ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Photos: 'ಕಿಚ್ಚ' ಸುದೀಪ್ ಸಹೋದರಿ ಪುತ್ರನ ಮದುವೆ ಆರತಕ್ಷತೆ; ಈ ಅದ್ದೂರಿ ಸಮಾರಂಭಕ್ಕೆ ಯಾರೆಲ್ಲಾ ಬಂದಿದ್ರು ನೋಡಿ

ನಟ ಕಿಚ್ಚ ಸುದೀಪ್ ಅವರ ಸಹೋದರಿ ಸುರೇಖಾ ಮತ್ತು ಮೋಹನ್ ಸುರೇಶ್ ದಂಪತಿಯ ಪುತ್ರ ಶರಣ್ ಮತ್ತು ತಾರಿಣಿ ಅವರ ವೆಡ್ಡಿಂಗ್ ರಿಸೆಪ್ಷನ್ ಬೆಂಗಳೂರಿನಲ್ಲಿ ಡಿಸೆಂಬರ್ 4 ರಂದು ಬೆಂಗಳೂರಿನ ಚಾಮರ ವಜ್ರದಲ್ಲಿ ಈ ಅದ್ಧೂರಿ ಸಮಾರಂಭ ಜರುಗಿತು. ಶರಣ್ ಮತ್ತು ತಾರಿಣಿ ಜೋಡಿಯ ಆರತಕ್ಷತೆ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ತಾರೆಯರು, ರಾಜಕಾರಣಿಗಳು ಹಾಗೂ ಅನೇಕ ಗಣ್ಯರು ಸಾಕ್ಷಿಯಾದರು. ಸಹೋದರಿಯ ಮಗನ ಮದುವೆಯಲ್ಲಿ ನಟ ಕಿಚ್ಚ ಸುದೀಪ್ ಅವರು ತಮ್ಮ ಕುಟುಂಬ ಸಮೇತ ಹಾಜರಾಗಿ, ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದರು. ಇಲ್ಲಿವೆ ನೋಡಿ ಈ ಕಲರ್‌ಫುಲ್‌ ಸಮಾರಂಭದ ಫೋಟೋಗಳು.

1/8

ಸುರೇಖಾ ಅವರ ಮಗನ ಮದುವೆಯಲ್ಲಿ ಸಚಿವ ಸತೀಶ್‌ ಜಾರಕಿಹೊಳಿ ಆಗಮನ

2/8

ಕಿಚ್ಚ ಸುದೀಪ್‌ ಅವರ ಜೊತೆ ರಾಜು ಗೌಡ ಮತ್ತು ಚಕ್ರವರ್ತಿ ಚಂದ್ರಚೂಡ್

3/8

ಶರಣ್‌ ಮತ್ತು ತಾರಿಣಿ ಜೋಡಿಗೆ ಆಶೀರ್ವಾದ ಮಾಡಿದ ಸಚಿವ ಸತೀಶ್‌ ಜಾರಕಿಹೊಳಿ

4/8

ಅದ್ದೂರಿ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಅನೇಕ ನಟ-ನಟಿಯರು ಆಗಮಿಸಿ ಶುಭಕೋರಿದ್ದಾರೆ

5/8

ಕಿಚ್ಚ ಸುದೀಪ್ ಸಹೋದರಿ ಪುತ್ರನ ಮದುವೆ ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದೆ

6/8

ಸುದೀಪ್ ಕುಟುಂಬದ ಮದುವೆ ಸಂಭ್ರಮ ನೋಡಲು ಸ್ಯಾಂಡಲ್‌ವುಡ್ ಮತ್ತು ರಾಜಕೀಯ ನಾಯಕರ ಆಗಮನ

7/8

ಬೆಂಗಳೂರಿನ ಚಾಮರ ವಜ್ರದಲ್ಲಿ ನಡೆದ ಮದುವೆಯಲ್ಲಿ ಸಂಭ್ರಮ ಮನೆ ಮಾಡಿತ್ತು, ಆರತಕ್ಷತೆ ವೈಭವದಿಂದ ಕೂಡಿತ್ತು.

8/8

ನಟ ಸುದೀಪ್ ಕುಟುಂಬ ಸಮೇತ ಹಾಜರಾಗಿ ಎಲ್ಲರ ಗಮನ ಸೆಳೆದರು