ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Saree Fashion 2026: ಪಾರ್ಟಿವೇರ್‌ ಆರ್ಗನ್ಜಾ ಸೀರೆಯ ಆಯ್ಕೆಗೆ ಇಲ್ಲಿವೆ ಟಿಪ್ಸ್

ಪಾರ್ಟಿವೇರ್‌ ಆರ್ಗನ್ಜಾ ಸೀರೆಯನ್ನು ಖರೀದಿಸುತ್ತೀದ್ದೀರಾ? ಹಾಗಾದಲ್ಲಿ ನೀವು ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ. ಆಗಷ್ಟೇ ನೀವು ಈ ಸೀರೆ ಉಟ್ಟಾಗ ಸೆಲೆಬ್ರೆಟಿ ಲುಕ್‌ ಪಡೆಯಬಹುದು ಎನ್ನುವ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಗಳು: ಬಿದ್ಯಾ ಸಿನ್ಹಾ ಸಹ ಮಿಮ್‌, ನಟಿ
1/5

ಆರ್ಗನ್ಜಾ ಸೀರೆಯಲ್ಲಿ ನೀವೂ ಕೂಡ ಸೆಲೆಬ್ರೆಟಿ ಲುಕ್‌ ಪಡೆಯಬೇಕೇ! ಹಾಗಾದಲ್ಲಿ ಈ ಸೀರೆಯನ್ನು ಖರೀದಿಸುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಆಕರ್ಷಕ ಆರ್ಗನ್ಜಾ ಸೀರೆಯ ಖರೀದಿ

ನಾನಾ ಬಗೆಯ ಆರ್ಗನ್ಜಾ ಸೀರೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅವುಗಳಲ್ಲಿ ನೀವು ನಿಮಗೆ ಮ್ಯಾಚ್‌ ಆಗುವಂತಹ ಸೂಕ್ತ ಸೀರೆಯ ನ್ನು ಆಯ್ಕೆ ಮಾಡಿ. ಯಾಕೆಂದರೇ ಕೆಲವು ತೀರಾ ರಫ್‌ ಆಗಿರುತ್ತವೆ. ಪರೀಶೀಲಿಸಿ ಫ್ಯಾಬ್ರಿಕ್‌ ಆಯ್ಕೆ ಮಾಡಿ.

2/5

ಪರ್ಸನಾಲಿಟಿಗೆ ತಕ್ಕಂತೆ ಚೂಸ್‌ ಮಾಡಿ

ನೀವು ಪ್ಲಂಪಿಯಾಗಿದ್ದಲ್ಲಿ ಆದಷ್ಟೂ ಸಾಫ್ಟ್ ಆಗಿರುವಂತಹ ಆರ್ಗನ್ಜಾ ಸೀರೆ ಆಯ್ಕೆ ಮಾಡಿ. ಯಾಕೆಂದರೇ ಇವು ಕೊಂಚ ಹರಡಿಕೊಳ್ಳುತ್ತವೆ. ಸ್ಲಿಮ್‌ ಆಗಿದ್ದವರಿಗೆ ಮಾತ್ರ ಇವು ಚೆನ್ನಾಗಿ ಕಾಣಿಸುತ್ತವೆ. ಉಟ್ಟಾಗ ಹರಡಿಕೊಳ್ಳುವುದರಿಂದ ಇವು ತೆಳ್ಳಗೆ ಉದ್ದನಾಗಿ ಇರುವವರಿಗೆ ಬೆಸ್ಟ್ ಎನ್ನಬಹುದು.

3/5

ಪಾರ್ಟಿವೇರ್‌ ಆದಲ್ಲಿ ಹೀಗಿರಲಿ ನಿಮ್ಮ ಸೀರೆ

ಪಾರ್ಟಿವೇರ್‌ ಸೀರೆಯಾದಲ್ಲಿ ನೀವು ಆದಷ್ಟೂ ಶಿಮ್ಮರ್‌ ಅಥವಾ ಸೀಕ್ವಿನ್ಸ್ ಇರುವಂತಹ ಆರ್ಗನ್ಜಾ ಸೀರೆಯನ್ನು ಚೂಸ್‌ ಮಾಡಿ ಉಡುವುದು ಉತ್ತಮ. ಇವು ನೋಡಲು ನಿಮ್ಮನ್ನು ಸೆಲೆಬ್ರಿಟಿಯಂತೆ ಬಿಂಬಿಸುತ್ತವೆ ಜತೆಗೆ ಹೈಲೈಟ್‌ ಮಾಡುತ್ತವೆ.

4/5

ಡಿಸೈನರ್‌ ಬ್ಲೌಸ್‌ ಅಗತ್ಯ

ಆರ್ಗನ್ಜಾ ಸೀರೆಗೆ ನೀವು ಡಿಸೈನರ್‌ ಬ್ಲೌಸ್‌ ಅಥವಾ ಡಿಸೈನ್‌ ಮಾಡಿದ ಬ್ಲೌಸನ್ನೇ ಧರಿಸಬೇಕು. ಇಲ್ಲವಾದಲ್ಲಿ ಈ ಲುಕ್‌ ನಿಮ್ಮನ್ನು ತೀರಾ ಸಾಮಾನ್ಯ ಮಹಿಳೆಯಂತೆ ಬಿಂಬಿಸಬಹುದು. ಗ್ಲಾಮರಸ್‌ ಆಗಿ ಕಾಣಿಸುವ ಬ್ಲೌಸ್‌ ಇಡೀ ಲುಕ್ಕನ್ನು ಹೈಲೈಟ್‌ ಮಾಡುತ್ತದೆ.

5/5

ಆರ್ಗನ್ಜಾ ಸೀರೆಯ ಬಣ್ಣ

ಯಾವುದೋ ಒಂದು ಕಲರ್‌ ಎಂದು ಕಂಡ ಕಂಡ ಕಲರ್‌ನ ಆರ್ಗನ್ಜಾ ಸೀರೆ ಚೂಸ್‌ ಮಾಡಬೇಡಿ. ನಿಮ್ಮ ಸ್ಕಿನ್‌ ಟೋನ್‌ಗೆ ಹೊಂದುವಂತಹ ಬಣ್ಣದ್ದನ್ನು ಆಯ್ಕೆ ಮಾಡಿ ಉಡಿ.

ಶೀಲಾ ಸಿ ಶೆಟ್ಟಿ

View all posts by this author