Saree Fashion 2026: ಪೈಥಾನಿ ಸಿಲ್ಕ್ ಸೀರೆ ಸ್ಟೈಲಿಂಗ್‌ಗೆ ಇಲ್ಲಿದೆ ಐಡಿಯಾ
ನಟಿ ಸೋನಾಲಿ ಕುಲಕರ್ಣಿ ಉಟ್ಟ ಫೈಥಾನಿ ಸಿಲ್ಕ್ ಸೀರೆಯು ಸದ್ಯ ಮಾನಿನಿಯರ ಗಮನ ಸೆಳೆದಿದೆ. ಈ ಸೀರೆಯ ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಸೀರೆ ಎಕ್ಸ್‌ಪರ್ಟ್ಸ್ ಒಂದಿಷ್ಟು ಸಿಂಪಲ್ ಐಡಿಯಾ ನೀಡಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ನಟಿ ಸೋನಾಲಿ ಕುಲಕರ್ಣಿ ಉಟ್ಟ ಫೈಥಾನಿ ಸಿಲ್ಕ್ ಸೀರೆಯು ಸದ್ಯ ಸುದ್ದಿಯಲ್ಲಿದೆ. ಆಗೊಮ್ಮೆ ಹೀಗೊಮ್ಮೆ ಟ್ರೆಂಡಿಯಾಗುವ ಈ ಶೈಲಿಯ ಸೀರೆಗಳನ್ನು ಆಯ್ಕೆ ಮಾಡುವುದು ಹೇಗೆ? ಮೇಕೋವರ್ ಹೇಗಿದ್ದಲ್ಲಿ ಯಾವ ಬಗೆಯ ಇಮೇಜ್ ಪಡೆಯಬಹುದು? ಎಂಬುದನ್ನು ಸೀರೆ ಎಕ್ಸ್‌ಪರ್ಟ್ ಹಾಗೂ ಸ್ಟೈಲಿಸ್ಟ್ ನಿಶಾ ಹಂಚಿಕೊಂಡಿದ್ದಾರೆ.
ಸೀರೆಯ ವಿನ್ಯಾಸಕ್ಕೆ ತಕ್ಕಂತೆ ಬದಲಾಗುವ ಇಮೇಜ್
ಬಹುತೇಕ ಟ್ರೆಡಿಷನಲ್ ಲುಕ್ ನೀಡುವ ಫೈಥಾನಿ ಸಿಲ್ಕ್ ಸೀರೆಗಳ ಸ್ಟೈಲಿಂಗ್ ನೀವು ಮಾಡುವ ಲುಕ್‌ಗೆ ತಕ್ಕಂತೆ ಬದಲಿಸಿದಾಗ ಇಮೇಜ್ ಬದಲಾಗುತ್ತದೆ. ಹಾಗಾಗಿ ಮೊದಲೇ ನಿಮಗೆ ಯಾವ ಬಗೆಯ ಲುಕ್ ಬೇಕು ಎಂಬುದರ ಆಧಾರದ ಮೇಲೆ ಸೀರೆಯನ್ನು ಆಯ್ಕೆ ಮಾಡಿ, ಸ್ಟೈಲಿಂಗ್ ನಿರ್ಧರಿಸಿ.
ಸಿಂಪಲ್-ಗ್ರ್ಯಾಂಡ್ ಲುಕ್ ಐಡಿಯಾ
ಫೈಥಾನಿ ಸಿಲ್ಕ್ ಸೀರೆಗಳು ಬಾರ್ಡರ್‌ನಲ್ಲಿ ಫ್ಲೊರಲ್ ವಿನ್ಯಾಸ ಹೊಂದಿರುತ್ತವೆ. ಕೆಲವಂತೂ ಮೀನಾಂಕಾರಿಯಲ್ಲಿ ಮಿಂದೆದ್ದಿರುತ್ತವೆ. ಈ ಡಿಸೈನ್‌ಗಳ ಆಧಾರದ ಮೇಲೆ ಮೇಕೋವರ್ ಮಾಡಿದಲ್ಲಿ ಸಿಂಪಲ್ ಹಾಗೂ ಗ್ರ್ಯಾಂಡ್ ಲುಕ್ ಎರಡನ್ನೂ ಬೇಕಾದಾಗ ಪಡೆಯಬಹುದು.
ಲೈಟ್ & ಡಾರ್ಕ್ ಶೇಡ್‌ನ ಫೈಥಾನಿ ಸೀರೆ
ಪೈಥಾನಿ ಸೀರೆಗಳು ಪಾಸ್ಟೆಲ್ ಶೇಡ್ ಹಾಗೂ ಡಾರ್ಕ್ ಶೇಡ್‌ನಲ್ಲಿ ಲಭ್ಯ. ಲೈಟ್ ಕಲರ್‌ನವು ಜೆನ್ ಜಿ ಹುಡುಗಿಯರಿಗೆ ಹೊಂದುತ್ತವೆ. ಡಾರ್ಕ್ ಶೇಡ್‌ನವು ಟ್ರೆಡಿಷನಲ್ ಲುಕ್ ಬಯಸುವ ಲೇಡಿಸ್‌ಗೆ ಹೊಂದುತ್ತವೆ.
ಬ್ಲೌಸ್ ಡಿಸೈನ್‌ಗೆ ಆದ್ಯತೆ
ಸಿಂಪಲ್ ಹಾಗೂ ಎಲಿಗೆಂಟ್ ಲುಕ್ ಬೇಕಿದ್ದಲ್ಲಿ ನಾರ್ಮಲ್ ಡಿಸೈನ್‌ನ ಬ್ಲೌಸ್ ಧರಿಸಿ. ಗ್ಲಾಮರಸ್ ಅಥವಾ ಇಂಡೋ-ವೆಸ್ಟರ್ನ್ ಲುಕ್ ಬೇಕಿದ್ದಲ್ಲಿ ಹಾಲ್ಟರ್ ನೆಕ್, ಸ್ಲೀವ್‌ಲೆಸ್, ಕ್ರಾಪ್ ಟಾಪ್‌ನಂತಹ ಬ್ಲೌಸ್‌ಗೆ ಆದ್ಯತೆ ನೀಡಿ.
ಆಕ್ಸೆಸರೀಸ್ ಸೂಕ್ತವಾಗಿರಲಿ
ಟ್ರೆಡಿಷನಲ್ ಲುಕ್‌ಗಾಗಿ ಆದಷ್ಟೂ ಗೋಲ್ಡ್ ಅಥವಾ ಇಮಿಟೇಷನ್ ಜ್ಯುವೆಲರಿಗಳನ್ನು ಧರಿಸಬಹುದು. ಇಂಡೋ-ವೆಸ್ಟರ್ನ್ ಲುಕ್‌ಗಾಗಿ ಮಿಕ್ಸ್ ಮ್ಯಾಚ್ ಹಾಗೂ ಫ್ಯಾಷನ್ ಜ್ಯುವೆಲರಿ ಧರಿಸಬಹುದು.