ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Season Fashion 2026: ಮಾಡರ್ನ್ ಲುಕ್ ನೀಡುವ ಬಿಗ್ ಹೂಪ್ ಇಯರಿಂಗ್ಸ್

ಮಾಡರ್ನ್ ಲುಕ್ ನೀಡುವ ಬಿಗ್ ಹೂಪ್ ಇಯರಿಂಗ್ಸ್ ಮರಳಿ ಮಾನಿನಿಯರ ಕಿವಿಗಳನ್ನು ಅಲಂಕರಿಸುತ್ತಿವೆ. ಕೈಗಳ ಬಳೆಗಳಂತೆ ಕಾಣುವ ಬಿಗ್ ಹೂಪ್ ಇಯರಿಂಗ್‌ಗಳು ಈ ಸೀಸನ್‌ನ ಫ್ಯಾಷನ್ ಆಕ್ಸೆಸರೀಸ್ ಟ್ರೆಂಡ್‌ನಲ್ಲಿ ಸೇರಿವೆ. ಈ ಕುರಿತ ಮಾಹಿತಿ ಇಲ್ಲಿದೆ.

ಚಿತ್ರಗಳು: ಪಿಕ್ಸೆಲ್
1/5

ಕೈಗಳ ಬಳೆಗಳಂತೆ ಕಾಣುವ ಬಿಗ್ ಹೂಪ್ ಇಯರಿಂಗ್‌ಗಳು ಈ ಸೀಸನ್‌ನ ಫ್ಯಾಷನ್ ಆಕ್ಸೆಸರೀಸ್ ಟ್ರೆಂಡ್‌ನಲ್ಲಿ ಸೇರಿವೆ. ಚಿಕ್ಕ ಪುಟ್ಟ ಹೂಪ್ ರಿಂಗ್‌ಗಳು ಸೈಡಿಗೆ ಸರಿದಿವೆ. ಹೌದು, ಈಗೇನಿದ್ದರೂ ಕೈಗಳ ಬಳೆಗಿಂತ ದೊಡ್ಡದಾಗಿರುವ ರೌಂಡ್ ಹೂಪ್ ಇಯರಿಂಗ್‌ಗಳ ಕಾಲ! ಎನ್ನುತ್ತಾರೆ ಜ್ಯುವೆಲ್ ಸ್ಟೈಲಿಸ್ಟ್‌ಗಳು.

2/5

ಬಗೆಬಗೆಯ ಹೂಪ್ ರಿಂಗ್ ಫ್ಯಾಷನ್

ಬಿಗ್ ಸರ್ಕಲ್ ಹೂಪ್ ರಿಂಗ್, ಚಕ್ಕುಲಿಯಾಕಾರದ ಹೂಪ್ ರಿಂಗ್, ಒಂದರೊಳಗೆ ಮತ್ತೊಂದು ಸೇರಿಕೊಂಡಂತಿರುವ ಮರ್ಜ್ ಆಗಿರುವ ಹೂಪ್ ಇಯರಿಂಗ್, ಹಾಫ್ ಸರ್ಕಲ್ ಹೂಪ್ ಇಯರಿಂಗ್, ಸ್ಟಡ್ಸ್ ಶೈಲಿಯವು ಹೆಚ್ಚು ಪ್ರಚಲಿತದಲ್ಲಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಕಲರ್ನವು ಫಂಕಿ ಲುಕ್‌ನಲ್ಲಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ.

3/5

ಡಬಲ್ ಸ್ಟಡ್ಸ್ ವಿನ್ಯಾಸ

ಕೆಲವು ಹೂಪ್‌ಗಳಲ್ಲಿಒಂದರ ಒಳಗೊಂದರಂತೆ ಇರುವ ಹೂಪ್‌ನ ಡಬ್ಬಲ್, ತ್ರಿಬಲ್ ಸ್ಟಡ್ ಇಯರಿಂಗ್ಸ್ ಕೂಡ ಪ್ರಚಲಿತದಲ್ಲಿವೆ. ಅದರಲ್ಲೂ ಫ್ಯಾಷನ್ ಕ್ಷೇತ್ರದಲ್ಲಿರುವ ಮಾಡೆಲ್‌ಗಳು, ಸೆಲೆಬ್ರೆಟಿಗಳು ಇವನ್ನು ಅತಿ ಹೆಚ್ಚಾಗಿ ಧರಿಸಲಾರಂಭಿಸಿದ್ದಾರೆ.

4/5

ಕಲರ್ ಹೂಪ್ ರಿಂಗ್ಸ್

ಇನ್ನು, ಕಲರ್ ಹೂಪ್ ಕಿವಿಯ ರಿಂಗ್‌ಗಳನ್ನು ಮ್ಯಾಚಿಂಗ್ ಡ್ರೆಸ್‌ಗೆ ತಕ್ಕಂತೆ ಧರಿಸಬಹುದು. ಮೆಟಲ್ ಹಾಗೂ ನಾನ್ ಮೆಟಲ್‌ನಲ್ಲಿ ಲಭ್ಯವಿರುವ ಇವು ನೋಡಲು ಯಂಗ್ ಲುಕ್ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.

5/5

ಹೂಪ್ ರಿಂಗ್ಸ್ ಪ್ರಿಯರ ಗಮನಕ್ಕೆ

  • ಫ್ಯಾಷನೆಬಲ್ ಡ್ರೆಸ್‌ಗಳಿಗೆ ಬೆಸ್ಟ್ ಸೆಲೆಕ್ಷನ್.
  • ಕ್ಯಾಶುವಲ್ ವೀಕೆಂಡ್ ಪಾರ್ಟಿಗೆ ಗ್ರಾಂಡ್ ಲುಕ್ ಕೊಡುತ್ತವೆ.
  • ನೋಡಲು ಒಂದೇ ತರಹದ್ದಾಗಿದ್ದರೂ ಹೆಚ್ಚು ಆಪ್ಷನ್‌ಗಳಿವೆ.
  • ಸಾಂಪ್ರದಾಯಿಕ ಡ್ರೆಸ್‌ಗಳಿಗೆ ಫಂಕಿ ಹೂಪ್ ಇಯರಿಂಗ್ ಸೂಕ್ತವಲ್ಲ.
  • ಮಾರ್ಡನ್ ಡ್ರೆಸ್‌ಗಳಿಗೆ ಮ್ಯಾಚ್ ಆಗುತ್ತವೆ.
  • ಸೀದಾ ಸದಾ ಸೀರೆಗೆ ಇವನ್ನು ಧರಿಸಬಹುದು.
  • ಈ ಇಯರಿಂಗ್‌ಗಳು ಯಂಗ್ ಲುಕ್ ನೀಡುತ್ತವೆ.

ಶೀಲಾ ಸಿ ಶೆಟ್ಟಿ

View all posts by this author