ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Season Fashion 2026: ಹಾಲಿಡೇ ಫ್ಯಾಷನ್‌ಗೆ ಕಾಲಿಟ್ಟ ಸ್ಕೋರ್ಟ್ ಕೋ ಆರ್ಡ್ ಸೆಟ್

ಹಾಲಿಡೇ ಸೀಸನ್‌ನ ಸಂಭ್ರಮ ಹೆಚ್ಚಿಸಲು ಸ್ಟ್ರೈಪ್ಸ್ ಸ್ಕೋರ್ಟ್ ಕೋ ಆರ್ಡ್ ಸೆಟ್‌ಗಳು ಎಂಟ್ರಿ ನೀಡಿವೆ. ನಾನಾ ಬಗೆಯ ಫ್ಯಾಷನ್‌ವೇರ್‌ಗಳಲ್ಲಿ ಶರ್ಟ್ ಸ್ಟೈಲ್‌ನ ತ್ರೀ ಪೀಸ್‌ ಸ್ಟ್ರೈಪ್ಸ್ ಸ್ಕೋರ್ಟ್ ಕೋ ಆರ್ಡ್ ಸೆಟ್‌ಗಳು ಎಂಟ್ರಿ ನೀಡಿವೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.

ಚಿತ್ರಗಳು: ಪ್ರಗ್ಯಾ ಜೈಸ್ವಾಲ್, ನಟಿ
1/5

ಸ್ಟ್ರೈಪ್ಸ್ ಸ್ಕೋರ್ಟ್ ಕೋ ಆರ್ಡ್ ಸೆಟ್‌ಗಳು ಇದೀಗ ಹಾಲಿಡೇ ಫ್ಯಾಷನ್‌ಗೆ ಲಗ್ಗೆ ಇಟ್ಟಿವೆ.

2/5

ಮೋಜು-ಮಸ್ತಿಗೆ ಸ್ಕೋರ್ಟ್ ಕೋ ಆರ್ಟ್ ಸೆಟ್‌

ಹೌದು, ಈ ಸೀಸನ್‌ನ ವೆಕೇಷನ್‌ ಹಾಗೂ ಹಾಲಿಡೇ ಸೀಸನ್‌ನ ಸಂತೋಷ ಹೆಚ್ಚಿಸಲು ಸಾಥ್‌ ನೀಡುವಂತಹ ನಾನಾ ಬಗೆಯ ಫ್ಯಾಷನ್‌ವೇರ್‌ಗಳಲ್ಲಿ ಶರ್ಟ್ ಸ್ಟೈಲ್‌ನ ತ್ರೀ ಪೀಸ್‌ ಸ್ಟ್ರೈಪ್ಸ್ ಸ್ಕೋರ್ಟ್ ಕೋ ಆರ್ಡ್ ಸೆಟ್‌ಗಳು ಎಂಟ್ರಿ ನೀಡಿವೆ.

3/5

ಪ್ರಗ್ಯಾ ಜೈಸ್ವಾಲ್‌ ಸ್ಕೋರ್ಟ್ ಸೆಟ್

ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ನಟಿ ಪ್ರಗ್ಯಾ ಜೈಸ್ವಾಲ್‌ ಧರಿಸಿದ್ಧ ವೈಟ್‌ & ಬ್ಲ್ಯೂ ಶೇಟ್‌ನ ಸ್ಟ್ರೈಪ್ಸ್ ಪ್ರಿಂಟ್‌ನ ಶರ್ಟ್ ಸ್ಟೈಲ್‌ ಕ್ರಾಪ್‌ ಟಾಪ್‌ ಹಾಗೂ ಸ್ಕೋರ್ಟ್ ಸ್ಕರ್ಟ್‌ನ ತ್ರೀ ಪೀಸ್‌ ಸೆಟ್‌ ಹಾಲಿಡೇ ಪ್ರಿಯರನ್ನು ಸೆಳೆದಿತ್ತು. ನೋಡಲು ಅತ್ಯಾಕರ್ಷಕವಾಗಿ ಕಾಣಿಸುವ ಈ ಔಟ್‌ಫಿಟ್‌ ಆಗಲೇ ಆನ್‌ಲೈನ್‌ ಶಾಪಿಂಗ್‌ ಪ್ರಿಯರನ್ನು ಆಕರ್ಷಿಸಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

4/5

ತ್ರೀ ಪೀಸ್‌ ಸ್ಕೋರ್ಟ್ ಫ್ಯಾಷನ್‌ವೇರ್ಸ್

ಇನ್ನು, ಈ ಸ್ಟ್ರೈಪ್ಸ್ ಫ್ಯಾಷನ್‌ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿದೆ. ಅದರಲ್ಲೂ ವೈಬ್ರೆಂಟ್‌ ಲುಕ್‌ ನೀಡುವಂತಹ ಸ್ಟ್ರೈಪ್ಸ್ ಪ್ರಿಂಟ್ಸ್ ಇದೀಗ ತ್ರೀ ಪೀಸ್‌ ಸ್ಕೋರ್ಟ್ ಸೆಟ್‌ಗೂ ಎಂಟ್ರಿ ನೀಡಿದೆ ಎನ್ನುವ ಫ್ಯಾಷನ್‌ ಎಕ್ಸ್‌ಪರ್ಟ್ ಪ್ರಕಾರ, ಇವು ಎಂತಹವರಿಗೂ ಯಂಗ್‌ ಲುಕ್‌ ನೀಡುತ್ತವಂತೆ.

5/5

ನಾನಾ ಶೈಲಿಯಲ್ಲಿ ಸ್ಕೋರ್ಟ್ ಕೋ ಆರ್ಡ್ ಸೆಟ್‌ ಧರಿಸುವ ವಿಧಾನ

  • ಮೂರು ಪೀಸ್‌ಗಳಲ್ಲಿ ಬರುವ ಈ ಸ್ಕೋರ್ಟ್ ಕೋ ಆರ್ಡ್ ಸೆಟ್‌ಗಳನ್ನು ಮೂರ್ನಾಲ್ಕು ವಿಧದಲ್ಲಿ ಧರಿಸಬಹುದು.
  • ಶರ್ಟ್ ಇಲ್ಲದೇ, ಕೇವಲ ಟೂ ಪೀಸ್‌ನಲ್ಲಿ ಧರಿಸಬಹುದು.
  • ಶರ್ಟ್ ಕಂಪ್ಲೀಟ್‌ ಬಟನ್‌ ಹಾಕಿ ನೋಡಲು ಸ್ಕರ್ಟ್‌ನತೆಯೂ ಧರಿಸಬಹುದು.
  • ಶರ್ಟನ್ನು ಟೈ ಮಾಡಿ ಧರಿಸಬಹುದು. ಹೀಗೆ ನಾನಾ ಬಗೆಯಲ್ಲಿ ಧರಿಸಿ ಪೋಟೋಗೆ ಪೋಸ್‌ ನೀಡಬಹುದು.

ಶೀಲಾ ಸಿ ಶೆಟ್ಟಿ

View all posts by this author