ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Saree Fashion 2026: ಕೇಪ್‌ ಡಿಸೈನ್‌ನ ಸಾದಾ ಸೀರೆಯ ಸ್ಟೈಲಿಂಗ್‌ಗೆ ಇಲ್ಲಿವೆ ಐಡಿಯಾ

ಇತ್ತೀಚೆಗೆ ಕೇಪ್‌ ಡಿಸೈನ್‌ನ ಸಾದಾ ಡಿಸೈನರ್‌ ಸೀರೆಗಳು ಮರುಕಳಿಸಿವೆ. ಅದರಲ್ಲೂ ಪ್ರಯೋಗಾತ್ಮಕ ವಿನ್ಯಾಸಗಳನ್ನು ಟ್ರೈ ಮಾಡಲು ಬಯಸುವ ನೀರೆಯರನ್ನು ಸೆಳೆದಿವೆ. ಈ ಕೇಪ್‌ ಡಿಸೈನ್‌ನ ವಿಶೇಷತೆಯೇನು? ಸ್ಟೈಲಿಂಗ್‌ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಅಂಕಿತಾ ಲೋಖಂಡೆ, ನಟಿ
1/5

ಕೇಪ್‌ ಡಿಸೈನ್‌ನ ಸೀರೆಗಳು ಈ ಸೀಸನ್‌ನಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿವೆ.

ಪ್ರಯೋಗಾತ್ಮಕ ವಿನ್ಯಾಸ

ಹೌದು, ಇದುವರೆಗೂ ಗೌನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೇಪ್‌ ಡಿಸೈನ್‌ ಇದೀಗ ಪ್ರಯೋಗಾತ್ಮಕ ವಿನ್ಯಾಸಗಳನ್ನು ಟ್ರೈ ಮಾಡಲು ಬಯಸುವ ನೀರೆಯರ ಸೀರೆಗಳನ್ನು ಸವಾರಿ ಮಾಡತೊಡಗಿವೆ.

2/5

ಅಂಕಿತಾ ಉಟ್ಟಿದ್ದ ಕೇಪ್‌ ಸೀರೆ

ಇದಕ್ಕೆ ಪೂರಕ ಎಂಬಂತೆ, ಈ ಹಿಂದೆ ನಟಿ ಅಂಕಿತಾ ಲೋಖಂಡೆ ಕೂಡ ಫ್ಯಾಷನ್‌ ಶೂಟ್‌ವೊಂದರಲ್ಲಿ ವಿಭಿನ್ನ ಲುಕ್‌ ನೀಡುವ ಕೇಪ್‌ ವಿನ್ಯಾಸದ ಸಾದಾ ಪೀಚ್‌ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಅವರ ಸೀರೆಯ ಸ್ಟೈಲಿಂಗ್‌ ಕಂಪ್ಲೀಟ್‌ ವಿಭಿನ್ನವಾಗಿತ್ತು! ಆದರೆ, ಅಂದು ಈ ಬಗೆಯ ಸೀರೆಗಳು ಕೇವಲ ಸೆಲೆಬ್ರೆಟಿಗಳಿಗೆ ಮಾತ್ರ ಸೀಮಿತವಾಗಿದ್ದವು. ಆದರೆ, ಇದೀಗ ಈ ಸೀಸನ್‌ನಲ್ಲಿ ಈ ಶೈಲಿಯವು ಮರುಕಳಿಸಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ರಾಘವ್‌.

3/5

ಕೇಪ್‌ ವಿನ್ಯಾಸದ ಸೀರೆ ವಿಶೇಷತೆಯೇನು?

ಸಿಂಪಲ್‌ ಆಗಿ ಹೇಳುವುದಾದಲ್ಲಿ, ಸ್ಲೀವ್‌ಗೆ ಹೊಂದಿಕೊಂಡಂತಹ ಡಿಸೈನನ್ನು ಕೇಪ್‌ ವಿನ್ಯಾಸ ಎನ್ನಲಾಗುತ್ತದೆ. ಇನ್ನು ದುಪಟ್ಟಾದಂತಹ ಫ್ಯಾಬ್ರಿಕ್‌ ಇಳೆ ಬಿಟ್ಟಂತೆ ಸ್ಲೀವ್‌ನೊಂದಿಗೆ ಡಿಸೈನ್‌ ಮಾಡಲಾಗಿರುತ್ತದೆ. ಫ್ಯಾಷನ್‌ ಪ್ರಿಯರಿಗೆ ತಿಳಿದಿರುವಂತೆ, ಇಂತಹ ಡಿಸೈನನ್ನು ಇದುವರೆಗೂ ಕೇವಲ ಗೌನ್‌ಗಳಲ್ಲಿ ಕಾಣಬಹುದಾಗಿತ್ತು. ಆದರೆ, ಇದೀಗ ಸೀರೆಯ ಬ್ಲೌಸ್‌ಗಳಲ್ಲೂ ಕಾಣಿಸಿಕೊಂಡಿವೆ ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ ರಾಖಿ.

4/5

ರಾಯಲ್‌ ಲುಕ್‌ ನೀಡುವ ಕೇಪ್‌ ವಿನ್ಯಾಸದ ಸೀರೆ

ಸೀರೆಯ ಮೇಲೊಂದು ದುಪಟ್ಟಾ ಶೈಲಿಯ ವಿನ್ಯಾಸವಿರುವಂತಹ ಈ ಕೇಪ್‌ ಸೀರೆ ಉಟ್ಟವರಿಗೆ ಇವು ರಾಯಲ್‌ ಲುಕ್‌ ನೀಡುತ್ತವೆ. ನೋಡಲು ವಿಭಿನ್ನ ಲುಕ್‌ ನೀಡುವುದರೊಂದಿಗೆ ಆಕರ್ಷಕವಾಗಿ ಬಿಂಬಿಸುತ್ತವೆ ಎನ್ನುತ್ತಾರೆ ಸೀರೆ ಡ್ರೇಪಿಂಗ್‌ ಎಕ್ಸ್‌ಪರ್ಟ್ ಜೀನತ್‌.

5/5

ಕೇಪ್‌ ಸೀರೆ ಪ್ರಿಯರಿಗೆ ಸಲಹೆ

  • ಪ್ರೀ ಡ್ರೇಪ್ಡ್ ಮಾಡಿದ ಕೇಪ್‌ ಸೀರೆಗಳು ಇತ್ತೀಚೆಗೆ ದೊರೆಯುತ್ತವೆ. ಇವುಗಳನ್ನು ಸುಲಭವಾಗಿ ಧರಿಸಬಹುದು.
  • ಬೇಕಾದಾಗ ಹಾಕಿಕೊಳ್ಳಬಹುದಾದ ಡಿಟ್ಯಾಚೆಬಲ್‌ ಕೇಪ್‌ ವಿನ್ಯಾಸದ ಸೀರೆಗಳು ಲಭ್ಯ.
  • ಆದಷ್ಟೂ ದೇಹದ ಮೇಲೆ ಫ್ಲೋ ಆಗುವಂತಹ ಲೈಟ್‌ವೈಟ್‌ ಫ್ಯಾಬ್ರಿಕ್‌ನ ಕೇಪ್‌ ಸೀರೆಗಳನ್ನೇ ಆಯ್ಕೆ ಮಾಡಿ.

ಶೀಲಾ ಸಿ ಶೆಟ್ಟಿ

View all posts by this author