ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Season Fashion 2026: ಪಂಜಾಬಿ ಸೂಟ್‌ನೊಂದಿಗೆ ಬೆರೆತ ಬಾಂದನಿ ವಿನ್ಯಾಸ

ಇದೀಗ ಪಂಜಾಬಿ ಸೂಟ್‌ನಲ್ಲಿ ಬಾಂದನಿ ವಿನ್ಯಾಸ ಬೆರೆತಿದೆ. ಇದಕ್ಕೆ ಪೂರಕ ಎಂಬಂತೆ, ನಟಿ ಸರ್ಗುನ್ ಮೆಹ್ತಾ ಧರಿಸಿದ್ದ ವೈಬ್ರೆಂಟ್‌ ಪಿಂಕ್‌ ಕಲರ್‌ನ ಈ ಉಡುಗೆ ಫ್ಯಾಷನ್‌ಲೋಕದಲ್ಲಿ ವೈರಲ್‌ ಆಗಿದೆ. ಇದ್ಯಾವ ಬಗೆಯ ಔಟ್‌ಫಿಟ್‌? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಸರ್ಗುನ್ ಮೆಹ್ತಾ, ನಟಿ
1/5

ಪಂಜಾಬಿ ಸೂಟ್‌ನಲ್ಲಿ ಇದೀಗ ಬಾಂದನಿ ವಿನ್ಯಾಸ ಬೆರೆತಿದೆ. ಹೊಸ ಲುಕ್‌ನಲ್ಲಿ ಹಾಗೂ ವೈಬ್ರೆಂಟ್‌ ಕಲರ್‌ನಲ್ಲಿ ಕಾಣಿಸಿಕೊಂಡು ಟ್ರೆಂಡಿಯಾಗಿವೆ.

2/5

ಬಾಂದನಿಯೊಂದಿಗೆ ಬೆರೆತ ಪಂಜಾಬಿ ಸೂಟ್‌

ಹೌದು, ಇದೀಗ ಪಂಜಾಬಿ ಸಲ್ವಾರ್‌ ಸೂಟ್‌ನಲ್ಲಿ ಟಿಪಿಕಲ್‌ ಬಾಂದನಿ ವಿನ್ಯಾಸದವು ಟ್ರೆಂಡಿಯಾಗಿದೆ. ನೋಡಲು ಅತ್ಯಾಕರ್ಷಕವಾಗಿ ಕಾಣಿಸುವ ಈ ಬಾಂದನಿ ವಿನ್ಯಾಸ ದ ಪಂಜಾಬಿ ಸೂಟ್‌ಗಳು ನೋಡಲು ತಕ್ಷಣಕ್ಕೆ ಕೋ ಆರ್ಡ್ ಸೆಟ್‌ಗಳಂತೆ ಕಾಣಿಸುತ್ತಿವೆ.

3/5

ಸರ್ಗುನ್ ಮೆಹ್ತಾ ಧರಿಸಿದ್ಧ ಬಾಂದನಿ ಪಂಜಾಬಿ ಸೂಟ್‌

ಇವೆಂಟ್‌ವೊಂದರಲ್ಲಿ ನಟಿ ಸರ್ಗುನ್ ಮೆಹ್ತಾ ಧರಿಸಿದ್ದ, ರಾಹುಲ್‌ ಕಪೂರ್‌ ಡಿಸೈನ್‌ನ ಪಿಂಕ್‌ ಪಂಜಾಬಿ ಸಲ್ವಾರ್‌ ಸೂಟ್‌ ಯಾವ ಮಟ್ಟಿಗೆ ಸಲ್ವಾರ್‌ ಪ್ರಿಯರನ್ನು ಆಕರ್ಷಿಸಿದೆ ಎಂದರೇ, ಎಥ್ನಿಕ್‌ ಲುಕ್‌ ಬಯಸುವವರೆಲ್ಲರೂ ಈ ಔಟ್‌ಫಿಟ್‌ಗೆ ಮಾರುಹೋಗಲಾರಂಭಿಸಿದ್ದಾರೆ. ಪರಿಣಾಮ, ಆನ್‌ಲೈನ್‌ ಶಾಪ್‌ಗಳಲ್ಲಿ ಬೇಡಿಕೆ ಹೆಚ್ಚಾಗಿದೆ.

4/5

ಬಾಂದನಿ ಪಂಜಾಬಿ ಸೂಟ್‌ ವಿಶೇಷತೆ

ಮೂಲತಃ ಪಂಜಾಬಿನ ಟ್ರೆಡಿಷನಲ್‌ ಸೂಟ್‌ನಲ್ಲಿ ಸೇರುವ ಪಂಜಾಬಿ ಸೂಟ್‌ ತ್ರೀ ಪೀಸ್‌ ಉಡುಗೆಯಾಗಿದೆ. ಕುರ್ತಾ, ದುಪಟ್ಟಾ ಹಾಗೂ ದೊಗಲೆಯಾಗಿರುವ ಪ್ಯಾಂಟ್‌ ಹೊಂದಿರುತ್ತವೆ. ಇದೀಗ ಕಂಪ್ಲೀಟ್‌ ವಿಭಿನ್ನ ಲುಕ್‌ ನೀಡುವಂತಹ ಬಾಂದನಿ ಟೈ & ಡೈ ವಿನ್ಯಾಸದೊಂದಿಗೆ ಬೆರೆತು ಬಾಂದನಿ ಪಂಜಾಬಿ ಸೂಟ್‌ ಎಂದೆನಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

5/5

ವೈಬ್ರೆಂಟ್‌ ಕಲರ್ಸ್ ಕಮಾಲ್‌

ಪಂಜಾಬಿ ಸೂಟ್‌ನಲ್ಲಿ ಇದೀಗ ವೈಬ್ರೆಂಟ್‌ ಪಿಂಕ್‌, ಯೆಲ್ಲೋ, ಹಸಿರು, ನೀಲಿ ಸೇರಿದಂತೆ ಸಾಕಷ್ಟು ಕಲರ್‌ಗಳು ಒಂದಾಗಿವೆ. ಉಡುಗೆಯನ್ನು ಹೈಲೈಟ್‌ ಮಾಡುತ್ತಿವೆ.

ಶೀಲಾ ಸಿ ಶೆಟ್ಟಿ

View all posts by this author