Season Fashion 2026: ಲೆನಿನ್‌ನಲ್ಲೂ ಕಾಣಿಸಿಕೊಂಡ ಸಿಂಪಲ್ ಜಂಪ್‌ಸೂಟ್‌ಗಳು
Simple Jumpsuits: ಇದೀಗ ಜಂಪ್‌ಸೂಟ್‌ಗಳು ಲೆನಿನ್ ಫ್ಯಾಬ್ರಿಕ್‌ನಲ್ಲೂ ಕಾಣಿಸಿಕೊಂಡಿವೆ. ನೋಡಲು ಎಲಿಗೆಂಟ್ ಲುಕ್ ನೀಡುವ ಈ ಜಂಪ್‌ಸೂಟ್ ಫ್ಯಾಷನ್ (Jumpsuit Fashion) ಬಗ್ಗೆ ಫ್ಯಾಷನಿಸ್ಟಾಗಳು ಏನು ಹೇಳುತ್ತಾರೆ? ಧರಿಸುವವರು ಪಾಲಿಸಬೇಕಾದ್ದೇನು? ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಲೆನಿನ್ ಜಂಪ್‌ಸೂಟ್‌ಗಳು ಫ್ಯಾಷನ್‌ನಲ್ಲಿ ನುಸುಳಿವೆ. ಹೌದು, ಇದೀಗ ಜಂಪ್‌ಸೂಟ್‌ಗಳ ಫ್ಯಾಷನ್‌ನಲ್ಲಿ ಲೈಟ್ ಹಾಗೂ ಪಾಸ್ಟೆಲ್ ಶೇಡ್‌ನ ಲೆನಿನ್ ಜಂಪ್‌ಸೂಟ್‌ಗಳು ಎಂಟ್ರಿ ನೀಡಿವೆ. ನೋಡಲು ತೀರಾ ಡೀಸೆಂಟಾಗಿ ಕಾಣಿಸುವ ಇವು ಸಾಕಷ್ಟು ಕಲರ್ಸ್ ಹಾಗೂ ಡಿಸೈನ್ಸ್‌ನಲ್ಲಿ ಯುವತಿಯರನ್ನು ಸವಾರಿ ಮಾಡತೊಡಗಿವೆ.
ಟೀನಾ ದತ್ತಾ ಧರಿಸಿದ್ಧ ಲೆನಿನ್ ಜಂಪ್‌ಸೂಟ್
ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ಫ್ಯಾಷನ್ ಶೂಟ್‌ವೊಂದರಲ್ಲಿ ನಟಿ ಟೀನಾ ದತ್ತಾ ಧರಿಸಿದ್ಧ ಆಫ್ ವೈಟ್ ಅಥವಾ ಲೈಟ್ ಐವರಿ ಶೇಡ್‌ನ ಲೆನಿನ್ ಫ್ಯಾಬ್ರಿಕ್‌ನ ಜಂಪ್‌ಸೂಟ್ ಸಾಕಷ್ಟು ಲೆನಿನ್ ಫ್ಯಾಬ್ರಿಕ್ ಪ್ರಿಯರನ್ನು ಸೆಳೆದಿತ್ತು. ಜತೆಗೆ ಲೆನಿನ್‌ನಲ್ಲೂ ಜಂಪ್‌ಸೂಟ್ ಧರಿಸಬಹುದು. ಧರಿಸಿದಾಗ ಸಖತ್ ಲುಕ್ ನೀಡುತ್ತದೆ ಎಂಬುದನ್ನು ತೋರ್ಪಡಿಸಿತ್ತು ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಪ್ರಯೋಗಾತ್ಮಕ ಫ್ಯಾಬ್ರಿಕ್‌ನಲ್ಲಿ ಜಂಪ್‌ಸೂಟ್ಸ್
ಡಿಸೈನರ್‌ಗಳ ಪ್ರಯೋಗಾತ್ಮಕ ಡಿಸೈನ್‌ನಲ್ಲಿ ಲೆನಿನ್ ಜಂಪ್‌ಸೂಟ್‌ಗಳು ಕೂಡ ಬಿಡುಗಡೆಯಾದವು. ಆರಂಭದಲ್ಲಿ ಈ ಉಡುಗೆ ಅಷ್ಟಾಗಿ ಪ್ರಚಲಿತಕ್ಕೆ ಬರದಿದ್ದರೂ ನಂತರ ಸೆಲೆಬ್ರೆಟಿಗಳು ಧರಿಸುವುದರ ಮೂಲಕ ಟ್ರೆಂಡಿಯಾದವು. ಸಾಮಾನ್ಯ ಯುವತಿಯರನ್ನು ಸವಾರಿ ಮಾಡತೊಡಗಿದವು ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಲೆನಿನ್ ಜಂಪ್‌ಸೂಟ್ ಸ್ಪೆಷಾಲಿಟಿ
ಲೆನಿನ್ ಫ್ಯಾಬ್ರಿಕ್ ಪರಿಸರ ಸ್ನೇಹಿ. ಅಲ್ಲದೇ, ಬ್ರಿಥೆಬಲ್ ಫ್ಯಾಬ್ರಿಕ್ ಹಾಗಾಗಿ ಈ ಫ್ಯಾಬ್ರಿಕ್‌ನ ಸಾಕಷ್ಟು ಡಿಸೈನರ್‌ವೇರ್‌ಗಳು ಕಳೆದ ಸೀಸನ್‌ನಲ್ಲಿ ಟ್ರೆಂಡಿಯಾಗಿದ್ದವು. ಈ ಸೀಸನ್‌ಗೂ ಮುಂದುವರೆದಿವೆ. ನೋಡಲು ಸಿಂಪಲ್ ಲುಕ್ ನೀಡುತ್ತವೆ.
ಲೆನಿನ್ ಜಂಪ್‌ಸೂಟ್ ಪ್ರಿಯರಿಗೆ ಸಲಹೆ
- ಜಂಪ್‌ಸೂಟ್‌ಗಳನ್ನು ಒಮ್ಮೆ ಧರಿಸಿದ ನಂತರ ತಕ್ಷಣಕ್ಕೆ ವಾಶ್ ರೂಮ್ ಹೋಗಬೇಕಾದಲ್ಲಿ ಬಿಚ್ಚಲಾಗದು. ಔಟಿಂಗ್ ಹೋಗುವಾಗ ಅವಾಯ್ಡ್ ಮಾಡಿ.
- ಜಂಪ್‌ಸೂಟ್‌ಗಳು ಪರ್ಫೆಕ್ಟ್ ಬಾಡಿ ಮಾಸ್ ಇಂಡೆಕ್ಸ್ ಇರುವವರಿಗೆ ಬೆಸ್ಟ್ ಅಪ್ಷನ್.
- ಜಂಪ್‌ಸೂಟ್ ಪ್ಲಂಪಿಯಾಗಿರುವವರಿಗೆ ನಾಟ್ ಓಕೆ.