ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Saree Fashion 2026: ಯುವತಿಯರನ್ನು ಸೆಳೆದ ತಿಳಿ ವರ್ಣದ ಜಾಮ್ದಾನಿ ಸೀರೆಗಳು

ಸಾಫ್ಟ್‌ ಹಾಗೂ ಕಂಫರ್ಟಬಲ್‌ ಆಗಿರುವ ಜಾಮ್ದಾನಿ ಸೀರೆಗಳು ಯುವತಿಯರನ್ನು ಸೆಳೆದಿವೆ. ಮೃದುವಾದ ಮಸ್ಲಿನ್‌ ಫ್ಯಾಬ್ರಿಕ್‌ ಹೊಂದಿರುವ ಈ ಸೀರೆಗಳು ಉಡಲು ಕಂಫರ್ಟಬಲ್‌ ಫೀಲ್‌ ನೀಡುವುದು ಮಾತ್ರವಲ್ಲ, ನೋಡಲು ಆಕರ್ಷಕವಾಗಿ ಕಾಣಿಸುತ್ತವೆ. ಇದ್ಯಾವ ಬಗೆಯ ಸೀರೆ? ಆಯ್ಕೆ, ನಿರ್ವಹಣೆ ಹಾಗೂ ಸ್ಟೈಲಿಂಗ್‌ ಹೇಗೆ? ಈ ಕುರಿತಂತೆ ಸೀರೆ ಎಕ್ಸ್ಪರ್ಟ್ ಸಿಂಪಲ್ಲಾಗಿ ವಿವರಿಸಿದ್ದಾರೆ.

ಚಿತ್ರಗಳು : ಸಿನ್ಹಾ ಸಹಾ ಮಿಮ್‌, ನಟಿ
1/5

ತಿಳಿ ವರ್ಣದ ಜಾಮ್ದಾನಿ ಸೀರೆಗಳು (Jamdani Saree) ಇತ್ತೀಚೆಗೆ ಯುವತಿಯರನ್ನು ಆವರಿಸಿಕೊಳ್ಳತೊಡಗಿವೆ. ಹೌದು, ಮೊದಲೆಲ್ಲಾ ಒಂದಿಷ್ಟು ಡಾರ್ಕ್‌ ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ, ಜಾಮ್‌ದಾನಿ ಸೀರೆಗಳು ಇದೀಗ ಪ್ರಯೋಗಾತ್ಮಕ ತಿಳಿ ವರ್ಣಗಳಲ್ಲಿ ಲಗ್ಗೆ ಇಟ್ಟಿವೆ. ಅವುಗಳಲ್ಲಿ ನಾನಾ ಬಗೆಯ ಲೈಟ್‌ ಶೇಡ್‌ನ ಪಿಂಕ್‌, ಲೈಮ್‌ ಗ್ರೀನ್‌, ಯೆಲ್ಲೋ, ನಿಯಾನ್‌ ಗ್ರೀನ್‌, ಸ್ಕೈ ಬ್ಲ್ಯೂ, ಪೀಚ್‌ ಕಲರ್‌ನವು ಅತಿ ಹೆಚ್ಚು ಚಾಲ್ತಿಯಲ್ಲಿವೆ. ಪರಿಣಾಮ, ಈ ಜನರೇಷನ್‌ ಯುವತಿಯರೂ ಕೂಡ ಈ ಬಗೆಯ ಸೀರೆಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದಾರೆ.

2/5

ಸಿನ್ಹಾ ಸಹಾ ಉಟ್ಟ ಪಿಂಕ್‌ ಜಮ್ದಾನಿ ಸೀರೆ:

ಇನ್ನು, ನಟಿ ಸಿನ್ಹಾ ಸಹಾ ಉಟ್ಟಿದ್ದ, ಲೈಟ್‌ ಗುಲಾಬಿ ವರ್ಣದ ಜಾಮ್ದಾನಿ ಕಾಟನ್‌ ಸೀರೆಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹಾಗೂ ಸೀರೆ ಎಕ್ಸ್ಪರ್ಟ್ಸ್ ವ್ಲಾಗ್‌ಗಳಲ್ಲಿ ಹರಿದಾಡುತ್ತಿದ್ದು, ಸೀರೆ ಪ್ರಿಯರನ್ನು ಸೆಳೆದಿವೆ.

3/5

ಜಾಮ್ದಾನಿ ಸೀರೆಗಳ ವಿಶೇ‍ಷತೆ :

ಮೃದುವಾದ ಮಸ್ಲಿನ್‌ ಫ್ಯಾಬ್ರಿಕ್‌ ಹೊಂದಿರುವ ಈ ಸೀರೆಗಳು ಉಡಲು ಕಂಫರ್ಟಬಲ್‌ ಫೀಲ್‌ ನೀಡುವುದು ಮಾತ್ರವಲ್ಲ, ನೋಡಲು ಆಕರ್ಷಕವಾಗಿ ಕಾಣಿಸುತ್ತವೆ. ಜೆಮೆಟ್ರಿಕ್‌ ಹಾಗೂ ಫ್ಲೋರಲ್‌ ಮೊಟಿಫ್‌ ಹೊಂದಿರುತ್ತವೆ. ಕೈಮಗ್ಗದ ಸೀರೆಗಳಾಗಿರುವ ಇವು ಆರ್ಟಿಸಾನ್‌ಗಳ ಸೂಕ್ಷ್ಮ ಕಲಾತ್ಮಕ ಡಿಸೈನ್‌ಗಳನ್ನು ಹೊಂದಿರುತ್ತವೆ. ಅಂದಹಾಗೆ, ಇವು ಮೂಲತಃ ಬಂಗಾಳದ ಸೀರೆಗಳು. ಪರ್ಶಿಯನ್‌ ಹೆಸರು ಹೊಂದಿದ್ದು, ಮೊಗಲರ ಕಾಲದಿಂದಲೂ ಪ್ರಚಲಿತದಲ್ಲಿವೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್ಪರ್ಟ್ ಮಿಂಚು.

4/5

ಜಾಮ್ದಾನಿ ಸೀರೆಗಳ ಆಯ್ಕೆ :

ಅಲ್ಲದೇ, ಜಾಮ್ದಾನಿ ಸೀರೆಗಳು ತೀರಾ ಸಾಫ್ಟ್ ಹಾಗೂ ಲೈಟ್‌ವೈಟ್‌ ಆಗಿರುವುದರಿಂದ ಇವನ್ನು ಯಾವಾಗ ಬೇಕಾದರೂ ಉಡಬಹುದು.

ಜಾಮ್ದಾನಿ ಸೀರೆಗಳ ನಿರ್ವಹಣೆ :

ಈ ಸೀರೆಗಳನ್ನು ಹ್ಯಾಂಡ್‌ವಾಶ್‌ ಮಾತ್ರ ಮಾಡಬೇಕು. ಹೆಚ್ಚು ಉಜ್ಜಬಾರದು. ಮುದುರಿ ಹೋಗಬಹುದು. ಹೆಚ್ಚು ಬಿಸಿಲಲ್ಲೂ ಒಣಗಿಸಬಾರದು.

5/5

ಜಾಮ್ದಾನಿ ಸೀರೆಗಳ ಸ್ಟೈಲಿಂಗ್‌ :

  • ಇಂಡೋ-ವೆಸ್ಟರ್ನ್‌ ಲುಕ್‌ ನೀಡಲು ಈ ಸೀರೆಗೆ ನಾನಾ ಬಗೆಯ ಬ್ಲೌಸ್‌ ಬಳಸಬಹುದು
  • ಎಲಿಗೆಂಟ್‌ ಲುಕ್‌ ನೀಡಲು ಈ ಸೀರೆ ಸಹಕಾರಿ.
  • ಸೀರೆಯ ಸಿಂಪಲ್‌ ಲುಕ್‌ ಕೂಡ ಆಕರ್ಷಕವಾಗಿ ಬಿಂಬಿಸುತ್ತದೆ.

ಶೀಲಾ ಸಿ ಶೆಟ್ಟಿ

View all posts by this author