ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Saree Fashion 2026: ಅರ್ಗಾನ್ಜಾ ಸೀರೆಗೂ ಬಂತು ಡಿಸೈನರ್‌ ಸ್ಕಾಲಪ್‌ ಬಾರ್ಡರ್‌

ಇದೀಗ ಸ್ಕಾಲಪ್‌ ಬಾರ್ಡರ್‌ ಇರುವಂತಹ ಅರ್ಗಾನ್ಜಾ ಸೀರೆಗಳು ಟ್ರೆಂಡಿಯಾಗಿವೆ. ನೋಡಲು ಡಿಫರೆಂಟ್‌ ಲುಕ್‌ ನೀಡುವ ಇವು ನಾನಾ ಡಿಸೈನ್‌ಗಳಲ್ಲಿ ಕಾಣಿಸಿಕೊಂಡಿವೆ. ಯಾವ್ಯಾವ ಡಿಸೈನ್‌ನವು ಯಾವ್ಯಾವ ಕಲರ್‌ಗಳಲ್ಲಿ ಬಿಡುಗಡೆಗೊಂಡಿವೆ? ಎಂಬುದರ ಬಗ್ಗೆ ಸೀರೆ ಎಕ್ಸ್‌ಪರ್ಟ್ಸ್‌ ವಿವರಿಸಿದ್ದಾರೆ.

ಚಿತ್ರಗಳು: ನಮೀತಾ ಪ್ರಮೋದ್‌, ನಟಿ
1/5

ಸ್ಕಾಲಪ್‌ ಕಟ್‌ ಬಾರ್ಡರ್‌ ಅರ್ಗಾನ್ಜಾ ಸೀರೆಗಳು ಈ ಸೀಸನ್‌ನಲ್ಲಿ ಮಾನಿನಿಯರನ್ನು ಆವರಿಸಿಕೊಂಡಿವೆ.

ಡಿಫರೆಂಟ್‌ ಲುಕ್‌ ನೀಡುವ ಸ್ಕಾಲಪ್‌ ಬಾರ್ಡರ್‌ ಅರ್ಗಾನ್ಜಾ ಸೀರೆ

ಹೌದು, ಇದೀಗ ಸ್ಕಾಲಪ್‌ ಬಾರ್ಡರ್‌ ಇರುವಂತಹ ನಾನಾ ಬಗೆಯ ಡಿಸೈನ್‌ನ ಕಲರ್‌ನ ಅರ್ಗಾನ್ಜಾ ಸೀರೆಗಳು ಬಿಡುಗಡೆಗೊಂಡಿದ್ದು, ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ನೋಡಲು ಡಿಫರೆಂಟ್‌ ಲುಕ್‌ ನೀಡುತ್ತಿವೆ.

2/5

ಏನಿದು ಸ್ಕಾಲಪ್‌ ಬಾರ್ಡರ್‌?

ಸಿಂಪಲ್‌ ಆಗಿ ಹೇಳುವುದಾದಲ್ಲಿ, ಸೀರೆಯ ಅಂಚಿನಲ್ಲಿ ವೆವ್ವಿಯಂತೆ ಕಟ್‌ ಡಿಸೈನ್‌ ಮಾಡಿರುವುದು ಅಥವಾ ಕರ್ವ್ಸ್‌ ಡಿಸೈನ್‌ ಮಾಡಿರುವುದನ್ನು ಸ್ಕಾಲಪ್‌ ಬಾರ್ಡರ್‌ ಎನ್ನಲಾಗುತ್ತದೆ. ಸಾದಾ ಸೀರೆಗೆ ಕಾಂಟ್ರಾಸ್ಟ್‌ ಬಾರ್ಡರ್‌, ಮಾನೋಕ್ರೋಮ್‌ ಬಾರ್ಡರ್‌, ಥ್ರೆಡ್‌ ವರ್ಕ್‌ ಸೇರಿದಂತೆ ನಾನಾ ಕಲರ್‌ಗಳಲ್ಲಿ ಇವು ಪ್ರಚಲಿತದಲ್ಲಿವೆ.

3/5

ಪಾಪುಲರ್‌ ಆಗಿರುವ ಅರ್ಗಾನ್ಜಾ ಸೀರೆಗಳು

ಕಳೆದ ಸೀಸನ್‌ನಲ್ಲಿಯೂ ಚಾಲ್ತಿಯಲ್ಲಿದ್ದ ಈ ಸ್ಕಾಲಪ್‌ ಕಟ್‌ ಅರ್ಗಾನ್ಜಾ ಸೀರೆಗಳು, ಈ ಸೀಸನ್‌ನಲ್ಲೂ ಮುಂದುವರೆದಿವೆ. ಅವುಗಳಲ್ಲಿ ಕಟ್‌ ವರ್ಕ್‌ ಸ್ಕಾಲಪ್‌ ಬಾರ್ಡರ್‌, ಎಂಬ್ರಾಯ್ಡರಿ ಮತ್ತು ಜರಿ ಹೊಂದಿರುವ ಸ್ಕಾಲಪ್‌ ಕಟ್‌ ಬಾರ್ಡರ್‌, ಹ್ಯಾಂಡ್‌ ವೊವೆನ್‌ ಸ್ಕಾಲಪ್‌ ಬಾರ್ಡರ್‌, ಪರ್ಲ್‌ & ಬೀಡ್ಸ್‌ ಸ್ಕಾಲಪ್‌ ಬಾರ್ಡರ್‌ ಸಲೀಕ್‌ ಸ್ಕಾಲಪ್‌ ಬಾರ್ಡರ್‌ಗಳು ಅತಿ ಹೆಚ್ಚು ಪಾಪುಲರ್‌ ಆಗಿವೆ.

4/5

ಸೀರೆಯ ಲುಕ್‌ ಹೆಚ್ಚಿಸುವ ಸ್ಕಾಲಪ್‌ ಬಾರ್ಡರ್‌

ಲೈಟ್‌ವೈಟ್‌ ಸೀರೆಯನ್ನು ಹೈಲೈಟ್‌ ಮಾಡುವಂತಹ ವೆವ್ವಿ ಡಿಸೈನ್‌ನ ಸ್ಕಾಲಪ್‌ ಬಾರ್ಡರ್‌ಗಳು ಈ ಸೀಸನ್‌ನಲ್ಲಿ ನಾನಾ ಬಗೆಯ ಡಿಸೈನರ್‌ ಆರ್ಗಾನ್ಜಾ ಸೀರೆಗಳಲ್ಲಿ ಕಾಣ ಸಿಗುತ್ತಿವೆ. ವಿಶೇಷವೆಂದರೇ, ಇವು ಪ್ರಿಂಟೆಡ್‌ ಹಾಗೂ ಸಾದಾ ಡಿಸೈನ್‌ನ ಅರ್ಗನ್ಜಾ ಸೀರೆಗಳ ಲುಕ್ಕನ್ನೇ ಬದಲಿಸುತ್ತವೆ ಎನ್ನುತ್ತಾರೆ ಸೀರೆ ಡಿಸೈನರ್‌ ಚಶ್ಮಿ.

5/5

ಸ್ಕಾಲಪ್‌ ಡಿಸೈನ್‌ನ ಅರ್ಗಾನ್ಜಾ ಸೀರೆಯ ಆಯ್ಕೆ ಮತ್ತು ಸ್ಟೈಲಿಂಗ್‌

  • ಗ್ರ್ಯಾಂಡ್‌ ಲುಕ್‌ ಬೇಕಾದಲ್ಲಿ ಆದಷ್ಟೂ ಪರ್ಲ್‌, ಬೀಡ್ಸ್‌ ಇಲ್ಲವೇ ಹೆವ್ವಿ ಡಿಸೈನ್‌ನ ಸ್ಕಾಲಪ್‌ ಡಿಸೈನ್‌ನದ್ದನ್ನು ಆರಿಸಿಕೊಳ್ಳಿ.
  • ಸಿಂಪಲ್‌ ಲುಕ್‌ಗಾಗಿ ಥ್ರೆಡ್‌ ವರ್ಕ್‌ ಇಲ್ಲವೇ ಕಟ್‌ ವರ್ಕ್‌ ಇರುವಂತಹದ್ದನ್ನು ಆಯ್ಕೆ ಮಾಡಿಕೊಳ್ಳಬಹುದು.
  • ಸೀರೆಯಲ್ಲಿ ದೊರೆಯುವ ಬ್ಲೌಸ್‌ ಪೀಸ್‌ನಲ್ಲಿ ಬ್ಲೌಸ್‌ ಡಿಸೈನ್‌ ಮಾಡಿಸಿ, ಬಾರ್ಡರ್‌ ಬರುವಂತೆ ವಿನ್ಯಾಸ ಮಾಡಿಸಿ.
  • ಈ ಶೈಲಿಯ ಸೀರೆಗಳು ಇಂಡೋ-ವೆಸ್ಟರ್ನ್‌ ಲುಕ್‌ ನೀಡುತ್ತವೆ.
  • ಪರ್ಲ್‌ ಅಥವಾ ವಿಕ್ಟೋರಿಯನ್‌ ಡಿಸೈನ್‌ನ ಸಿಂಪಲ್‌ ಜ್ಯುವೆಲರಿ ಧರಿಸಿ.
  • ಸಿಂಪಲ್‌ ಮೇಕೋವರ್‌ ಮಾಡಿದರೇ ಸಾಕು!

ಶೀಲಾ ಸಿ ಶೆಟ್ಟಿ

View all posts by this author