ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Saree Fashion 2026: ಹೊಸ ವಿನ್ಯಾಸದಲ್ಲಿ ಮರಳಿದ ಟ್ರೆಡಿಷನಲ್‌ ಲುಕ್‌ ನೀಡುವ ಬಾಂದನಿ ಸೀರೆಗಳು

Bandhani Sarees: ಬಾಂದನಿ ಸೀರೆಗಳು ನಯಾ ಲುಕ್‌ನಲ್ಲಿ ಮರಳಿವೆ. ಟ್ರೆಡಿಷನಲ್‌ ಲುಕ್‌ ನೀಡುತ್ತಿದ್ದ ಬಾಂದನಿ ಸೀರೆಗಳು ಇದೀಗ ಹೊಸ ವಿನ್ಯಾಸದಲ್ಲಿ ಹಾಗೂ ಮಾನಿನಿಯರ ಅಭಿಲಾಷೆಗೆ ತಕ್ಕಂತೆ ನಯಾ ವಿನ್ಯಾಸದಲ್ಲಿ ಕಲರ್‌ಗಳಲ್ಲಿ ಕಾಣಿಸಿಕೊಂಡಿವೆ. ಇದ್ಯಾವ ಬಗೆಯ ಸೀರೆ? ಆಯ್ಕೆ ಮತ್ತು ಸ್ಟೈಲಿಂಗ್‌ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ದೀಪಿಕಾ ಸಿಂಗ್‌, ನಟಿ
1/5

ಬಾಂದನಿ ಸೀರೆಗಳು (Bandhani Sarees) ನಯಾ ಲುಕ್‌ನಲ್ಲಿ ಮರಳಿವೆ. ಹೌದು, ಟ್ರೆಡಿಷನಲ್‌ ಲುಕ್‌ ನೀಡುತ್ತಿದ್ದ ಬಾಂದನಿ ಸೀರೆಗಳು ಇದೀಗ ಹೊಸ ವಿನ್ಯಾಸದಲ್ಲಿ ಹಾಗೂ ಮಾನಿನಿಯರ ಅಭಿಲಾಷೆಗೆ ತಕ್ಕಂತೆ ನಯಾ ವಿನ್ಯಾಸದಲ್ಲಿ ಕಲರ್‌ಗಳಲ್ಲಿ ಕಾಣಿಸಿಕೊಂಡಿವೆ. ಗಡಿದಾಟಿ ಎಲ್ಲಾ ಸಮುದಾಯದ ಮಹಿಳೆಯರನ್ನು ನಿಧಾನವಾಗಿ ಆವರಿಸಿಕೊಳ್ಳುತ್ತಿವೆ.

2/5

ದೀಪಿಕಾ ಸಿಂಗ್‌ ಬಾಂದನಿ ಸೀರೆ ವೈರಲ್‌

ಇದಕ್ಕೆ ಪೂರಕ ಎಂಬಂತೆ, ಟೆಲಿವುಡ್‌ನ ಖ್ಯಾತ ನಟಿ ದೀಪಿಕಾ ಸಿಂಗ್‌ ಉಟ್ಟಿದ್ದ ಬಾಂದನಿ ಸೀರೆ ಇದೀಗ ಮತ್ತೊಮ್ಮೆ ವೈರಲ್‌ ಆಗಿದೆ. ಟ್ರೆಂಡ್‌ ಸೆಟ್‌ ಮಾಡಿದೆ.

3/5

ದೀಪಿಕಾ ಉಟ್ಟಿದ್ದ ಬಾಂದನಿ ಸೀರೆ ವಿಶೇಷತೆ

ಹೆವ್ವಿ ಗೋಟಾ ಪಟ್ಟಿ ಹಾಗೂ ಜರಿ ವರ್ಕ್‌ ಹೊಂದಿರುವ ಬಾಂದನಿ ಸೀರೆಗೆ ನಟಿ ದೀಪಿಕಾ ಸಿಂಗ್‌ ಕಾಂಟ್ರಸ್ಟ್ ಶೇಡ್‌ನ ವರ್ಕ್‌ ಇರುವಂತಹ ಗ್ರೀನ್‌ ಕಲರ್‌ನ ಡಿಸೈನರ್‌ ಬ್ಲೌಸ್‌ ಧರಿಸಿದ್ದರು. ಅವರು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ ನಂತರ ಮತ್ತೊಮ್ಮೆ ಬಾಂದನಿ ಸೀರೆಗೆ ಡಿಮ್ಯಾಂಡ್‌ ಹೆಚ್ಚಾಗತೊಡಗಿತು. ಆನ್‌ಲೈನ್‌ನಲ್ಲಿ ಸೀರೆಯ ಹುಡುಕಾಟ ನಡೆಸುವವರ ಸಂಖ್ಯೆ ಹೆಚ್ಚಾಯಿತು. ಒಟ್ನಲ್ಲಿ, ನಟಿಯೊಬ್ಬರು ಧರಿಸಿ ಫೋಟೋಶೂಟ್‌ನಲ್ಲಿ ಕಾಣಿಸಿಕೊಂಡ ನಂತರ ಬಾಂದನಿ ಸೀರೆ ಮತ್ತೊಮ್ಮೆ ಸೀರೆಲೋಕದಲ್ಲಿ ಸುದ್ದಿಯಾಗುವುದರೊಂದಿಗೆ ಬೇಡಿಕೆ ಹೆಚ್ಚಿಸಿಕೊಂಡಿತು ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್‌ಗಳು.

4/5

ಬಾಂದನಿ ಸೀರೆಯ ಆಯ್ಕೆ ಹೀಗಿರಲಿ

  • ಬಾಂದನಿ ಸೀರೆಯು ಟ್ರೆಡಿಷನಲ್‌ ಲುಕ್‌ ನೀಡುವುದರಿಂದ ಆದಷ್ಟೂ ಈ ಲುಕ್‌ಗೆ ಸಾಥ್‌ ನೀಡುವಂತಹ ಕೆಂಪು, ಹಸಿರು ಹಾಗೂ ಹಳದಿ ಕಲರ್‌ನವನ್ನು ಆಯ್ಕೆ ಮಾಡಿ.
  • ಒರಿಜಿನಲ್‌ ಬಾಂದನಿ ಸೀರೆಯನ್ನು ಕನ್ಫರ್ಮ್‌ ಮಾಡಿಕೊಂಡು ಕೊಳ್ಳಿ.
  • ಜಾರ್ಜೆಟ್‌, ಶಿಫಾನ್‌ ಹಾಗೂ ಸಿಲ್ಕ್‌ನಲ್ಲೂ ಇದೀಗ ಬಾಂದನಿ ಟೈ ಅಂಡ್‌ ಡೈ ಸೀರೆಗಳು ದೊರಕುತ್ತವೆ.
5/5

ಬಾಂದನಿ ಸ್ಟೈಲಿಂಗ್‌ ಹೀಗಿರಲಿ

  • ಟ್ರೆಡಿಷನಲ್ ಮೇಕಪ್‌ ಮಾಡಿ.
  • ಜ್ಯುವೆಲರಿಗಳು ಕೂಡ ಟ್ರೆಡಿಷನಲ್‌ ಲುಕ್‌ ನೀಡುವಂತದ್ದಾಗಿರಲಿ.
  • ಹಣೆಗೆ ಬಿಂದಿಯನ್ನಿರಿಸಿ.
  • ಸೀರೆಯ ಡ್ರೇಪಿಂಗ್‌ ಅತ್ಯಾಕರ್ಷಕವಾಗಿರಲಿ.

ಶೀಲಾ ಸಿ ಶೆಟ್ಟಿ

View all posts by this author