ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Season Fashion 2026: ಸೀಸನ್‌ನಲ್ಲಿ ಹೆಚ್ಚಾಯ್ತು ಫ್ಲೇರ್ಡ್ ಫ್ಲೋರಲ್‌ ಡ್ರೆಸ್ ಕಾರುಬಾರು!

Flared Floral Dress: ಬಬ್ಲಿ ಲುಕ್‌ ನೀಡುವಂತಹ ಮಲ್ಟಿ ಕಲರ್‌ನ ಫ್ಲೇರ್ಡ್ ಫ್ಲೋರಲ್‌ ಡ್ರೆಸ್‌ಗಳು ಮತ್ತೊಮ್ಮೆ ಟ್ರೆಂಡಿಯಾಗಿವೆ. ಊಹೆಗೂ ಮೀರಿದ ಡಿಸೈನ್‌ನಲ್ಲಿ ಈ ಫ್ಲೇರ್ಡ್ ಫ್ಲೋರಲ್‌ ಡ್ರೆಸ್‌ಗಳು ಫ್ಯಾಷನ್‌ಲೋಕದಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲೂ ಜಾರ್ಜೆಟ್‌, ಅರ್ಗಾನ್ಜಾ, ಸೆಮಿ ಸಿಲ್ಕ್‌ ಹಾಗೂ ಕ್ರೇಪ್‌ ಫ್ಯಾಬ್ರಿಕ್‌ನವು ಅತಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ. ಯಾವ್ಯಾವ ಡಿಸೈನ್‌ನವು ಲಗ್ಗೆ ಇಟ್ಟಿವೆ? ಸ್ಟೈಲಿಂಗ್‌ ಹೇಗೆ? ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ರಿಧಿಮಾ ತಿವಾರಿ, ನಟಿ
1/5

ಬಬ್ಲಿ ಲುಕ್‌ ನೀಡುವ ಅತ್ಯಾಕರ್ಷಕವಾಗಿ ಕಾಣಿಸುವ ಫ್ಲೇರ್ಡ್ ಫ್ಲೋರಲ್‌ ಡ್ರೆಸ್‌ಗಳು ಮತ್ತೊಮ್ಮೆ ಲಗ್ಗೆ ಇಟ್ಟಿವೆ.

2/5

ರಿಧಿಮಾ ತಿವಾರಿಯ ಫ್ಲೇರ್ಡ್ ಫ್ಲೋರಲ್‌ ಡ್ರೆಸ್

ಹೌದು, ಇತ್ತೀಚೆಗೆ ಫ್ಯಾಷನ್‌ ಶೂಟ್‌ವೊಂದರಲ್ಲಿ ನಟಿ ರಿಧಿಮಾ ತಿವಾರಿ ಧರಿಸಿದ್ಧ ಫ್ಲೇರ್ಡ್ ಫ್ಲೋರಲ್‌ ಡ್ರೆಸ್‌, ಇದೀಗ ಬೇಡಿಕೆ ಹೆಚ್ಚಿಸಿಕೊಂಡಿದೆ ಎನ್ನುವ ಸ್ಟೈಲಿಸ್ಟ್ ಗಾಮಿ ಪ್ರಕಾರ, ಇವು ಎಂತಹವರಿಗೂ ಬಬ್ಲಿ ಲುಕ್‌ ನೀಡುತ್ತವೆ ಎನ್ನುತ್ತಾರೆ.

3/5

ಎಲ್ಲಾ ಸೀಸನ್‌ಗೂ ಹೊಂದುವ ಡ್ರೆಸ್‌

ವಿಂಟರ್‌-ಸಮ್ಮರ್‌ ಹಾಗೂ ಮಾನ್ಸೂನ್‌ ಎನ್ನದೇ ಎಲ್ಲಾ ಸೀಸನ್‌ಗಳಲ್ಲೂ ಅತ್ಯಾಕರ್ಷಕವಾಗಿ ಕಾಣಿಸುವಂತಹ ಮಲ್ಟಿ ಕಲರ್‌ನ ಫ್ಲೇರ್ಡ್ ಫ್ಲೋರಲ್‌ ಡ್ರೆಸ್‌ಗಳಲ್ಲಿ ನಾನಾ ಬಗೆಯ ನೆಕ್‌ಲೈನ್‌ ಹೊಂದಿರುವಂತವು, ಮಲ್ಟಿ ಲೇಯರ್‌ನವು ಹಾಗೂ ರಫಲ್‌ ಡಿಸೈನ್‌ನವು ಮಾರುಕಟ್ಟೆಯಲ್ಲಿ ಬಂದಿವೆ. ವಯಸ್ಸಿನ ಭೇದ-ಭಾವವಿಲ್ಲದೇ ಎಲ್ಲಾ ಮಾನಿನಿಯರಿಗೂ ಹಾಗೂ ಹುಡುಗಿಯರಿಗೂ ಬಬ್ಲಿ ಲುಕ್‌ ನೀಡುತ್ತಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ರಿಯಾ.

4/5

ಬಗೆಬಗೆಯ ಫ್ಲೇರ್ಡ್ ಫ್ಲೋರಲ್‌ ಡ್ರೆಸ್‌ಗಳು

ಊಹೆಗೂ ಮೀರಿದ ಡಿಸೈನ್‌ನಲ್ಲಿ ಈ ಫ್ಲೇರ್ಡ್ ಫ್ಲೋರಲ್‌ ಡ್ರೆಸ್‌ಗಳು ಫ್ಯಾಷನ್‌ಲೋಕದಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲೂ ಜಾರ್ಜೆಟ್‌, ಅರ್ಗಾನ್ಜಾ, ಸೆಮಿ ಸಿಲ್ಕ್‌ ಹಾಗೂ ಕ್ರೇಪ್‌ ಫ್ಯಾಬ್ರಿಕ್‌ನವು ಅತಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ. ಅವುಗಳಲ್ಲಿ ಫ್ರಾಕ್‌ ಸ್ಟೈಲ್‌ನವು, ಮಿಡಿ, ಸ್ಕರ್ಟ್, ಮ್ಯಾಕ್ಸಿ ಹಾಗೂ ಗೌನ್‌ ಸ್ಟೈಲ್‌ನವು ಹೆಚ್ಚು ಬಿಕರಿಗೊಳ್ಳುತ್ತಿವೆ ಎನ್ನುತ್ತಾರೆ ಮಾರಾಟಗಾರರಾದ ರಕ್ಷ್.

5/5

ಫ್ಲೇರ್ಡ್ ಫ್ಲೋರಲ್‌ ಡ್ರೆಸ್‌ಗಳ ಸ್ಟೈಲಿಂಗ್‌ಗೆ 5 ಸಿಂಪಲ್‌ ಟಿಪ್ಸ್

1) ಇವು ಯಂಗ್‌ ಲುಕ್‌ ನೀಡಬಲ್ಲವು. ಹಾಗಾಗಿ ಆದಷ್ಟೂ ಮಲ್ಟಿ ಕಲರ್ಡ್‌ನವನ್ನು ಆಯ್ಕೆ ಮಾಡಿ, ಧರಿಸುವುದು ಬೆಸ್ಟ್.

2) ಮಿನಿಮಲ್‌ ಆಕ್ಸೆಸರೀಸ್‌ ಧರಿಸುವುದು ಉತ್ತಮ.

3) ಸಿಂಪಲ್‌ ಲುಕ್‌ ಡ್ರೆಸ್ಸನ್ನು ಹಾಗೂ ನಿಮ್ಮನ್ನು ಹೈಲೈಟ್‌ ಮಾಡುವುದು.

4) ಪರ್ಸನಾಲಿಟಿಗೆ ತಕ್ಕಂತಹ ವಿನ್ಯಾಸದ ಆಯ್ಕೆ ಸೂಕ್ತ.

5) ವೆಸ್ಟರ್ನ್‌ ಲುಕ್‌ ಮೇಕೋವರ್‌ಗೆ ಆದ್ಯತೆ ನೀಡಬೇಕು.

ಶೀಲಾ ಸಿ ಶೆಟ್ಟಿ

View all posts by this author