Saree Fashion 2026: ಸೀಸನ್‌ಗೆ ಎಂಟ್ರಿ ನೀಡಿದ ಸ್ಕಲೋಪ್ಡ್ ಬಾರ್ಡರ್ ಸೀರೆಗಳು
ಈ ಸೀಸನ್‌ನಲ್ಲಿ ನಾನಾ ಬಗೆಯ ವೈವಿಧ್ಯಮಯ ಡಿಸೈನರ್ ಸ್ಕಲೋಪ್ಡ್ ಬಾರ್ಡರ್ ಸೀರೆಗಳು ಸೀರೆ ಲೋಕಕ್ಕೆ ಎಂಟ್ರಿ ನೀಡಿದ್ದು, ಒಂದಕ್ಕಿಂತ ಒಂದು ಭಿನ್ನ-ವಿಭಿನ್ನ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ. ಇದ್ಯಾವ ಬಗೆಯ ಸೀರೆ? ಏನಿದರ ವಿಶೇಷತೆ? ಇಲ್ಲಿದೆ ಡಿಟೇಲ್ಸ್.
ಸ್ಕಲೋಪ್ಡ್ ಬಾರ್ಡರ್ ಸೀರೆಗಳು ಟ್ರೆಂಡಿಯಾಗಿವೆ. ಹೌದು, ವಿಶೇಷವೆನಿಸುವ ಡಿಸೈನ್‌ನ ನಾನಾ ಬಗೆಯ ವೈವಿಧ್ಯಮಯ ಡಿಸೈನರ್ ಸ್ಕಲೋಪ್ಡ್ ಬಾರ್ಡರ್ ಸೀರೆಗಳು ಸೀರೆ ಲೋಕಕ್ಕೆ ಎಂಟ್ರಿ ನೀಡಿದ್ದು, ಒಂದಕ್ಕಿಂತ ಒಂದು ಭಿನ್ನ-ವಿಭಿನ್ನ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ.
ಕುಶಾ ಕಪಿಲಾ ಸ್ಕಲೋಪ್ಡ್ ಬಾರ್ಡರ್ ಸೀರೆ
ಫ್ಯಾಷನ್ ಶೂಟ್‌ವೊಂದರಲ್ಲಿ ನಟಿ ಕುಶಾ ಕಪಿಲಾ ಕಾಣಿಸಿಕೊಂಡ ಫ್ಲೋರಲ್ ಸ್ಕಲೋಪ್ಡ್ ಬಾರ್ಡರ್ ಸೀರೆಯು ಬಾರಿ ಬೇಡಿಕೆ ಸೃಷ್ಟಿಸಿಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಈ ಸೀರೆಯ ಫೋಟೋಗಳನ್ನು ಅಪ್‌ಲೋಡ್ ಮಾಡಿದ ನಂತರವಂತೂ ಸೀರೆ ಶಾಪಿಂಗ್ ಮಾಡಬಹುದಾದ ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ನಾನಾ ವೆರೈಟಿಗಳಲ್ಲಿ ಬಿಡುಗಡೆಗೊಂಡಿವೆ. ಅದರಲ್ಲೂ ಕುಶಾ ಕಪಿಲಾ ಧರಿಸಿದಂತಹ ಸೀರೆಗಂತೂ ಇನ್ನಿಲ್ಲದ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಆನ್‌ಲೈನ್ ಸೀರೆ ಶಾಪ್‌ವೊಂದರ ವ್ಯವಸ್ಥಾಪಕರಾದ ರಾಧಾ. ಅವರ ಪ್ರಕಾರ, ಈ ಸೀರೆಗಳು ಮೊದಲಿನಿಂದಲೂ ಇದ್ದವು. ಇದೀಗ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ ಎನ್ನುತ್ತಾರೆ.
ಫ್ಲೋರಲ್ ಎಂಬ್ರಾಯ್ಡರಿ ಸ್ಕಲೋಪ್ಡ್ ಸೀರೆ
ಅಂದಹಾಗೆ, ನಟಿ ಕುಶಾ ಧರಿಸಿರುವ ಸೀರೆ ಫ್ಲೋರಲ್ ಎಂಬ್ರಾಯ್ಡರಿ ಹೊಂದಿದ್ದು, ಅತ್ಯಾಕರ್ಷಕವಾಗಿದೆ. ಇದಕ್ಕೆ ಹಾರ್ಟ್ ಶೇಪ್‌ನ ಸ್ಕಲೋಪ್ಡ್ ಬಾರ್ಡರ್ ಇರುವುದು ಮತ್ತಷ್ಟು ಮೆರಗು ತಂದಿದೆ ಎಂದಿದ್ದಾರೆ ಫ್ಯಾಷನ್ ವಿಮರ್ಶಕರು.
ಸ್ಕಲೋಪ್ಡ್ ಬಾರ್ಡರ್ ಸೀರೆ ವಿಶೇಷತೆ
ಸಿಂಪಲ್ ಆಗಿ ಹೇಳುವುದಾದಲ್ಲಿ, ವೆವ್ವಿ ಶೇಪ್‌ನಲ್ಲಿ ಬಾರ್ಡರನ್ನು ಡಿಸೈನ್ ಮಾಡಿರುವುದು ಅಥವಾ ಕರ್ವ್ ಶೇಪ್‌ನಲ್ಲಿ ಅಥವಾ ರೌಂಡ್ ಶೇಪ್‌ನಲ್ಲಿ ಸೇರಿದಂತೆ ನಾನಾ ಆಕಾರದಲ್ಲಿ ಬಾರ್ಡರನ್ನು ವಿನ್ಯಾಸಗೊಳಿಸುವುದನ್ನು ಸ್ಕಲೋಪ್ಡ್ ಡಿಸೈನ್ ಎನ್ನಲಾಗುತ್ತದೆ.
ಸ್ಕಲೋಪ್ಡ್ ಬಾರ್ಡರ್ ಸೀರೆ ಸ್ಟೈಲಿಂಗ್‌ಗೆ 5 ಟಿಪ್ಸ್
- ಡಿಫರೆಂಟ್ ಬಾರ್ಡರ್ ಲುಕ್ ನೀಡುವ ಇವನ್ನು ನಾನಾ ಬಗೆಯಲ್ಲಿ ಡ್ರೇಪ್ ಮಾಡಬಹುದು.
- ಬಾರ್ಡರ್‌ಗಳು ಹೆಚ್ಚು ಹೈಲೈಟಾಗುತ್ತವೆ. ಹಾಗಾಗಿ ಆಕ್ಸೆಸರೀಸ್ ಮಿನಿಮಲ್ ಧರಿಸುವುದು ಉತ್ತಮ.
- ಸ್ಕಲೋಪ್ಡ್ ಬಾರ್ಡರ್ ಡಿಸೈನ್ ಮಾಡಿಸುವಾಗ ಆಯಾ ಸೀರೆಗೆ ತಕ್ಕಂತೆ ವಿನ್ಯಾಸ ಮಾಡಲು ತಿಳಿಸಿ.
- ಸಾದಾ ವಿನ್ಯಾಸದವು ಸಿಂಪಲ್ ಲುಕ್ ನೀಡುತ್ತವೆ.
- ಇದೀಗ ಜಾಯಿನ್ ಮಾಡಬಹುದಾದ ರೆಡಿ ಲೇಸ್‌ನಂತಹ ಸ್ಕಲೋಪ್ಡ್ ಬಾರ್ಡರ್ ಕೂಡ ಲಭ್ಯ. ಸ್ಟಿಚ್ಚಿಂಗ್ ಮಾಡಿದರಾಯಿತು.