ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prithwi Bhat: ಹನಿಮೂನ್​ಗೆ ಮಲೇಷ್ಯಾಕ್ಕೆ ಹಾರಿದ ಪೃಥ್ವಿ ಭಟ್: ಫೋಟೋ ನೋಡಿ

Sarigamapa Prithwi Bhat: ಪೋಷಕರ ವಿರೋಧದ ನಡುವೆಯೂ ಪೃಥ್ವಿ ಭಟ್ ದೇವಾಲಯದಲ್ಲಿ ಮಾರ್ಚ್‌ 27 ರಂದು ಅಭಿಷೇಕ್‌ ಅವರೊಂದಿಗೆ ಮದುವೆಯಾಗಿದ್ದರು. ಬಳಿಕ ಅದ್ಧೂರಿಯಾಗಿ ಗಾಯಕಿ ರಿಸೆಪ್ಶನ್‌ ಮಾಡಿಕೊಂಡಿದ್ದಾರೆ. ಇದೀಗ ಈ ಜೋಡಿ ಹನಿಮೂನ್ಗೆಂದು ಮಲೇಷ್ಯಾಕ್ಕೆ ಹಾರಿದೆ.

Prithwi Bhat
1/6

ಝೀ ಕನ್ನಡದ ಸರಿಗಮಪ ಗಾಯಕಿ ಪೃಥ್ವಿ ಭಟ್ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ತಾನು ಪ್ರೀತಿಸಿ ಹುಡುಗನನ್ನು ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಮಗಳ ವಿವಾಹದ ಬಳಿಕ ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಲ್ಲಿಂದ ಗಾಯಕಿಯ ಮದುವೆ ವಿವಾದ ವಿಷಯವಾಗಿತ್ತು.

2/6

ಪೋಷಕರ ವಿರೋಧದ ನಡುವೆಯೂ ಪೃಥ್ವಿ ಭಟ್ ದೇವಾಲಯದಲ್ಲಿ ಮಾರ್ಚ್‌ 27 ರಂದು ಅಭಿಷೇಕ್‌ ಅವರೊಂದಿಗೆ ಮದುವೆಯಾಗಿದ್ದರು. ಬಳಿಕ ಅದ್ಧೂರಿಯಾಗಿ ಗಾಯಕಿ ರಿಸೆಪ್ಶನ್‌ ಮಾಡಿಕೊಂಡಿದ್ದಾರೆ. ಇದೀಗ ಈ ಜೋಡಿ ಹನಿಮೂನ್​ಗೆಂದು ಮಲೇಷ್ಯಾಕ್ಕೆ ಹಾರಿದೆ.

3/6

ಪೃಥ್ವಿ ಭಟ್ ಹಾಗೂ ಅಭಿಷೇಕ್‌ ಮಲೇಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಮಲೇಷ್ಯಾದಲ್ಲಿನ ಜಗತ್‌ಪ್ರಸಿದ್ಧ ಮುರುಗಾ ದೇವಸ್ಥಾನ, ಬಟು ಗುಹೆಗಳಿಗೆ ಪೃಥ್ವಿ ಭಟ್ ಮತ್ತು ಅಭಿಷೇಕ್‌ ದಂಪತಿ ಭೇಟಿ ಕೊಟ್ಟಿದ್ದಾರೆ. ಇವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

4/6

ಮಲೇಷ್ಯಾದ ಕೌಲಾಲಂಪುರ್‌ನಲ್ಲಿರುವ ಪೆಟ್ರೋನಾಸ್ ಟ್ವಿನ್ ಟವರ್ಸ್‌ಗೆ ಪೃಥ್ವಿ ಭಟ್‌ ಭೇಟಿ ಕೊಟ್ಟಿದ್ದಾರೆ. ಹಾಗೆಯೆ ಮಲೇಷ್ಯಾದಲ್ಲಿರುವ ಪ್ರೇಕ್ಷಣೀಯ ಸ್ಥಳ ಬಟು ಕೇವ್ಸ್. ಇಲ್ಲಿಗೆ ಮಿಸ್ ಮಾಡದೆ ಪತಿ ಜೊತೆ ಪೃಥ್ವಿ ಭಟ್‌ ವಿಸಿಟ್ ಹಾಕಿದ್ದಾರೆ.

5/6

ಇತ್ತೀಚೆಗಷ್ಟೆ ನಡೆದಿದ್ದ ಗಾಯಕಿ ಪೃಥ್ವಿ ಭಟ್ ಹಾಗೂ ಅಭಿಷೇಕ್‌ ರಿಸೆಪ್ಶನ್​ಗೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ಬಂದಿದ್ದರು. ನಿರೂಪಕಿ ಅನುಶ್ರೀ, ನಟಿ ಮೋಕ್ಷಿತಾ, ಪೈ, ಬಿಗ್​ಬಾಸ್​ ಸೀಸನ್ 11ರ ವಿನ್ನರ್​, ಗಾಯಕ ಹನುಮಂತ ಲಮಾಣಿ ಬಂದಿದ್ದಾರೆ. ಅಲ್ಲದೇ ಸ್ಟಾರ್​ ಗಾಯಕ ವಿಜಯ್​ ಪ್ರಕಾಶ್ ದಂಪತಿ, ನಟ ಒಳ್ಳೆ ಹುಡುಗ ಪ್ರಥಮ್, ಸಿಂಗರ್ ಸುನೀಲ್, ಹಂಸಲೇಖ ಅವರ ಪತ್ನಿ ಲತಾ ಹಾಗೂ ಸರಿಗಮಪ ಸ್ಪರ್ಧಿಗಳು ಕೂಡ ಆಗಮಿಸಿದ್ದಾರೆ.

6/6

ಝೀ ಕನ್ನಡದ ಸರಿಗಮಪ ಶೋನಲ್ಲಿ ಪೃಥ್ವಿ ಭಟ್ ಭಾಗವಹಿಸಿದ ವೇಳೆ ಅಭಿಷೇಕ್ ಜೊತೆ ಪ್ರೀತಿ ಹುಟ್ಟಿತ್ತು. ಅಭಿಷೇಕ್ ಝೀ ಕನ್ನಡದಲ್ಲಿ ಎಕ್ಸ್‌ಕ್ಯೂಟಿವ್ ಪ್ರಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಒಂದಿಷ್ಟು ವರ್ಷದ ಪ್ರೀತಿಯ ಬಳಿಕ ಪೃಥ್ವಿ ಭಟ್ ಹಾಗೂ ಅಭಿಷೇಕ್ ಇಬ್ಬರೂ ಮದುವೆ ಆಗುವುದಕ್ಕೆ ನಿರ್ಧರಿಸಿದ್ದರು.