೆಗೆ ಬಾರ್ಡರ್‌ ಇಲ್ಲದಿದ್ದಲ್ಲಿ ರೆಡಿಮೇಡ್‌ ಗೋಲ್ಡನ್‌ ಲೇಸ್‌ ಬಾರ್ಡರ್‌ ಡಿಸೈನ್‌ ಮಾಡಿಸಿ, ಹೊಲೆಸಿ.

4/5

ಗ್ಲಾಮರಸ್‌ ಮಿರರ್‌ ಬ್ಲೌಸ್‌

ಡಾರ್ಕ್‌ ಕಲರ್‌ನ ಟಿಶ್ಯೂ ಸಿಲ್ಕ್‌ ಸೀರೆಗೆ ಗೋಲ್ಡನ್‌ ಶೇಡ್‌ನ ಮಿರರ್‌ ವರ್ಕ್‌ ಇರುವಂತಹ ಬ್ಲೌಸ್‌ ಚೂಸ್‌ ಮಾಡಿ ಧರಿಸಿ. ಮಿರರ್‌ ವರ್ಕ್‌ನದ್ದು ಸಿಗದಿದ್ದಲ್ಲಿ, ಆದಷ್ಟೂ ಕಂಪ್ಲೀಟ್‌ ಹ್ಯಾಂಡ್‌ ವರ್ಕ್‌ ಇರುವಂತಹ ಗೋಲ್ಡನ್‌ ಶೇಡ್‌ನದ್ದನ್ನು ಧರಿಸಿ.

5/5

ಮೇಕೋವರ್‌ ಲುಕ್‌ ಫಾಲೋ ಮಾಡಿ

ಆದಷ್ಟೂ ಮೇಕಪ್‌ ಈ ಸೀರೆ ಲುಕ್‌ಗೆ ಸಾಥ್‌ ನೀಡುವಂತಿರಲಿ. ರೆಡ್‌ ಲಿಪ್‌ಸ್ಟಿಕ್‌, ಜತೆಗೆ ಐ ಮೇಕಪ್‌ ಸೌಂದರ್ಯ ಹೆಚ್ಚಿಸುವುದು. ಇನ್ನು ಇದರೊಂದಿಗೆ ಗ್ರ್ಯಾಂಡ್‌ ಜ್ಯುವೆಲರಿ ಕೂಡ ಇಡೀ ಲುಕ್ಕನ್ನು ಹೆಚ್ಚಿಸುವುದು.

ಶೀಲಾ ಸಿ ಶೆಟ್ಟಿ

View all posts by this author