Saree Fashion 2026: ಸ್ಟ್ರೈಪ್ಸ್ ಸೀರೆ ಉಡಲು ಇಲ್ಲಿವೆ 3 ಸಿಂಪಲ್ ಸ್ಟೈಲಿಂಗ್ ಟಿಪ್ಸ್
ಸ್ಟೈಪ್ಸ್ ಸೀರೆಯನ್ನು ಅತ್ಯಾಕರ್ಷಕವಾಗಿ ಉಡಬೇಕೇ! ಹಾಗಾದಲ್ಲಿ ಒಂದಿಷ್ಟು ಸ್ಟೈಲಿಂಗ್ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸೀರೆ ಸ್ಪೆಷಲಿಸ್ಟ್‌ಗಳು. ನಟಿ ಅನಲಾ ಸುಶ್ಮಿತಾ ಉಟ್ಟಿರುವ ಸ್ಟೈಲಿಂಗ್ ಸೇರಿದಂತೆ ಇನ್ನೆರಡು ಸಿಂಪಲ್ ಡ್ರೇಪಿಂಗ್ ಟಿಪ್ಸ್ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ನಿಮ್ಮ ಬಳಿ ಇರುವ ಸ್ಟ್ರೈಪ್ಸ್ ಸೀರೆಯನ್ನು ಪ್ರತಿ ಬಾರಿಯೂ ಡಿಫರೆಂಟಾಗಿ ಉಡಬೇಕೇ! ಹಾಗಾದಲ್ಲಿ ಒಂದಿಷ್ಟು ಸೀರೆ ಸ್ಟೈಲಿಂಗ್ ಐಡಿಯಾ ಫಾಲೋ ಮಾಡಿ. ಕ್ರಿಯಾತ್ಮಕ ಹಾಗೂ ಪ್ರಯೋಗಾತ್ಮಕ ಸ್ಟೈಲಿಂಗ್‌ನಲ್ಲಿ ಉಟ್ಟು ಸಂಭ್ರಮಿಸಿ ಎನ್ನುತ್ತಾರೆ ಡ್ರೇಪಿಂಗ್ ಎಕ್ಸ್‌ಪರ್ಟ್ಸ್.
ನಟಿ ಅನಲಾ ಸುಶ್ಮಿತಾ ಸ್ಟ್ರೈಪ್ಸ್ ಸೀರೆ ಫ್ಯಾಷನ್
ತೆಲುಗು ನಟಿ ಅನಲಾ ಸುಶ್ಮಿತಾ ಉಟ್ಟಿರುವ ಸ್ಟೈಪ್ಸ್ ಸೀರೆ ಫ್ಯಾಷನ್ ತಕ್ಷಣಕ್ಕೆ ನೋಡಲು ಕಷ್ಟವೇನೋ ಎಂದನಿಸುತ್ತದೆ. ಆದರೆ ತೀರಾ ಸುಲಭ. ಸ್ಟ್ರೈಪ್ ಸೀರೆಯನ್ನು ಮೊದಲು ಉಟ್ಟು ಪಿನ್ ಮಾಡಿ. ನಂತರ ಈ ಸೀರೆಯ ಮೇಲೆ ಲೈಟ್‌ವೈಟ್ ಇರುವಂತಹ ಬ್ಲ್ಯಾಕ್ ಜಾಕೆಟ್ ಅಥವಾ ಕೋಟ್ ಧರಿಸಿ. ಬಕಲ್ ಅಥವಾ ಸ್ಟೇಟ್‌ಮೆಂಟ್ ಬೆಲ್ಟ್ ಇದರ ಮೇಲೆ ಧರಿಸಿ. ಇದು ನೋಡಲು ಆಕರ್ಷಕವಾಗಿ ಕಾಣಿಸುತ್ತದೆ.
ಇಂಡೋ-ವೆಸ್ಟರ್ನ್ ಶೈಲಿಗೆ ಸ್ಟ್ರೈಪ್ ಸೀರೆ ಸಾಥ್
ಸ್ಟ್ರೈಪ್ ಸೀರೆ ಟ್ರೆಡಿಷನಲ್ ಲುಕ್ ನೀಡುವುದಕ್ಕಿಂತ ಇಂಡೋ-ವೆಸ್ಟರ್ನ್ ಸ್ಟೈಲಿಂಗ್‌ಗೆ ಪರ್ಫೆಕ್ಟ್ ಮ್ಯಾಚ್ ಆಗುತ್ತದೆ. ಹಾಗಾಗಿ ಈ ಸೀರೆಯನ್ನು ಫುಲ್ ಸ್ಲೀವ್ ಮ್ಯಾಚಿಂಗ್ ಅಥವಾ ಕಾಂಟ್ರಸ್ಟ್ ಟಾಪ್ ಧರಿಸಿ ಉಡಬಹುದು. ಲಾಂಗ್ ಟಾಫ್ ಅಥವಾ ಕ್ರಾಪ್ ಟಾಪ್ ಬಳಸಬಹುದು. ಇದರೊಂದಿಗೆ ಸೊಂಟಕ್ಕೆ ಅಗಲವಾದ ಬೆಲ್ಟ್ ಧರಿಸಬಹುದು. ಈ ಲುಕ್ ಕೂಡ ಚೆನ್ನಾಗಿ ಕಾಣಿಸುತ್ತದೆ.
ಸ್ವೆಟರ್ ಅಥವಾ ಪುಲ್ ಓವರ್ ಮೇಲೆ ಸ್ಟೈಪ್ಸ್ ಸೀರೆ
ಸ್ಟೆಟರ್ ಇಲ್ಲವೇ ಮ್ಯಾಚಿಂಗ್ ಅಥವಾ ಹೊಂದುವ ಕಲರ್‌ನ ಪುಲ್ ಓವರ್ ಮೇಲೆ ಸ್ಟ್ರೈಪ್ ಸೀರೆ ಉಡಬಹುದು. ಇದು ಕೂಡ ಸೀಸನ್‌ಗೆ ಮ್ಯಾಚ್ ಆಗುವುದಲ್ಲದೇ ನೋಡಲು ಲೇಯರ್ ಲುಕ್ ನೀಡುತ್ತದೆ.
ಸ್ಟ್ರೈಫ್ ಸೀರೆ ಟಿಪ್ಸ್
- ಬ್ಲ್ಯಾಕ್ ಸ್ಟ್ರೈಪ್ಸ್ ಸೀರೆ ಆಕರ್ಷಕವಾಗಿ ಕಾಣಿಸುತ್ತದೆ.
- ಬಣ್ಣಬಣ್ಣದ್ದಾದಲ್ಲಿ ಆದಷ್ಟೂ ಅದಕ್ಕೆ ಮ್ಯಾಚ್ ಆಗುವ ಬ್ಲೌಸ್ ಧರಿಸಿ.
- ಸ್ಟೈಲಿಂಗ್ ಆಧಾರದ ಮೇಲೆ ಇಡೀ ಸೀರೆ ಲುಕ್ ಬದಲಾಗುತ್ತದೆ.