ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Saree Shopping Ideas 2026: ಗೌರಿ ಹಬ್ಬಕ್ಕೆ ಟ್ರೆಂಡಿಯಾಗಿರುವ ಸೀರೆ ಶಾಪಿಂಗ್‌ಗೆ ಇಲ್ಲಿವೆ 5 ಸಿಂಪಲ್ ಐಡಿಯಾ

ಗೌರಿ ಹಬ್ಬದ ಸೀರೆ ಶಾಪಿಂಗ್ ಈಗಾಗಲೇ ಎಲ್ಲೆಡೆ ಭರದಿಂದ ಸಾಗಿದೆ. ಹಬ್ಬ ಸಮೀಪಿಸುತ್ತಿದ್ದಂತೆ ಬಗೆಬಗೆಯ ಸೀರೆ ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗೌರಿ ಹಬ್ಬದ ಸೆಲೆಬ್ರೆಷನ್‌ಗೆ ಟ್ರೆಂಡಿಯಾಗಿರುವ ಸೀರೆ ಖರೀದಿಗೆ ತೆರಳುವಾಗ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ಸ್. ಈ ಕುರಿತಂತೆ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

ಚಿತ್ರಕೃಪೆ: ಮಿಂಚು
1/5

ಈಗಾಗಲೇ ಗೌರಿ ಹಬ್ಬದ ಸೀರೆ ಶಾಪಿಂಗ್ ಎಲ್ಲೆಡೆ ಭರದಿಂದ ಸಾಗಿದೆ. ಹಬ್ಬ ಸಮೀಪಿಸುತ್ತಿದ್ದಂತೆ ಬಗೆಬಗೆಯ ಸೀರೆ ಖರೀದಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಬ್ಬಕ್ಕೆ ನೀವೂ ಕೂಡ ಸೀರೆ ಖರೀದಿಸುತ್ತಿದ್ದೀರಾ? ಹಾಗಾದಲ್ಲಿ, ಸೀರೆ ಖರೀದಿಗೆ ಮುನ್ನ ಅಥವಾ ಖರೀದಿಸುವಾಗ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಿ, ಈ ಐಡಿಯಾ ಫಾಲೋ ಮಾಡಿ ಎನ್ನುತ್ತಾರೆ ಸೀರೆ ಎಕ್ಸ್‌ಪರ್ಟ್ ಅಂಜಲಿ.

2/5

ಮೊದಲು ನಿಮ್ಮ ಸೀರೆ ವಾರ್ಡ್ರೋಬ್ ಚೆಕ್ ಮಾಡಿ

ಹಬ್ಬದ ಸೀರೆ ಶಾಪಿಂಗ್‌ಗೆ ಹೋಗುವ ಮುನ್ನ ನಿಮ್ಮ ವಾರ್ಡ್ರೋಬ್‌ನಲ್ಲಿ ಯಾವ್ಯಾವ ವರ್ಣದ ವಿನ್ಯಾಸದ ಹಾಗೂ ಶೇಡ್‌ನ ಸೀರೆಗಳಿವೆ ಎಂಬುದನ್ನು ವಾರ್ಡ್ರೋಬ್ ಚೆಕ್ ಮಾಡಿ ತಿಳಿದುಕೊಂಡಿರಿ. ಖರೀದಿ ಅತುರದಲ್ಲಿ ಒಂದೇ ಬಗೆಯ ಹಾಗೂ ವಿನ್ಯಾಸದ ಅದೇ ವರ್ಣದ ಸೀರೆಗಳನ್ನು ಕೊಂಡು ಬರುವಂತಾಗಬಾರದು.

3/5

ಸೀರೆಯ ಬಜೆಟ್ ಪ್ಲಾನಿಂಗ್ ಮಾಡಿ

ಹಬ್ಬದ ಸೀರೆ ಖರೀದಿಗೆ ಪ್ಲ್ಯಾನ್ ಮಾಡಿದ ತಕ್ಷಣ ಎಷ್ಟು ಬೆಲೆಯ ಸೀರೆಗಳನ್ನು ಖರೀದಿಸಬೇಕು? ಎಷ್ಟು ಸೀರೆಯ ಅಗತ್ಯವಿದೆ? ಎಂಬುದರ ಬಗ್ಗೆ ಮೊದಲೇ ನಿರ್ಧರಿಸಿ, ತೆರಳಿ. ಕೊಳ್ಳುವಾಗ ಈ ಬಗ್ಗೆ ಚರ್ಚಿಸುವ ಅಗತ್ಯವಿರುವುದಿಲ್ಲ ಹಾಗೂ ಗೊಂದಲವೂ ಉಂಟಾಗುವುದಿಲ್ಲ.

4/5

ಆನ್‌ಲೈನ್‌ನಲ್ಲಿ ಸೀರೆ ಖರೀದಿ ಮಾಡುವುದಾದಲ್ಲಿ…

ಆನ್‌ಲೈನ್‌ನ ಶಾಪ್‌ಗಳಲ್ಲಿ ಈ ಬಾರಿಯ ಫೆಸ್ಟಿವ್ ಸೀಸನ್‌ಗೆ ಟ್ರೆಂಡಿಯಾಗಿರುವ ಸೀರೆಗಳ ಝಲಕ್ ನೋಡಿ. ಆನ್‌ಲೈನ್‌ನಲ್ಲಿ ಖರೀದಿಸುವುದಾದಲ್ಲಿ ಪ್ರಿಂಟ್ಸ್, ಕ್ವಾಲಿಟಿ ಬಗ್ಗೆ ಗ್ಯಾರಂಟಿ ಇರುವುದಿಲ್ಲ. ಬ್ರಾಂಡೆಡ್ ಹಾಗೂ ಬೋಟಿಕ್ ಸೀರೆಗಳಾದಲ್ಲಿ ಮಾತ್ರ ಎಕ್ಸ್‌ಚೇಂಜ್‌ ಸೌಲಭ್ಯ ಇರುತ್ತದೆ. ಹಾಗಾಗಿ ಬ್ರಾಂಡೆಡ್ ಸೀರೆಗಳಿಗೆ ಆದ್ಯತೆ ನೀಡಿ. ಆಗ ಹೆಚ್ಚು ತಲೆಬಿಸಿ ಇರುವುದಿಲ್ಲ.

5/5

ಸೀರೆ ಸೆಂಟರ್ ಅಥವಾ ಶೋ ರೂಮ್‌ಗಳಲ್ಲಿ ಖರೀದಿಸಿ

ಆದಷ್ಟೂ ಆಫ್‌ಲೈನ್ ಅಂದರೆ, ಅಂಗಡಿ ಅಥವಾ ಶೋ ರೂಮ್‌ಗೆ ಭೇಟಿ ನೀಡಿ ಖರೀದಿಸಿ. ಗ್ರಾಹಕ ಸ್ನೇಹಿ ಶೋರೂಂಗೆ ತೆರಳಿ. ಯಾಕೆಂದರೆ, ನಿಮಗೆ ಕಣ್ಣಿಗೆ ಕಾಣುವ ಸಾಕಷ್ಟು ಬಗೆಯ ಸೀರೆಗಳನ್ನು ಕಣ್ತುಂಬಿಸಿಕೊಳ್ಳಬಹುದಲ್ಲದೇ, ಮೈ ಮೇಲೆ ಹಾಕಿಕೊಂಡು ಟ್ರಯಲ್‌ ಕೂಡ ನೋಡುವ ಅವಕಾಶವಿರುತ್ತದೆ.

ಬ್ರ್ಯಾಂಡ್ ಹಾಗೂ ಗುಣಮಟ್ಟಕ್ಕೆ ಆದ್ಯತೆ

ಗೌರಿ ಹಬ್ಬದ ಈ ಸೀಸನ್‌ನಲ್ಲಿ ಮಾರುಕಟ್ಟೆಯಲ್ಲಿ ನಾನಾ ಬಗೆಯ ಸಿಲ್ಕ್‌ ಹಾಗೂ ಇನ್ನಿತರೇ ಫ್ಯಾಬ್ರಿಕ್‌ನ ಸೀರೆಗಳು ಮಾರುಕಟ್ಟೆಗೆ ಆಗಮಿಸಿವೆ. ಅವುಗಳ ಗುಣಮಟ್ಟ ಹಾಗೂ ಟೆಕ್ಸ್ಚರ್ ನೋಡಿ ಖರೀದಿಸಿ. ಕಲರ್‌ ಹಾಗೂ ಡಿಸೈನ್‌ಗೆ ಮಾರು ಹೋಗಬೇಡಿ.

ಶೀಲಾ ಸಿ ಶೆಟ್ಟಿ

View all posts by this author