ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Saree Fashion 2026: ಗ್ರ್ಯಾಂಡ್‌ ಬನಾರಸಿ ರೇಷ್ಮೆ ಸೀರೆ ಪ್ರಿಯರಿಗೆ 5 ಸಿಂಪಲ್‌ ಸಲಹೆ

ಗ್ರ್ಯಾಂಡ್‌ ಲುಕ್‌ ನೀಡುವ ಬನಾರಸಿ/ಬನಾರಸ್‌ ರೇಷ್ಮೆ ಸೀರೆಗಳು ಇಂದಿಗೂ ಮಾನಿನಿಯರ ವಾರ್ಡೋಬ್‌ನಲ್ಲಿ ಸ್ಥಾನ ಪಡೆದಿವೆ. ಹಳೆ ಮತ್ತು ಹೊಸ ವಿನ್ಯಾಸಗಳಲ್ಲಿ ಬಿಡುಗಡೆಗೊಳ್ಳುತ್ತಿರುವ ಈ ಸೀರೆಗಳ ಆಯ್ಕೆ ಮತ್ತು ಸ್ಟೈಲಿಂಗ್‌ ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.

ಚಿತ್ರಗಳು: ಶ್ವೇತಾ ತಿವಾರಿ, ನಟಿ
1/5

ಗ್ರ್ಯಾಂಡ್‌ ಬನಾರಸಿ/ಬನಾರಸ್‌ ಸೀರೆಗಳ ಫ್ಯಾಷನ್‌ ನಿನ್ನೆ ಮೊನ್ನೆಯದಲ್ಲ! ರಾಣಿ-ಮಹಾರಾಣಿಯರ ಕಾಲದಿಂದಲೂ ಇದೆ. ಈ ಸೀರೆಗಳು ಕಾಲಕಳೆದಂತೆ ಗಡಿ ದಾಟಿ ನಾನಾ ವರ್ಗದ ಮಾನಿನಿಯರನ್ನು ಸವಾರಿ ಮಾಡುತ್ತಿವೆ. ಇದೀಗ ಒಂದಿಷ್ಟು ಹೊಸತನದೊಂದಿಗೆ ಹಾಗೂ ಹೆರಿಟೇಜ್‌ಗೆ ಸಾಥ್‌ ನೀಡುವಂತಹ ಪುರಾತನ ಕಲಾತ್ಮಕ ವಿನ್ಯಾಸದೊಂದಿಗೆ ಬಿಡುಗಡೆಗೊಳ್ಳುತ್ತಿವೆ.

2/5

ಗ್ರ್ಯಾಂಡ್‌ ಲುಕ್‌ಗಾಗಿ ಬನಾರಸಿ/ಬನಾರಸ್ ಸೀರೆಗಳು

ಕೇವಲ ಮದುವೆಯಂತಹ ಗ್ರ್ಯಾಂಡ್‌ ಸಮಾರಂಭಗಳಲ್ಲಿ ಮಾತ್ರವಲ್ಲ, ಎಲ್ಲಾ ಬಗೆಯ ಕಾರ್ಯಕ್ರಮಗಳಲ್ಲೂ ಇವು ನಾನಾ ಶೈಲಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಗೋಲ್ಡನ್‌ ಜರಿಯಿಂದಿಡಿದು ಇಂಡೋ-ವೆಸ್ಟರ್ನ್‌ ಲುಕ್‌ ನೀಡುತ್ತಿವೆ. ಆದರೂ ಹಳೆಯ ಡಿಸೈನ್‌ಗಳಿಗೆ ಮಾತ್ರ ಇಂದಿಗೂ ಬೇಡಿಕೆ ಕುಂದಿಲ್ಲ ಎನ್ನುತ್ತಾರೆ ಬನಾರಸಿ ಸೀರೆ ವ್ಯಾಪಾರಿಗಳು.

3/5

ಇನ್ನು, ಮಾನಿನಿಯರ ವಾರ್ಡೋಬ್‌ನಲ್ಲಿ ಪ್ರಮುಖ ಸ್ಥಾನ ಪಡೆದಿರುವ ಇವುಗಳಲ್ಲಿ ಅತ್ಯಾಕರ್ಷಕವಾಗಿ ಕಾಣಿಸುವುದು ಹೇಗೆ? ಆಯ್ಕೆ ಮತ್ತು ಸ್ಟೈಲಿಂಗ್‌ ಹೇಗೆ? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

ಮದುವೆ ಸಮಾರಂಭಗಳಿಗೆ ರೆಡ್‌ ಬನಾರಸಿ ರೇಷ್ಮೆ ಸೀರೆ

ಮದುವೆ ಸಮಾರಂಭಗಳಿಗೆ ನಾನಾ ಶೇಡ್‌ನ ರೆಡ್‌ ಬನಾರಸಿ ಸೀರೆಗಳನ್ನು ಆಯ್ಕೆ ಮಾಡಿ ಉಡಬಹುದು. ಈ ಬಣ್ಣ ಹೆಚ್ಚು ಗ್ರ್ಯಾಂಡ್‌ ಲುಕ್‌ ನೀಡುತ್ತದೆ. ಹಾಗಾಗಿ ಈ ಕಲರ್‌ನದ್ದನ್ನೇ ಆಯ್ಕೆ ಮಾಡಿ.

4/5

ಗೋಲ್ಡನ್‌ ಜರಿ ಆಯ್ಕೆ ಸೂಕ್ತ

ರಿಚ್‌ ಲುಕ್‌ ಬೇಕಿದ್ದವರು ಆದಷ್ಟೂ ಗೋಲ್ಡನ್‌ ಜರಿ, ಬ್ರೋಕೆಡ್‌ ವಿನ್ಯಾಸ, ಗ್ರ್ಯಾಂಡ್‌ ಪಲ್ಲು ಇರುವಂತವನ್ನೇ ಆಯ್ಕೆ ಮಾಡಿ ಉಟ್ಟುಕೊಳ್ಳಿ.

ಇಂಡೋ-ವೆಸ್ಟರ್ನ್‌ ಲುಕ್‌ಗಾಗಿ ಗ್ಲಾಮರಸ್‌ ಬ್ಲೌಸ್‌

ಈ ಸೀರೆಯಲ್ಲಿ ಇಂಡೋ-ವೆಸ್ಟರ್ನ್‌ ಸ್ಟೈಲಿಂಗ್‌ಗಾಗಿ ಕಾರ್ಸೆಟ್‌, ಹಾಲ್ಟರ್‌ ನೆಕ್‌ಲೈನ್‌, ಕ್ರಾಪ್‌ ಟಾಪ್‌, ಸ್ಲಿವ್‌ಲೆಸ್‌ನಂತಹ ಗ್ಲಾಮರಸ್‌ ಡಿಸೈನ್‌ನ ಬ್ಲೌಸ್‌ ಆಯ್ಕೆ ಮಾಡಿ, ಧರಿಸಿ.

5/5

ಗೋಲ್ಡ್ ಜ್ಯುವೆಲರಿ ಮ್ಯಾಚ್‌ ಮಾಡಿ

ಟ್ರೆಡಿಷನಲ್‌ ಲುಕ್‌ಗಾಗಿ ಗೋಲ್ಡ್ ಜ್ಯುವೆಲರಿ ಅಥವಾ ಇಮಿಟೇಷನ್‌ ಜ್ಯುವೆಲರಿ ಮ್ಯಾಚ್‌ ಮಾಡಿ, ಧರಿಸಬಹುದು.

ಸೀರೆ ಕಲರ್‌ ಹಾಗೂ ಡಿಸೈನ್‌ಗೆ ತಕ್ಕಂತೆ ಮೇಕಪ್‌

ಬನಾರಸಿ ಸೀರೆಗೆ ತಕ್ಕಂತೆ ಮೇಕಪ್‌ ಆಯ್ಕೆ ಮಾಡುವುದು ಸೂಕ್ತ. ಹೇರ್‌ಸ್ಟೈಲ್‌ ಕೂಡ ಮ್ಯಾಚ್‌ ಆಗಬೇಕು. ಹಾಗಾಗಿ ಉಡುವ ಮೊದಲೇ ಎಲ್ಲವನ್ನೂ ಪ್ಲಾನ್‌ ಮಾಡಿಕೊಳ್ಳಿ.

ಶೀಲಾ ಸಿ ಶೆಟ್ಟಿ

View all posts by this author