Season Fashion 2026: ಊಹೆಗೂ ಮೀರಿದ ಡಿಸೈನ್ಸ್‌ನಲ್ಲಿ ಬಂತು ಅರ್ಗಾನ್ಜಾ ಡ್ರೆಸ್‌ಗಳು
Organza Dresses: ಇತ್ತೀಚೆಗೆ ಅರ್ಗಾನ್ಜಾ ಡ್ರೆಸ್‌ಗಳು ಸಖತ್ ಫ್ಯಾಷೆನಬಲ್ ಆಗಿವೆ. ಮೊದಲೆಲ್ಲಾ ಹೆಚ್ಚಾಗಿ ಸೀರೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಫ್ಯಾಬ್ರಿಕ್ ಇದೀಗ ವೈವಿಧ್ಯಮಯ ಡಿಸೈನರ್‌ವೇರ್‌ಗಳಲ್ಲೂ ಸಾಮಾನ್ಯವಾಗತೊಡಗಿವೆ. ಅದರಲ್ಲೂ ಬಗೆಬಗೆಯ ಡ್ರೆಸ್‌ಗಳಲ್ಲೂ ಇವು ಕಾಣಿಸಿಕೊಳ್ಳತೊಡಗಿವೆ. ಲೆಕ್ಕವಿಲ್ಲದಷ್ಟು ಡಿಸೈನ್‌ಗಳಲ್ಲಿ ರಾರಾಜಿಸುತ್ತಿವೆ.
ಅರ್ಗಾನ್ಜಾ ಡ್ರೆಸ್‌ಗಳು ಸಖತ್ ಫ್ಯಾಷೆನಬಲ್ ಆಗಿವೆ. ಊಹೆಗೂ ಮೀರಿದ ವೈವಿಧ್ಯಮಯ ಡಿಸೈನ್‌ಗಳಲ್ಲಿ ಆಗಮಿಸಿವೆ.
ಊಹೆಗೂ ಮೀರಿದ ಡಿಸೈನ್‌ಗಳಲ್ಲಿ ಅರ್ಗಾನ್ಜಾ ಡ್ರೆಸ್‌ಗಳು
ಮೊದಲೆಲ್ಲಾ ಹೆಚ್ಚಾಗಿ ಸೀರೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಫ್ಯಾಬ್ರಿಕ್ ಇದೀಗ ವೈವಿಧ್ಯಮಯ ಡಿಸೈನರ್‌ವೇರ್‌ಗಳಲ್ಲೂ ಸಾಮಾನ್ಯವಾಗತೊಡಗಿವೆ. ಅದರಲ್ಲೂ ಬಗೆಬಗೆಯ ಡ್ರೆಸ್‌ಗಳಲ್ಲೂ ಇವು ಕಾಣಿಸಿಕೊಳ್ಳತೊಡಗಿವೆ. ಲೆಕ್ಕವಿಲ್ಲದಷ್ಟು ಡಿಸೈನ್‌ಗಳಲ್ಲಿ ರಾರಾಜಿಸುತ್ತಿವೆ.
ಶ್ರೀಮುಖಿ ಧರಿಸಿದ ಅರ್ಗಾನ್ಜಾ ಕೋ ಆರ್ಡ್ ಸೆಟ್
ಇತ್ತೀಚೆಗೆ ನಟಿ ಶ್ರೀ ಮುಖಿ ಧರಿಸಿದ್ಧ ರಾಯಲ್ ಬ್ಲ್ಯೂ ಶೇಡ್‌ನ ಶೀರ್ ಶೈಲಿಯ ಅರ್ಗಾನ್ಜಾ ಕೋ ಆರ್ಡ್ ಸೆಟ್ ಡ್ರೆಸ್ ಸಾಕಷ್ಟು ಫ್ಯಾಷನ್ ಪ್ರಿಯರನ್ನು ಸೆಳೆಯಿತು. ಅರರೆ, ಈ ಅರ್ಗಾನ್ಜಾ ಫ್ಯಾಬ್ರಿಕ್‌ನಲ್ಲಿ ಹೀಗೂ ಡಿಸೈನ್ ಮಾಡಿಸಬಹುದಾ! ಎನ್ನುವಷ್ಟರ ಮಟ್ಟಿಗೆ ಅಚ್ಚರಿ ಮೂಡಿಸಿತು. ಪ್ರಯೋಗಾತ್ಮಕ ವಿನ್ಯಾಸದಲ್ಲಿ ಮೂಡಿಬಂದಿದ್ದ ಈ ಟೂ ಪೀಸ್ ಡ್ರೆಸ್ ಸದ್ಯ ಅರ್ಗಾನ್ಜಾ ಡ್ರೆಸ್ ಲೋಕದಲ್ಲಿ ಟ್ರೆಂಡಿಯಾಗಿದೆ. ಫ್ಯಾಷನ್ ಪ್ರಿಯರಿಗೆ ಹೊಸ ಐಡಿಯಾಗಳನ್ನು ನೀಡಿದೆ ಎನ್ನುತ್ತಾರೆ ಡಿಸೈನರ್ ರಾಶಿ.
ಅರ್ಗಾನ್ಜಾ ಫ್ಯಾಬ್ರಿಕ್‌ನಲ್ಲಿ ಡಿಸೈನರ್‌ವೇರ್ಸ್
ಅಂದಹಾಗೆ, ಅರ್ಗಾನ್ಜಾ ಫ್ಯಾಬ್ರಿಕ್‌ನ ಡ್ರೆಸ್‌ಗಳಲ್ಲಿ ಸೆಲ್ವಾರ್ ಹಾಗೂ ಸ್ಕರ್ಟ್‌ಗಳು ಮೊದಲಿನಿಂದಲೂ ಟ್ರೆಂಡ್‌ನಲ್ಲಿದ್ದವು. ಈ ಫ್ಯಾಬ್ರಿಕ್‌ನ ಪ್ರೇಮಿಗಳು ಇದರಿಂದಾಚೆಗಿನ ಡಿಸೈನ್‌ಗಳನ್ನು ಟ್ರೈ ಮಾಡಿರಲಿಲ್ಲ! ಆದರೆ ಇದೀಗ, ಫ್ಯಾಷನ್ ಪ್ರೇಮಿಗಳು ಹಾಗೂ ಸೆಲೆಬ್ರೆಟಿಗಳು ಬಗೆಬಗೆಯ ಅರ್ಗಾನ್ಜಾ ಡ್ರೆಸ್‌ಗಳನ್ನು ಪ್ರಯೋಗಾತ್ಮಕ ಡಿಸೈನ್‌ನಲ್ಲಿ ಧರಿಸಲಾರಂಭಿಸಿದ ನಂತರ, ಈ ಶೈಲಿಯ ಡ್ರೆಸ್‌ಗಳತ್ತ ಸಾಮಾನ್ಯ ಜನರು ವಾಲತೊಡಗಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ಜೀತ್.
ಅರ್ಗಾನ್ಜಾ ಪ್ರೇಮಿಗಳಿಗೆ ಒಂದಿಷ್ಟು ಸಲಹೆಗಳು
- ಮೊದಲು ಈ ಫ್ಯಾಬ್ರಿಕ್ ನಿಮ್ಮ ಬಾಡಿ ಮಾಸ್ ಇಂಡೆಕ್ಸ್‌ಗೆ ಹೊಂದುತ್ತದೆಯೇ ಎಂಬುದನ್ನು ಪರಿಶೀಲಿಸಿ ನಂತರ ಆಯ್ಕೆ ಮಾಡಿ.
- ಸಾಫ್ಟ್ ಅರ್ಗಾನ್ಜಾ ಫ್ಯಾಬ್ರಿಕ್ ಆಯ್ಕೆ ಉತ್ತಮ.
- ಫಿನಿಶಿಂಗ್ ಇರದ ಜ್ಯುವೆಲರಿಗಳು ಈ ತೆಳುವಾದ ಫ್ಯಾಬ್ರಿಕನ್ನು ಕಿತ್ತುಹಾಕಬಹುದು. ಎಚ್ಚರ ವಹಿಸಿ.