ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Saree Fashion 2026: ಮಾನಿನಿಯರ ಮನಗೆಲ್ಲುತ್ತಿರುವ ವೈವಿಧ್ಯಮಯ ಕಲಾಂಕಾರಿ ಸೀರೆಗಳು

ಇತ್ತೀಚೆಗೆ ಕಲಾಂಕಾರಿ ವಿನ್ಯಾಸದ ಸೀರೆಗಳು ನಾನಾ ಫ್ಯಾಬ್ರಿಕ್‌ನಲ್ಲಿ ಹಾಗೂ ಲೆಕ್ಕವಿಲ್ಲದಷ್ಟು ಪ್ರಿಂಟ್ಸ್‌ನಲ್ಲಿ ಮೂಡಿಬರುತ್ತಿವೆ. ಕಾಟನ್‌, ಸಿಲ್ಕ್‌, ಸೆಮಿ ಸಿಲ್ಕ್‌ ಹೀಗೆ ನಾನಾ ಬಗೆಯ ಫ್ಯಾಬ್ರಿಕ್‌ನಲ್ಲಿ ಪ್ರಿಂಟ್ಸ್‌ನಲ್ಲಿ ದೊರೆಯುತ್ತಿರುವ ಈ ಸೀರೆಗಳು ಇದೀಗ ಸಾಮಾನ್ಯ ಮಹಿಳೆಯರನ್ನು ಸವಾರಿ ಮಾಡತೊಡಗಿವೆ. ಬೇಡಿಕೆ ಹೆಚ್ಚಿಸಿಕೊಂಡಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಶ್ರೀದೇವಿ ವಿಜಯಕುಮಾರ್‌, ನಟಿ
1/5

ಕಲಾಂಕಾರಿ ಸೀರೆಗೆ ಹೆಚ್ಚಿದ ಬೇಡಿಕೆ

ಕಲಾಂಕಾರಿ ಸೀರೆಗಳು ಇದೀಗ ಮಾನಿನಿಯರ ವಾರ್ಡ್‌ರೋಬ್‌ನಲ್ಲಿ ಸ್ಥಾನ ಪಡೆದುಕೊಂಡಿವೆ. ಹೌದು, ಇತ್ತೀಚೆಗೆ ಈ ಕಲಾಂಕಾರಿ ವಿನ್ಯಾಸದ ಸೀರೆಗಳು ನಾನಾ ಫ್ಯಾಬ್ರಿಕ್‌ನಲ್ಲಿ ಹಾಗೂ ಲೆಕ್ಕವಿಲ್ಲದಷ್ಟು ಪ್ರಿಂಟ್ಸ್‌ನಲ್ಲಿ ಮೂಡಿ ಬರುತ್ತಿವೆ. ಕಾಟನ್‌, ಸಿಲ್ಕ್‌, ಸೆಮಿ ಸಿಲ್ಕ್‌ ಹೀಗೆ ನಾನಾ ಬಗೆಯ ಫ್ಯಾಬ್ರಿಕ್‌ನಲ್ಲಿ ಪ್ರಿಂಟ್ಸ್‌ನಲ್ಲಿ ದೊರೆಯುತ್ತಿರುವ ಈ ಸೀರೆಗಳು ಇದೀಗ ಸಾಮಾನ್ಯ ಮಹಿಳೆಯರನ್ನು ಸವಾರಿ ಮಾಡತೊಡಗಿವೆ. ಬೇಡಿಕೆ ಹೆಚ್ಚಿಸಿಕೊಂಡಿವೆ. ಇದಕ್ಕೆ ಪೂರಕ ಎಂಬಂತೆ, ಬಹುಭಾಷಾ ನಟಿ ಶ್ರೀದೇವಿ ವಿಜಯಕುಮಾರ್‌ ಇತ್ತೀಚೆಗೆ ಉಟ್ಟಿದ್ದ ಸೀರೆ ಕೂಡ ಸದ್ಯ ಬೇಡಿಕೆ ಹೆಚ್ಚಿಸಿಕೊಂಡಿದೆ ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್‌ಗಳು.

2/5

ಹ್ಯಾಂಡ್‌ ಪ್ರಿಂಟೆಡ್‌ - ಪೆನ್‌ ಕಲಾಂಕಾರಿ ಸೀರೆಗಳು

ಕಥೆ ಹೇಳುವಂತಹ ಪ್ರಿಂಟ್ಸ್, ನವಿಲಿನ ಚಿತ್ತಾರ ಹಾಗೂ ಹೂ ಬಳ್ಳಿಗಳ ಚಿತ್ತಾರವನ್ನು ಒಳಗೊಂಡ ಹ್ಯಾಂಡ್‌ ಪ್ರಿಂಟ್ಸ್ ಹಾಗೂ ಪೆನ್‌ ಕಲಾಂಕಾರಿ ಸೀರೆಗಳು, ಈ ಸೀಸನ್‌ನಲ್ಲಿ ಶುದ್ಧ ಸಿಲ್ಕ್‌ ಹಾಗೂ ಸೆಮಿ ಸಿಲ್ಕ್‌ ಹಾಗೂ ಕಾಟನ್‌ನಲ್ಲಿ ಪ್ರಚಲಿತದಲ್ಲಿವೆ. ಇದೀಗ ಕಲಾಂಕಾರಿ ಸೀರೆಗಳು ಲೆನಿನ್‌, ಟುಸ್ಸಾರ್‌, ಕಾಟನ್‌ ಹಾಗೂ ಮೊದಾಲ್‌ ಸಿಲ್ಕ್‌, ಬಾಂದನಿ ಪ್ರಿಂಟ್ಸ್ ಜತೆ ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯ ಮಿಕ್ಸ್ ಮ್ಯಾಚ್‌ ಫ್ಯಾಬ್ರಿಕ್‌ ಹಾಗೂ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬಂದಿವೆ.

3/5

ಕಂಪ್ಲೀಟ್‌ ಕಲಾಂಕಾರಿ ಸೀರೆಯ ಜಾದೂ

ಕಂಪ್ಲೀಟ್‌ ಕಲಾಂಕಾರಿ ಡಿಸೈನ್‌ನಲ್ಲಿರುವಂತಹ ಸೀರೆಗಳು ಈ ಸೀಸನ್‌ನಲ್ಲಿ ಸಾಕಷ್ಟು ಬಣ್ಣಗಳಲ್ಲಿ ದೊರಕುತ್ತಿವೆ.

4/5

ಟ್ರೆಡಿಷನಲ್‌ ಲುಕ್‌ಗಾಗಿ ಬಾರ್ಡರ್‌ ಕಲಾಂಕಾರಿ ಸೀರೆ

ಎರಡೂ ಕಡೆ ನಾನಾ ಬಗೆಯ ಬಾರ್ಡರ್‌ ಇರುವಂತಹ ಕಲಾಂಕಾರಿ ಸೀರೆಗಳು ಟ್ರೆಡಿಷನಲ್‌ ಲುಕ್‌ ಇಷ್ಟಪಡುವ ಮಾನಿನಿಯರಿಗೆ ಪ್ರಿಯವಾಗಿವೆ. ಇವುಗಳಲ್ಲಂತೂ ಲೆಕ್ಕವಿಲ್ಲದಷ್ಟು ಕಲರ್‌ನವು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

5/5

2ಡಿ-ತ್ರಿ ಡಿ ಕಲಾಂಕಾರಿ ಪ್ರಿಂಟ್ಸ್

2 ಡಿ ಹಾಗೂ ತ್ರಿಡಿ ಸಿಲ್ಕ್‌ ಹಾಗೂ ಸೆಮಿ ಸಿಲ್ಕ್‌ ಸೀರೆಗಳಲ್ಲಿ ಕಲಾಂಕಾರಿ ಪ್ರಿಂಟ್ಸ್‌ನವು ಆಗಮಿಸಿದ್ದು, ಸಖತ್‌ ಪಾಪುಲರ್‌ ಆಗಿವೆ. ಆನ್‌ಲೈನ್‌ ಹಾಗೂ ಆಫ್‌ಲೈನ್‌ ಶಾಪ್‌ಗಳಲ್ಲಿ ಕಡ್ಲೆಪುರಿಯಂತೆ ಬಿಕರಿಯಾಗುತ್ತಿವೆ ಎನ್ನುತ್ತಾರೆ ಮಾರಾಟಗಾರರು.

ಶೀಲಾ ಸಿ ಶೆಟ್ಟಿ

View all posts by this author