Saree Fashion 2026: ವೈಬ್ರೆಂಟ್ ಕಲರ್‌ಗಳಲ್ಲೂ ಬಂತು ಜಾರ್ಜೆಟ್ ಸೀರೆಗಳು
Georgette Sarees: ಜಾರ್ಜೆಟ್ ಸೀರೆಗಳು ಇದೀಗ ವೈಬ್ರೆಂಟ್ ಶೇಡ್‌ಗಳಲ್ಲೂ ಬಿಡುಗಡೆಗೊಂಡಿವೆ. ಈ ಸೀಸನ್‌ನಲ್ಲಿ ಬಗೆಬಗೆಯ ಜಾರ್ಜೆಟ್ ಸೀರೆಗಳು ಇದೀಗ ವೈಬ್ರೆಂಟ್ ಶೇಡ್‌ಗಳಲ್ಲೂ ಬಿಡುಗಡೆಗೊಂಡಿದ್ದು, ನಾನಾ ಪ್ರಿಂಟ್ಸ್‌ನಲ್ಲಿ ಹಾಗೂ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ. ಪರಿಣಾಮ, ತೀರಾ ಲೈಟ್‌ವೈಟಾಗಿರುವ ಈ ಸೀರೆಗಳು ಟೀನೇಜ್-ಕಾಲೇಜ್ ಹುಡುಗಿಯರನ್ನು ಆಕರ್ಷಿಸಿವೆ. ಈ ಸೀರೆಗಳನ್ನು ಆಯ್ಕೆ ಮತ್ತು ಸ್ಟೈಲಿಂಗ್ ಮಾಡುವುದು ಹೇಗೆ? ಇಲ್ಲಿದೆ ಡಿಟೇಲ್ಸ್.
1/5
ವೈಬ್ರೆಂಟ್ ಜಾರ್ಜೆಟ್ ಸೀರೆಗಳು ಈ ಸೀಸನ್‌ನಲ್ಲಿ ಹಂಗಾಮ ಎಬ್ಬಿಸಿವೆ.
ವೈಬ್ರೆಂಟ್ ಶೇಡ್‌ನ ಜಾರ್ಜೆಟ್ ಸೀರೆಗಳು
ಹೌದು, ಈ ಸೀಸನ್‌ನಲ್ಲಿ ಬಗೆಬಗೆಯ ಜಾರ್ಜೆಟ್ ಸೀರೆಗಳು ಇದೀಗ ವೈಬ್ರೆಂಟ್ ಶೇಡ್‌ಗಳಲ್ಲೂ ಬಿಡುಗಡೆಗೊಂಡಿದ್ದು, ನಾನಾ ಪ್ರಿಂಟ್ಸ್‌ನಲ್ಲಿ ಹಾಗೂ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ. ಪರಿಣಾಮ, ತೀರಾ ಲೈಟ್‌ವೈಟಾಗಿರುವ ಈ ಸೀರೆಗಳು ಟೀನೇಜ್-ಕಾಲೇಜ್ ಹುಡುಗಿಯರನ್ನು ಆಕರ್ಷಿಸಿವೆ.
2/5
ಶ್ರೀಮುಖಿ ಉಟ್ಟ ಪ್ರಿಂಟೆಡ್ ಜಾರ್ಜೆಟ್ ಸೀರೆ
ನಟಿ ಶ್ರೀಮುಖಿ ಇತ್ತೀಚೆಗೆ ಸೀರೆ ಫ್ಯಾಷನ್ ಶೂಟ್ ನಲ್ಲಿ ಉಟ್ಟಿದ್ದ ವೈಬ್ರೆಂಟ್ ಶೇಡ್‌ನ ನಿಯಾನ್ ಗ್ರೀನ್‌ನ ಪ್ರಿಂಟೆಡ್ ಬಾರ್ಡರ್‌ನ ಜಾರ್ಜೆಟ್ ಸೀರೆಯು ಮಹಿಳೆಯರನ್ನು ಸೆಳೆದಿವೆ. ಬೇಡಿಕೆ ಸೃಷ್ಟಿಸಿಕೊಂಡಿವೆ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್ ರಾಕಿ.
3/5
ಜಾರ್ಜೆಟ್ ಸೀರೆ ಸ್ಪೆಷಾಲಿಟಿ
ಜಾರ್ಜೆಟ್ ಸೀರೆಗಳು ನಿನ್ನೆ ಮೊನ್ನೆಯ ಸೀರೆ ಫ್ಯಾಷನ್‌ನಲ್ಲಿಲ್ಲ! ಕಾಲಾನುಕಾಲದಿಂದಲೂ ಇವೆ. ಮಾನಿನಿಯರ ಸೀರೆ ವಾರ್ಡ್ರೋಬ್‌ಗಳಲ್ಲಿ ಇಂದಿನವರೆಗೂ ಮೊದಲ ಸ್ಥಾನ ಪಡೆದಿವೆ. ಕಾರಣ, ಇವುಗಳನ್ನು ಉಟ್ಟಾಗ ಕಂಫರ್ಟಬಲ್ ಆಗಿ ಫಿಲ್ ಆಗುವುದು ಹಾಗೂ ಇವುಗಳ ಸುಲಭ ನಿರ್ವಹಣೆ ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್‌ಗಳು.
4/5
ಜಾರ್ಜೆಟ್ ಸೀರೆಗಳ ಆಯ್ಕೆ
- ಜಾರ್ಜೆಟ್ ಸೀರೆಗಳು ತೆಳುವಾಗಿರುತ್ತವೆ. ಪಾರದರ್ಶಕವಾಗಿರುತ್ತವೆ. ಹಾಗಾಗಿ ನಿಮ್ಮ ಕಂಫರ್ಟಬಲ್‌ಗೆ ಹೊಂದುತ್ತವೆಯೇ ಎಂಬುದನ್ನು ನೋಡಿಕೊಂಡು ಆಯ್ಕೆ ಮಾಡಿ.
- ಶೀರ್ ಲುಕ್ ನೀಡುವುದರಿಂದ ನೀಟಾಗಿ ಕಾಣಿಸುವ ಜಾರ್ಜೆಟ್ ಸೀರೆಗಳನ್ನೇ ಆಯ್ಕೆ ಮಾಡಿ.
5/5
ಜಾರ್ಜೆಟ್ ಸೀರೆಗಳ ಸ್ಟೈಲಿಂಗ್ ಹೀಗಿರಲಿ
- ಈ ಸೀಸನ್‌ನಲ್ಲಿ ವೈಬ್ರೆಂಟ್ ಸೀರೆಗಳ ಟ್ರೆಂಡಿಯಾಗಿವೆ. ಅವನ್ನೇ ಆಯ್ಕೆ ಮಾಡಿ, ಉಡಿ.
- ಸಿಂಪಲ್ ಮೇಕೋವರ್ ಕೂಡ ಆಕರ್ಷಕವಾಗಿ ಕಾಣಿಸುತ್ತದೆ.
- ಮ್ಯಾಚಿಂಗ್ ಆಕ್ಸೆಸರೀಸ್ ಧರಿಸಿದಲ್ಲಿ ಚೆನ್ನಾಗಿ ಕಾಣಿಸುತ್ತದೆ.
- ಬ್ಲೌಸ್ ಡಿಸೈನ್‌ನ ಆಧಾರದ ಮೇಲೆ ಸೀರೆಯು ಚೆನ್ನಾಗಿ ಕಾಣಿಸುತ್ತವೆ.