Saree Fashion 2026: ಕಾರ್ಸೆಟ್‌ನಲ್ಲೂ ಬಂತು ರೆಡಿ ಸೀರೆಗಳು!
Pre-draped Corset Saree: ಇದೀಗ ಕಾರ್ಸೆಟ್ ಬ್ಲೌಸ್ ಹೊಂದಿರುವ ರೆಡಿಮೇಡ್ ಸೀರೆಗಳು ಅಂದರೇ ಪ್ರೀ ಡ್ರೇಪ್ಡ್ ಸೀರೆಗಳು ಆಗಮಿಸಿವೆ. ಇದ್ಯಾವ ಬಗೆಯ ರೆಡಿ ಸೀರೆ? ಸ್ಟೈಲಿಂಗ್ ಮಾಡುವವರು ಗಮನದಲ್ಲಿಟ್ಟು ಕೊಳ್ಳಬೇಕಾದ್ದೇನು? ಈ ಕುರಿತ ವಿವರ ಇಲ್ಲಿದೆ.
ರೆಡಿಮೇಡ್ ಕಾರ್ಸೆಟ್ ಸೀರೆಗಳು ಎಂಟ್ರಿ ನೀಡಿವೆ. ಹೌದು, ಇದುವರೆಗೂ ಸೀರೆಗಳಿಗೆ ಪ್ರತ್ಯೇಕವಾಗಿ ದೊರೆಯುತ್ತಿದ್ದ ಕಾರ್ಸೆಟ್ ಬ್ಲೌಸ್‌ಗಳು ಇದೀಗ ರೆಡಿಮೇಡ್ ಪ್ರೀ ಡ್ರೇಪ್ಡ್ ಸೀರೆಗಳೊಂದಿಗೆ ಜತೆಯಾಗಿವೆ. ಒಟ್ಟೊಟ್ಟಿಗೆ ಬಿಡುಗಡೆಯಾಗಿವೆ.
ಮಂಜು ಕುರಿಯನ್ ರೆಡಿಮೇಡ್ ಕಾರ್ಸೆಟ್ ಸೀರೆ
ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ನಟಿ ಮಂಜು ಕುರಿಯನ್ ಧರಿಸಿದ್ಧ ಪ್ರೀಡ್ರೇಪ್ಡ್ ಕಾರ್ಸೆಟ್ ಸೀರೆ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಮನ ಸೆಳೆದಿದೆ. ಡಿಫರೆಂಟ್ ಡಿಸೈನ್‌ನಿಂದಾಗಿ ಸೀರೆ ಪ್ರೇಮಿಗಳನ್ನು ಆಕರ್ಷಿಸಿದೆ.
ರೆಡಿಮೇಡ್ ಕಾರ್ಸೆಟ್ ಸೀರೆಗಳ ವಿಶೇಷತೆ
ಅಂದಹಾಗೆ, ಸೀರೆಗಳೊಂದಿಗೆ ಕಾರ್ಸೆಟ್ ಬ್ಲೌಸ್ ಇರುವುದನ್ನೇ ರೆಡಿಮೇಡ್ ಕಾರ್ಸೆಟ್ ಸೀರೆಗಳೆನ್ನಲಾಗುತ್ತದೆ. ಇದಕ್ಕೂ ಮೊದಲು ಸೀರೆಗಳಿಗೆ ಈ ಶೈಲಿಯ ಬ್ಲೌಸ್ ಮ್ಯಾಚ್ ಮಾಡಬೇಕಾಗಿತ್ತು. ಆದರೆ, ಈಗ ಅವುಗಳೊಂದಿಗೆ ಬ್ಲೌಸ್ ಕೂಡ ಬಂದಿರುವುದು ಕಾರ್ಸೆಟ್ ಪ್ರೇಮಿಗಳಿಗೆ ಸಂತಸ ತಂದಿದೆ ಎಂದಿದ್ದಾರೆ ಸ್ಟೈಲಿಸ್ಟ್ ರಾಗ.
ವೆರೈಟಿ ಡಿಸೈನ್ ಹಾಗೂ ಕಲರ್‌ನಲ್ಲಿ ಕಾರ್ಸೆಟ್ ಸೀರೆಗಳು
ಗೋಲ್ಡನ್, ಸಿಲ್ವರ್ ಹಾಗೂ ಶಿಮ್ಮರಿಂಗ್ ಕಾನ್ಸೆಪ್ಟ್‌ನಲ್ಲಿ ಟ್ರೆಂಡಿಯಾಗಿದ್ದ ಕಾರ್ಸೆಟ್ ಸೀರೆಗಳಲ್ಲಿ ಇದೀಗ ನಾನಾ ಕಲರ್‌ನವು ಲಭ್ಯ. ರಾಯಲ್ ಬ್ಲ್ಯೂ, ಪಿಂಕ್, ರೆಡ್, ಬ್ಲ್ಯಾಕ್, ಎಮರಾಲ್ಡ್ ಗ್ರೀನ್ ಹೀಗೆ ಡಾರ್ಕ್ ಕಲರ್‌ನವು ಅತಿ ಹೆಚ್ಚು ಟ್ರೆಂಡಿಯಾಗಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ರೆಡಿಮೇಡ್ ಕಾರ್ಸೆಟ್ ಸೀರೆ ಪ್ರಿಯರ ಗಮನಕ್ಕಿರಲಿ
1) ಪರ್ಸನಾಲಿಟಿಗೆ ತಕ್ಕಂತೆ ಆಯ್ಕೆ ಮಾಡುವುದು ಉತ್ತಮ.
2) ಇವು ಫಿಟ್ ಆಗಿ ಕೂರುವುದರಿಂದ ಟ್ರಯಲ್ ಮಾಡಿ, ನೋಡಿ ಕೊಳ್ಳಿ.
3) ಕಾರ್ಸೆಟ್ ರೆಡಿ ಸೀರೆಗೆ ಹೆಚ್ಚು ಆಕ್ಸೆಸರೀಸ್ ಬೇಡ. ಬಂಗಾರದವು ಮ್ಯಾಚ್ ಆಗುವುದಿಲ್ಲ.
4) ಇಂಡೋ-ವೆಸ್ಟರ್ನ್ ಸೀರೆ ಪ್ರಿಯರಿಗೆ ಇದು ಬೆಸ್ಟ್ ಅಪ್ಷನ್.
5) ಮೇಕಪ್ ಎಲ್ಲವೂ ಮ್ಯಾಚ್ ಆಗುವುದು ಅಗತ್ಯ.