ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Season Fashion 2026: ಸೀಸನ್‌ ಮುಗಿದರೂ ಮರೆಯಾಗದ ರಫಲ್ಡ್ ಆಫ್‌ ಶೋಲ್ಡರ್‌ ಟಾಪ್‌ ಫ್ಯಾಷನ್‌

Ruffled Off Shoulder Tops: ಸೀಸನ್‌ ಮುಗಿಯುತ್ತಾ ಬಂದರೂ ರಫಲ್ಸ್ ಇರುವಂತಹ ಆಫ್‌ ಶೋಲ್ಡರ್‌ ಟಾಪ್‌ಗಳು ಟ್ರೆಂಡ್‌ ಲಿಸ್ಟ್‌ನಿಂದ ಆಚೆ ಬಂದಿಲ್ಲ! ಬದಲಿಗೆ ಇನ್ನೂ ಕಾಲೇಜು-ಟೀನೇಜು ಹುಡುಗಿಯರನ್ನು ಸವಾರಿ ಮಾಡುತ್ತಲೇ ಇವೆ. ಈ ಕುರಿತ ವರದಿ ಇಲ್ಲಿದೆ.

ಚಿತ್ರಗಳು: ಮೀನಾಕ್ಷಿ ದೀಕ್ಷಿತ್‌, ನಟಿ
1/5

ರಫಲ್ಸ್ ಇರುವಂತಹ ಆಫ್‌ ಶೋಲ್ಡರ್‌ ಟಾಪ್‌ಗಳು ಸೀಸನ್‌ ಮುಗಿಯುತ್ತಾ ಬಂದರೂ ಟ್ರೆಂಡ್‌ ಲಿಸ್ಟ್‌ನಿಂದ ಹೊರಬಿದ್ದಿಲ್ಲ! ಬದಲಿಗೆ ಮತ್ತಷ್ಟು ಡಿಸೈನ್‌ನಲ್ಲಿ ಹಾಗೂ ಕಲರ್‌ನಲ್ಲಿ ಬಿಡುಗಡೆಗೊಂಡಿವೆ.

2/5

ಫ್ರಿಲ್‌ ಲುಕ್‌ ನೀಡುವ ಟಾಪ್‌ಗಳಿವು

ಹೌದು, ರಫಲ್ಸ್ ಇರುವಂತಹ ಫ್ರಿಲ್‌ನಂತೆ ಕಾಣಿಸುವ ನಾನಾ ಬಗೆಯ ವೈವಿಧ್ಯಮಯ ಆಫ್‌ ಶೋಲ್ಡರ್‌ ಟಾಪ್‌ಗಳು ಫ್ಯಾಷನ್‌ ಲೋಕದಲ್ಲಿ ಸಾಕಷ್ಟು ಹಂಗಾಮ ಎಬ್ಬಿಸಿವೆ. ಅದು ಯಾವ ಮಟ್ಟಿಗೆ ಎಂದರೇ, ಕೇವಲ ಟೀನೇಜ್‌ ಹುಡುಗಿಯರನ್ನು ಮಾತ್ರವಲ್ಲ, ಕಾರ್ಪೋರೇಟ್‌ ಕ್ಷೇತ್ರದ ಯುವತಿಯರೂ ಕೂಡ ಇವುಗಳನ್ನು ಅಪ್ಪಿಕೊಳ್ಳಲಾರಂಭಿಸಿದ್ದರು ಎನ್ನುತ್ತಾರೆ ಫ್ಯಾಷನಿಸ್ಟಾ ರಿಯಾ.

3/5

ರಫಲ್ಡ್ ಆಫ್‌ ಶೋಲ್ಡರ್ ಟಾಪ್‌ ಫ್ಯಾಷನ್‌

ಅಂದಹಾಗೆ, ರಫಲ್ಡ್ ಆಫ್‌ ಶೋಲ್ಡರ್‌ ಟಾಪ್‌ಗಳಲ್ಲಿ ಈ ಸೀಸನ್‌ನಲ್ಲಿ ಅತಿ ಹೆಚ್ಚಾಗಿ ಫ್ಲೋರಲ್‌ ಪ್ರಿಂಟ್ಸ್‌ನವು ಚಾಲ್ತಿಯಲ್ಲಿದ್ದವು. ವೆಸ್ಟರ್ನ್‌ ಕಾನ್ಸೆಪ್ಟ್‌ನ ಫ್ಲೋರಲ್‌ ಪ್ರಿಂಟ್ಸ್‌ನವು ಹಾಗೂ ಡಿಸೈನ್‌ನವು ಸಾಮಾನ್ಯವಾಗಿದ್ದವು. ಲೇಯರ್ಡ್ ಲುಕ್‌ ನೀಡುವಂತಹ ಅಥವಾ ಫ್ರಿಲ್‌ ಫೀಲ್‌ ನೀಡುವಂತಹ ಟಾಪ್‌ಗಳು ಬಬ್ಲಿ ಲುಕ್‌ ಬಯಸುವ ಹುಡುಗಿಯರನ್ನು ಸೆಳೆದಿದ್ದವು.

4/5

ಸೆಲೆಬ್ರೆಟಿಗಳ ಕ್ಯಾಶುವಲ್‌ ಲುಕ್‌ನಲ್ಲಿ ಸ್ಥಾನ

ಸೆಲೆಬ್ರೆಟಿಗಳೂ ಕೂಡ ತಮ್ಮ ಕ್ಯಾಶುವಲ್‌ ಲುಕ್‌ನಲ್ಲಿ ರಫಲ್ಸ್ ಇರುವಂತಹ ನಾನಾ ಪ್ರಿಂಟ್ಸ್‌ನ ಆಫ್‌ ಶೋಲ್ಡರ್‌ ಟಾಪ್‌ಗಳನ್ನು ಡೆನಿಮ್‌ ಜತೆ ಮ್ಯಾಚ್‌ ಮಾಡಿ ಧರಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ ಎನ್ನುವ ಸ್ಟೈಲಿಸ್ಟ್ ರೀಟಾ ಪ್ರಕಾರ, ಈ ಔಟ್‌ಫಿಟ್‌ ಗ್ಲಾಮರಸ್‌ ಲುಕ್‌ ನೀಡುತ್ತದೆ ಎನ್ನುತ್ತಾರೆ.

5/5

ರಫಲ್ಡ್ ಆಫ್‌ ಶೋಲ್ಡರ್ ಟಾಪ್‌ ಪ್ರಿಯರಿಗೆ ಟಿಪ್ಸ್

  • ಶೋಲ್ಡರ್‌ಗೆ ಫಿಟ್‌ ಆಗಿ ಕೂರುವಂತಹ ಟಾಪನ್ನೇ ಆಯ್ಕೆ ಮಾಡಿ.
  • ಕೆಲವು ಟೂ ಇನ್‌ ವನ್‌ ವಿನ್ಯಾಸದವು ದೊರೆಯುತ್ತವೆ. ಇವನ್ನು ಶೋಲ್ಡರ್‌ ಮೇಲೆ ಎಳೆದೂ ಕೂಡ ಧರಿಸಬಹುದು, ಬೇಡದಿದ್ದಲ್ಲಿ ಗ್ಲಾಮರಸ್‌ ಆಗಿ ಕಾಣಿಸುವಂತೆ ಕೆಳಗೆ ಎಳೆದು ಧರಿಸಬಹುದು.
  • ಈ ಶೈಲಿಯ ಟಾಪ್‌ ಧರಿಸುವಾಗ ಆದಷ್ಟೂ ಸೂಕ್ತವಾದ ಇನ್ನರ್‌ವೇರ್‌ ಧರಿಸುವುದು ಉತ್ತಮ.

ಶೀಲಾ ಸಿ ಶೆಟ್ಟಿ

View all posts by this author