ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Saree Fashion 2026: ಪಾರ್ಟಿ ಪ್ರಿಯ ಯುವತಿಯರಿಗಾಗಿ ಬಂತು ಓಂಬ್ರೆ ಸಿಕ್ವೀನ್ಸ್ ಸೀರೆಗಳು

ಪಾರ್ಟಿ ಪ್ರಿಯ ಯುವತಿಯರಿಗಾಗಿ ಇದೀಗ ಓಂಬ್ರೆ ಮೆಟಾಲಿಕ್‌ ಸಿಕ್ವೀನ್ಸ್ ಸೀರೆಗಳು ಕಾಲಿಟ್ಟಿವೆ. ಇದ್ಯಾವ ಬಗೆಯ ಸೀರೆ? ಈ ಸೀರೆಯಲ್ಲಿ ಗ್ಲಾಮರಸ್‌ ಲುಕ್‌ ಪಡೆಯುವುದು ಹೇಗೆ? ಎಂಬುದರ ಬಗ್ಗೆ ಸೀರೆ ಸ್ಟೈಲಿಸ್ಟ್‌ಗಳು ತಿಳಿಸಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಗಳು: ನಿತಾಂಶಿ ಗೋಯಲ್‌, ನಟಿ
1/5

ಪಾರ್ಟಿ ಪ್ರಿಯ ಮಹಿಳೆಯರನ್ನು ಸವಾರಿ ಮಾಡಲು ಓಂಬ್ರೆ ಮೆಟಾಲಿಕ್‌ ಸಿಕ್ವೀನ್ಸ್ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

2/5

ಮನ ಗೆದ್ದ ಮೆಟಾಲಿಕ್‌ ಓಂಬ್ರೆ ಸಿಕ್ವೀನ್ಸ್ ಸೀರೆ

ಇದುವರೆಗೂ ಗೋಲ್ಡನ್‌ ಸಿಕ್ವೀನ್ಸ್ ಸೀರೆಗಳು ಟ್ರೆಂಡಿಯಾಗಿದ್ದವು. ಇದೀಗ ಅವುಗಳ ಜಾಗಕ್ಕೆ ಮೆಟಾಲಿಕ್‌ ಶೇಡ್‌ನ ಓಂಬ್ರೆ ಸಿಕ್ವೀನ್ಸ್‌ ಸೀರೆಗಳು ಬಂದಿವೆ. ಪಾರ್ಟಿ ಪ್ರಿಯರ ಹೃದಯವನ್ನು ಗೆದ್ದಿವೆ ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್ ನೀತಿ.

3/5

ನಟಿ ನಿತಾಂಶಿ ಗೋಯಲ್‌ ವೈರಲ್‌ ಸೀರೆಯಿದು

ಅಂದಹಾಗೆ, ಇತ್ತೀಚೆಗೆ ಲಪಾತ ಲೇಡೀಸ್‌ ಸಿನಿಮಾ ನಟಿ ನಿತಾಂಶಿ ಗೋಯಲ್‌ ಸಿನಿಮಾ ಪಾರ್ಟಿಯೊಂದರಲ್ಲಿ ಉಟ್ಟಿದ್ದ ಈ ಶೈಲಿಯ ಸೀರೆ ಸಖತ್‌ ವೈರಲ್‌ ಆಗಿತ್ತು. ನಟಿಗೆ ಗ್ಲಾಮರ್‌ ಲುಕ್‌ ಜೊತೆಗೆ ಅವರನ್ನು ಅತ್ಯಾಕರ್ಷಕವಾಗಿ ಬಿಂಬಿಸಿತ್ತು. ಈ ಸೀರೆ ಕೇವಲ ಜೆನ್‌ ಜಿ ಯುವತಿಯರನ್ನು ಮಾತ್ರವಲ್ಲ, ಎಲ್ಲಾ ವಯಸ್ಸಿನ ಪಾರ್ಟಿ ಪ್ರಿಯ ಮಾನಿನಿಯರನ್ನು ಕೂಡ ಸೆಳೆದಿತ್ತು.

4/5

ಓಂಬ್ರೆ ಸಿಕ್ವೀನ್ಸ್ ಸೀರೆಗೆ ಡಿಮ್ಯಾಂಡ್‌

ಅಷ್ಟೇಕೆ! ಸೋಷಿಯಲ್‌ ಮೀಡಿಯಾದಲ್ಲಂತೂ ಈ ಸೀರೆ ಸಖತ್‌ ಮೆಚ್ಚುಗೆ ಗಳಿಸಿತ್ತು. ಇದಕ್ಕೆ ಪೂರಕ ಎಂಬಂತೆ, ಸಾಕಷ್ಟು ಸೀರೆ ಪ್ರೇಮಿಗಳು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿ, ದೊರಕಿದ ವೆಬ್‌ಸೈಟ್‌ಗಳಲ್ಲಿ ಪ್ರೀ ಬುಕ್ಕಿಂಗ್‌ ಕೂಡ ಮಾಡಲಾರಂಭಿಸಿದರು. ಪರಿಣಾಮ, ಎಲ್ಲೆಡೆ ಇಂತಹ ಸೀರೆಗಳ ಬೇಡಿಕೆ ಹೆಚ್ಚಾಯಿತು ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

5/5

ಓಂಬ್ರೆ ಸಿಕ್ವೀನ್ಸ್ ಸೀರೆಯಲ್ಲಿ ಸೆಲೆಬ್ರೆಟಿ ಲುಕ್‌ ಪಡೆಯಲು ಟಿಪ್ಸ್

  • ಗ್ಲಾಮರಸ್‌ ಬ್ಲೌಸ್‌ ಚೂಸ್‌ ಮಾಡಿ, ಧರಿಸಿ.
  • ಸಿಂಪಲ್‌ ಮೇಕೋವರ್‌ ಮಾಡಿದರೇ ಸಾಕು!
  • ಕಾಂಟ್ರಸ್ಟ್ ಬ್ಲೌಸ್‌ ಧರಿಸುವುದು ಬೆಸ್ಟ್.
  • ಗ್ಲಾಮರಸ್‌ ಆಗಿ ಕಾಣಿಸಲು ಮಿನಿಮಲ್‌ ಆಕ್ಸೆಸರೀಸ್‌ ಧರಿಸಬೇಕು.

ಶೀಲಾ ಸಿ ಶೆಟ್ಟಿ

View all posts by this author