ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Saree Fashion 2026: ಜಾರ್ಜೆಟ್‌ ಗೋಲ್ಡನ್‌ ಬುಟ್ಟಾ ಸೀರೆಗಳ ಕಮಾಲ್‌!

ಜಾರ್ಜೆಟ್‌ನ ಗೋಲ್ಡನ್‌ ಬುಟ್ಟಾ ಸೀರೆಗಳು ಈ ಸೀಸನ್‌ನಲ್ಲಿ ಸಖತ್‌ ಟ್ರೆಂಡಿಯಾಗಿವೆ. ಅದರಲ್ಲೂ ವೈಬ್ರೆಂಟ್‌ ಶೇಡ್‌ನವು ಅತಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ. ಬಬ್ಬಲ್‌ಗಮ್‌ ಪಿಂಕ್‌, ಲೆಮೆನ್‌ ಯೆಲ್ಲೋ, ನಿಯಾನ್‌ ಗ್ರೀನ್‌, ಬ್ಲಡ್‌ ರೆಡ್‌ ಸೇರಿದಂತೆ ಬಗೆಬಗೆಯ ವೈಬ್ರೆಂಟ್‌ ಶೇಡ್‌ನವು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ. ಏನಿದರ ಸ್ಪೆಷಾಲಿಟಿ? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ರಸಿಕಾ ದುಗಲ್‌, ನಟಿ
1/5

ಜಾರ್ಜೆಟ್‌ ಗೋಲ್ಡನ್‌ ಬುಟ್ಟಾ ಮೊಟಿಫ್‌ ಇರುವಂತಹ ವೈಬ್ರೆಂಟ್‌ ಸೀರೆಗಳು ಮಾನಿನಿಯರನ್ನು ಸೆಳೆದಿವೆ.

2/5

ಮೊಟಿಫ್‌ನಿಂದ ಅಲಂಕೃತಗೊಂಡ ಸೀರೆಗಳಿವು

ಹೌದು. ಜಾರ್ಜೆಟ್‌ನ ಫ್ಯಾಬ್ರಿಕ್‌ನ ಈ ಗೋಲ್ಡನ್‌ ಬುಟ್ಟಾ ಇರುವಂತಹ ಮೊಟಿಫ್‌ನಿಂದ ಅಲಂಕೃತಗೊಂಡ ಲೈಟ್‌ವೈಟ್‌ ಸೀರೆಗಳು ಈ ಸೀಸನ್‌ನಲ್ಲಿ ಹೆಚ್ಚು ಟ್ರೆಂಡಿಯಾಗಿವೆ. ಅದರಲ್ಲೂ ಬಬ್ಬಲ್‌ಗಮ್‌ ಪಿಂಕ್‌, ಲೆಮೆನ್‌ ಯೆಲ್ಲೋ, ನಿಯಾನ್‌ ಗ್ರೀನ್‌, ಬ್ಲಡ್‌ ರೆಡ್‌ ಸೇರಿದಂತೆ ಬಗೆಬಗೆಯ ವೈಬ್ರೆಂಟ್‌ ಶೇಡ್‌ನವು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.

3/5

ರಸಿಕಾ ದುಗಲ್‌ ವೈಬ್ರೆಂಟ್‌ ಪಿಂಕ್‌ ಸೀರೆ

ನಟಿ ರಸಿಕಾ ದುಗಲ್‌ ಇತ್ತೀಚೆಗೆ ತಮ್ಮ ಸಿನಿಮಾ ಇವೆಂಟ್‌ನಲ್ಲಿ ಉಟ್ಟುಕೊಂಡ ಫೋಟೋಗಳು ವೈರಲ್‌ ಆದ ನಂತರವಂತೂ ಈ ಶೈಲಿಯ ಸೀರೆಗಳಿಗೆ ಆನ್‌ಲೈನ್‌ ಶಾಪ್‌ಗಳಲ್ಲೂ ಹುಡುಕುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಅದೇ ಶೇಡ್‌ನ ಸೀರೆಗೆ ಹೆಚ್ಚು ಬೇಡಿಕೆ ಉಂಟಾಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

4/5

ಸೀರೆಯ ವಿಶೇಷತೆಯೇನು?

ಅಂದಹಾಗೆ, ಗೋಲ್ಡನ್‌ ಬುಟ್ಟಾ ಇರುವಂತಹ ಸೀರೆಗಳು ಅತಿ ಹೆಚ್ಚಾಗಿ ಸಿಲ್ಕ್‌ ಹಾಗೂ ಸೆಮಿ ಸಿಲ್ಕ್‌ ಇಲ್ಲವೇ ಕಾಟನ್‌ ಸೀರೆಗಳಲ್ಲಿ ನೋಡಬಹುದು. ಆದರೆ, ಇವು ಜಾರ್ಜೆಟ್‌ನಲ್ಲಿಯೂ ಕೂಡ ಇವು ಲಭ್ಯ. ನಾರ್ತ್‌ ಇಂಡಿಯಾದಲ್ಲಿ ಈ ಶೈಲಿಯ ಸೀರೆಗಳು ಹೆಚ್ಚು ಪ್ರಚಲಿತದಲ್ಲಿವೆ. ಲೈಟ್‌ವೈಟ್‌ ಆಗಿರುವುದರಿಂದ ಮಾನಿನಿಯರಿಗೆ ಪ್ರಿಯವಾಗಿದೆ.

5/5

ಜಾರ್ಜೆಟ್‌ ಗೋಲ್ಡನ್‌ ಬುಟ್ಟಾ ಸೀರೆ ಪ್ರಿಯರಿಗೆ ಟಿಪ್ಸ್

  • ಲೈಟ್‌ವೈಟ್‌ ಆಗಿರುವುದರಿಂದ ಉಡುವುದು ಸುಲಭ.
  • ನೋಡಲು ಗ್ರ್ಯಾಂಡ್‌ ಲುಕ್‌ ನೀಡುತ್ತದೆ.
  • ಗ್ಲಾಮರಸ್ ಬ್ಲೌಸ್‌ ಧರಿಸುವುದರಿಂದ ಆಕರ್ಷಕವಾಗಿ ಕಾಣಿಸಬಹುದು.
  • ಸಿಂಪಲ್‌ ಮೇಕೋವರ್‌ ಕೂಡ ಚೆನ್ನಾಗಿ ಕಾಣಿಸುತ್ತದೆ.
  • ಇಡೀ ದಿನ ಈ ಸೀರೆಯನ್ನು ಉಟ್ಟು ಸುಲಭವಾಗಿ ಕ್ಯಾರಿ ಮಾಡಬಹುದು.

ಶೀಲಾ ಸಿ ಶೆಟ್ಟಿ

View all posts by this author