ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Season Fashion 2026: ಹೊಸ ರೂಪದಲ್ಲಿ ಮತ್ತೆ ಎಂಟ್ರಿ ಕೊಟ್ಟ ಗ್ರ್ಯಾಂಡ್ ಘರಾರ!

ತೆರೆಮರೆಗೆ ಸರಿದಿದ್ದ ಘರಾರ ಫ್ಯಾಷನ್ ಇದೀಗ ಮತ್ತೊಮ್ಮೆ ಹೊಸ ರೂಪದಲ್ಲಿ ಈ ಸೀಸನ್‌ಗೆ ಮರಳಿದೆ. ನೋಡಲು ಶರಾರದಂತೆಯೇ ಕಾಣಿಸುವ ಘರಾರಗಳು ಈ ಸೀಸನ್‌ನ ಗ್ರ್ಯಾಂಡ್ ಫ್ಯಾಷನ್‌ವೇರ್ಸ್ ಕೆಟಗರಿಯಲ್ಲಿ ಹೊಸ ರೂಪದಲ್ಲಿ ಮತ್ತಷ್ಟು ಗ್ರ್ಯಾಂಡ್ ಲುಕ್‌ನಲ್ಲಿ ಬಂದಿವೆ. ಏನಿದು ಘರಾರ ಡ್ರೆಸ್? ಇದನ್ನು ಕಂಡು ಹಿಡಿಯುವುದು ಹೇಗೆ? ಇಲ್ಲಿದೆ ಮಾಹಿತಿ.

ಚಿತ್ರಗಳು: ಶಿವಾಂಗಿ ವರ್ಮಾ, ನಟಿ
1/5

ಘರಾರ ಫ್ಯಾಷನ್ ಮತ್ತೆ ಎಂಟ್ರಿ ನೀಡಿವೆ. ಹೌದು, ನೋಡಲು ಶರಾರದಂತೆಯೇ ಕಾಣಿಸುವ ಘರಾರಗಳು ಈ ಸೀಸನ್‌ನ ಗ್ರ್ಯಾಂಡ್ ಫ್ಯಾಷನ್‌ವೇರ್ಸ್ ಕೆಟಗರಿಯಲ್ಲಿ ಹೊಸ ರೂಪದಲ್ಲಿ ಮತ್ತಷ್ಟು ಗ್ರ್ಯಾಂಡ್ ಲುಕ್‌ನಲ್ಲಿ ಬಂದಿವೆ.

2/5

ಶಿವಾಂಗಿ ವರ್ಮಾ ಧರಿಸಿದ್ಧ ಗ್ರ್ಯಾಂಡ್ ಘರಾರ

ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ನಟಿ ಶಿವಾಂಗಿ ವರ್ಮಾ ಫ್ಯಾಷನ್ ಶೂಟ್‌ವೊಂದರಲ್ಲಿ ಧರಿಸಿದ್ಧ ಮಿಕ್ಸ್ ಮ್ಯಾಚ್ ಕಾಂಟ್ರಾಸ್ಟ್ ಕಲರ್‌ನ ಬ್ಯೂಟಿಫುಲ್ ಡಿಸೈನರ್ ಘರಾರ ಎಥ್ನಿಕ್ ಡ್ರೆಸ್ ಇದೀಗ ಟ್ರೆಂಡಿಯಾಗಿದೆ. ನಾನಾ ಕಲರ್‌ಗಳಲ್ಲಿ ಹಾಗೂ ಡಿಸೈನ್‌ನಲ್ಲಿ ಆನ್‌ಲೈನ್ ಹಾಗೂ ಆಫ್‌ಲೈನ್ ಶಾಪ್‌ಗಳಲ್ಲಿ ಬಿಡುಗಡೆಗೊಂಡಿದೆ ಎನ್ನುತ್ತಾರೆ ಡಿಸೈನರ್.

3/5

ಘರಾರ ರಾಯಲ್ ಔಟ್‌ಫಿಟ್

ಮೂಲತಃ ಉತ್ತರ ಭಾರತ ಹಾಗೂ ಮುಸ್ಲಿಂ ಹೆಣ್ಣುಮಕ್ಕಳು ಧರಿಸುವ ರಾಯಲ್ ಔಟ್‌ಫಿಟ್ ಇದು. ಮದುವೆ ಹಾಗೂ ಇನ್ನಿತರೇ ಸಮಾರಂಭಗಳಲ್ಲಿ ಗ್ರ್ಯಾಂಡ್‌ ಲುಕ್‌ಗಾಗಿ ಈ ಘರಾರ ಡ್ರೆಸ್‌ಗಳನ್ನು ಧರಿಸುವುದು ಮೊದಲಿನಿಂದಲೂ ಬೆಳೆದು ಬಂದಿದೆ.

4/5

ಏನಿದು ಘರಾರ ಡ್ರೆಸ್?

ನೋಡಲು ಶರಾರ ಡ್ರೆಸ್ನಂತೆ ಕಂಡರೂ ಇದು ಅದಲ್ಲ! ಮಂಡಿವರೆಗೂ ಅಥವಾ ಮಂಡಿಯ ಮೇಲಿನವರೆಗೂ ಕೊಂಚ ಫಿಟ್ಟಿಂಗ್ ಪ್ಯಾಂಟ್, ಈ ಘರಾರ ಡ್ರೆಸ್‌ನಲ್ಲಿ ಕಾಣಬಹುದು. ಕೆಳಗೆ ಮಾತ್ರ ಲೂಸಾಗಿರುತ್ತವೆ. ನೋಡಲು ನೆರಿಗೆ ಅಥವಾ ಹರಡಿದಂತಹ ಪಲ್ಹಾಜೊ ಪ್ಯಾಂಟಿನಂತಿರುತ್ತವೆ.

ಘರಾರದ ಮಿಕ್ಸ್ ಮ್ಯಾಚ್ ಕಾಂಬಿನೇಷನ್

ಇನ್ನು, ಇತ್ತೀಚೆಗೆ ಘರಾರಗೆ ಶಾರ್ಟ್ ಕುರ್ತಾ ಹಾಗೂ ಕ್ರಾಪ್ ಬ್ಲೌಸ್‌ಗಳು ಜತೆಯಾಗಿವೆ. ಅದರೊಂದಿಗೆ ಕೇಪ್ ಕೋಟ್ಗಳು ಕೂಡ ಬಂದಿವೆ. ಹಾಗಾಗಿ ಕೊಂಚ ಗ್ಲಾಮರಸ್ ಲುಕ್ ಬಯಸುವರು ಲಾಂ ಗ್ ಬ್ಲೌಸ್ ಬದಲು ಕ್ರಾಪ್ ಬ್ಲೌಸ್ ಘರಾರಗಳನ್ನು ಆಯ್ಕೆ ಮಾಡತೊಡಗಿದ್ದಾರೆ. ಸೋ, ಇದೀಗ ಗ್ಲಾಮರಸ್‌ ಟ್ರೆಡಿಷನಲ್ ಡ್ರೆಸ್ ಫ್ಯಾಷನ್‌ನ ಟಾಪ್ ಲಿಸ್ಟ್‌ಗೆ ಸೇರಿವೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

5/5

ಸೆಲೆಬ್ರೆಟಿಗಳ ರಾಯಲ್ ಲುಕ್‌ಗೆ ಘರಾರ ಡ್ರೆಸ್

ಬಾಲಿವುಡ್ ಸೆಲೆಬ್ರೆಟಿಗಳು ಕೂಡ ವೆಡ್ಡಿಂಗ್ಹಾಗೂ ಟ್ರೆಡಿಷನಲ್‌ ಕಾರ್ಯಕ್ರಮಗಳಲ್ಲಿ ಕ್ರಾಪ್ ಬ್ಲೌಸ್ ಘರಾರ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಸೆಲೆಬ್ರೆಟಿ ಲುಕ್‌ಗಾಗಿ ಮಾನಿನಿಯರು ಈ ಡ್ರೆಸ್ ಧರಿಸಬಹುದು ಎನ್ನುತ್ತಾರೆ ಸೆಲೆಬ್ರೆಟಿ ಸ್ಟೈಲಿಸ್ಟ್ ದಿಶಾ.

ಶೀಲಾ ಸಿ ಶೆಟ್ಟಿ

View all posts by this author