ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Saree Fashion 2026: ವಿಂಟೇಜ್‌ ಲುಕ್‌ ನೀಡುವ ಚೆಕ್ಸ್ ಸಿಲ್ಕ್‌ ಸೀರೆಗಳು

ವಿಂಟೇಜ್‌ ಲುಕ್‌ ನೀಡುವ ಜೆಮೆಟ್ರಿಕ್‌ ವಿನ್ಯಾಸದ ಚೆಕ್ಸ್ ಸಿಲ್ಕ್ ಸೀರೆಗಳು ಮರಳಿ ಟ್ರೆಂಡಿಯಾಗಿವೆ. ಉಟ್ಟಾಗ ಮಾನಿನಿಯರಿಗೆ ವಿಂಟೇಜ್‌ ಲುಕ್‌ ನೀಡುವಂತಹ ನಾನಾ ಬಗೆಯ ಜೆಮೆಟ್ರಿಕ್‌ ವಿನ್ಯಾಸದ ಚೆಕ್ಸ್ ಸಿಲ್ಕ್ ಸೀರೆಗಳು ಮರಳಿದ್ದು, ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ, ಪ್ರಿಂಟ್ಸ್‌ನಲ್ಲಿ, ಬಾರ್ಡರ್‌ ಜತೆಗೆ ಕಾಣಿಸಿಕೊಂಡು ಟ್ರೆಂಡಿಯಾಗಿವೆ. ಯಾವ್ಯಾವ ಬಗೆಯವು ಮರಳಿವೆ? ಮೇಕೋವರ್‌ ಹೇಗೆ? ಇಲ್ಲಿದೆ ವಿವರ.

ಚಿತ್ರಗಳು: ನಮಿತಾ ಪ್ರಮೋದ್‌, ನಟಿ
1/5

ಚೆಕ್ಸ್ ಪ್ರಿಂಟೆಡ್‌ ಹ್ಯಾಂಡ್ಲೂಮ್‌ ಸಿಲ್ಕ್ ಸೀರೆಗಳು ಮರಳಿವೆ. ಹೌದು, ಉಟ್ಟಾಗ ಮಾನಿನಿಯರಿಗೆ ವಿಂಟೇಜ್‌ ಲುಕ್‌ ನೀಡುವಂತಹ ನಾನಾ ಬಗೆಯ ಜೆಮೆಟ್ರಿಕ್‌ ವಿನ್ಯಾಸದ ಚೆಕ್ಸ್ ಸಿಲ್ಕ್ ಸೀರೆಗಳು ಮರಳಿದ್ದು, ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ, ಪ್ರಿಂಟ್ಸ್‌ನಲ್ಲಿ, ಬಾರ್ಡರ್‌ ಜತೆಗೆ ಕಾಣಿಸಿಕೊಂಡು ಟ್ರೆಂಡಿಯಾಗಿವೆ.

2/5

ನಮಿತಾ ಪ್ರಮೋದ್‌ ಚೆಕ್ಸ್ ಸಿಲ್ಕ್ ಸೀರೆ

ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ನಮ್ಮ ದೇಸಿ ಬ್ರಾಂಡ್‌ನ ಚೆಕ್ಸ್ ಸಿಲ್ಕ್‌ ಸೀರೆಯಲ್ಲಿ ನಟಿ ನಮಿತಾ ಪ್ರಮೋದ್‌ ಕೂಡ ಅತ್ಯಾಕರ್ಷಕವಾಗಿ ಕಾಣಿಸಿಕೊಂಡು ಮಾನಿನಿಯರ ಮನ ಗೆದ್ದಿದ್ದರು. ಸಾಮಾನ್ಯ ಮಹಿಳೆಯರು ಕೂಡ ಚೆಕ್ಸ್ ಸೀರೆಯಲ್ಲಿ ಅವರಂತೆಯೇ ಕಾಣಿಸಿಕೊಳ್ಳಬಹುದು. ಅದಕ್ಕಾಗಿ ಒಂದಿಷ್ಟು ಮೇಕೋವರ್‌ ಟಿಪ್ಸ್ ಫಾಲೋ ಮಾಡಬೇಕು ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ಸ್. ಈ ಕುರಿತಂತೆ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ.

ಚೆಕ್ಸ್ ಆಕಾರದ ಅನುಗುಣವಾಗಿ ಸ್ಟೈಲಿಂಗ್‌

ಕೆಲವೊಂದು ಚೆಕ್ಸ್ ಪ್ಯಾಟರ್ನ್‌ ನಾನಾ ಬಗೆಯಲ್ಲಿರುತ್ತವೆ. ಕೆಲವು ಚಿಕ್ಕದಾಗಿದ್ದರೇ ಮತ್ತೇ ಕೆಲವು ದೊಡ್ಡದಾಗಿರುತ್ತವೆ. ಇನ್ನು ಕೆಲವು ಬೇರೆ ರೀತಿಯಲ್ಲಿರುತ್ತವೆ. ಸೀರೆಯ ಈ ಚೆಕ್ಸ್ ಡಿಸೈನ್‌ನ ಅನುಗುಣವಾಗಿ ಆಕ್ಸೆಸರೀಸ್‌, ಮೇಕೋವರ್‌ ಮಾಡಬೇಕು.

3/5

ಬ್ಲೌಸ್ ಡಿಸೈನ್‌ ಹೀಗಿರಲಿ

ಚೆಕ್ಸ್ ಸಿಲ್ಕ್‌ ಸೀರೆಗಳು ಎದ್ದು ಕಾಣಿಸುವುದರಿಂದ ಬ್ಲೌಸ್‌ ಆದಷ್ಟೂ ಸಿಂಪಲ್‌ ಆಗಿರಲಿ. ಡಿಸೈನ್‌ ಇದ್ದರೂ ಕೂಡ ಎಲಿಗೆಂಟ್‌ ಲುಕ್‌ ನೀಡುವಂತಿರಲಿ. ಹೆಚ್ಚು ವಿನ್ಯಾಸ ಬೇಡ! ಆದಷ್ಟೂ ಸಾಲಿಡ್‌ ಕಲರ್‌ ಇರುವಂತದ್ದನ್ನು ಆಯ್ಕೆ ಮಾಡಿ. ನೆಕ್‌ಲೈನ್‌ ಕೂಡ ಲುಕ್‌ಗೆ ತಕ್ಕಂತೆ ನಿರ್ಧರಿಸಿ, ಹೊಲಿಸಬೇಕು.

4/5

ಜ್ಯುವೆಲರಿ ಮ್ಯಾಚಿಂಗ್‌

ಚೆಕ್ಸ್ ಸಿಲ್ಕ್‌ ಸೀರೆಗೆ ಧರಿಸುವ ಜ್ಯುವೆಲರಿ ಆದಷ್ಟೂ ಗೋಲ್ಡ್ ಪಾಲಿಶ್ಡ್ ಅಥವಾ ಬಂಗಾರದ್ದಾಗಿರಬೇಕು. ಗ್ರ್ಯಾಂಡ್‌ ಲುಕ್‌ ಬೇಕಿದ್ದಲ್ಲಿ ಲಾಂಗ್‌ ಹಾರ ಧರಿಸಬಹುದು. ಟ್ರೆಡಿಷನಲ್‌ ಲುಕ್‌ಗಾಗಿ ಜುಮ್ಕಾ, ಕಡಗ ಅಥವಾ ಬಳೆಗಳನ್ನು ಧರಿಸಬಹುದು.

ಹಣೆಗಿರಲಿ ಬಂಗಾಳಿ ಬಿಂದಿ

ಈ ಚೆಕ್ಸ್ ಸೀರೆಗಳನ್ನು ಧರಿಸಿದಾಗ ಹಣೆಗೆ ಸಾದಾ ಬಂಗಾಳಿ ಕಲರ್‌ ಬಿಂದಿಗಳನ್ನು ಇರಿಸಿ. ಇವು ಮನಮೋಹಕವಾಗಿ ಬಿಂಬಿಸುತ್ತವೆ.

5/5

ಮೇಕೋವರ್‌ ಟ್ರೆಡಿಷನಲ್‌ ಆಗಿರಲಿ

ವಿಂಟೇಜ್‌ ಲುಕ್‌ ನೀಡಲು ಆದಷ್ಟೂ ಟ್ರೆಡಿಷನಲ್‌ ಲುಕ್‌ ನೀಡುವ ಮೇಕಪ್‌ ಮಾಡಿ. ಕಣ್ಣಿಗೆ ಕಾಡಿಗೆ, ಐ ಲೈನರ್‌ ಹಚ್ಚಿ. ಕಂಪ್ಲೀಟ್‌ ಮೇಕೋವರ್‌ ಟ್ರೆಡಿಷನಲ್‌ ಆಗಿರಬೇಕು.

ಶೀಲಾ ಸಿ ಶೆಟ್ಟಿ

View all posts by this author