ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Season Fashion 2026: ವಿಂಟರ್‌ ಎಥ್ನಿಕ್‌ ಫ್ಯಾಷನ್‌ನಲ್ಲಿ ಸನ್‌ ಕಲರ್‌ವೇರ್ಸ್ ಹಂಗಾಮ

Winter Ethnic Fashion: ಈ ವಿಂಟರ್‌ ಸೀಸನ್‌ ಫ್ಯಾಷನ್‌ನಲ್ಲಿ ಇದೀಗ ಸನ್‌ ಕಲರ್‌ ಅಂದರೇ ವೈಬ್ರೆಂಟ್‌ ಹಳದಿ ಶೇಡ್‌ನ ಎಥ್ನಿಕ್‌ವೇರ್‌ಗಳು ಹಂಗಾಮ ಎಬ್ಬಿಸಿವೆ. ಕುರ್ತಾ ಸೆಟ್‌, ಲೆಹೆಂಗಾ ಸೂಟ್‌ಗಳಲ್ಲಿ ಕಾಣಿಸಿಕೊಂಡಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಕುಬ್ರಾ ಸೇಟ್‌, ಬಾಲಿವುಡ್‌ ನಟಿ
1/5

ವಿಂಟರ್‌ ಸೀಸನ್‌ ಫ್ಯಾಷನ್‌ನಲ್ಲಿ ಇದೀಗ ಸನ್‌ ಕಲರ್‌ ಎಥ್ನಿಕ್‌ವೇರ್‌ಗಳು ಹಂಗಾಮ ಎಬ್ಬಿಸಿವೆ.‌ ಅವು ಕುರ್ತಾ-ಗಾಗ್ರಾ ಸೆಟ್‌ ಆಗಬಹುದು, ಇಲ್ಲವೇ ಲೆಹೆಂಗಾ-ಕುರ್ತಾ, ಶೆರ್ವಾನಿ ಸೆಟ್‌ ಆಗಬಹುದು. ಒಟ್ಟಿನಲ್ಲಿ, ವೈಬ್ರೆಂಟ್‌ ಹಳದಿಯ ಸನ್‌ ಕಲರ್‌ ಶೇಡ್‌ನಲ್ಲಿ ಈ ಸೀಸನ್‌ಗೆ ಎಂಟ್ರಿ ನೀಡಿವೆ.

2/5

ಕುಬ್ರಾ ಸೇಟ್‌ ಸನ್‌ ಕಲರ್‌ ಕುರ್ತಾ-ಲೆಹೆಂಗಾ ಸೂಟ್‌

ಇದಕ್ಕೆ ಪೂರಕ ಎಂಬಂತೆ, ಇತ್ತೀಚೆಗೆ ಬಾಲಿವುಡ್‌ ನಟಿ ಕುಬ್ರಾ ಸೇಟ್‌ ಧರಿಸಿದ್ದ, ಯೆಲ್ಲೋ ಕುರ್ತಾ-ಲೆಹೆಂಗಾ ಸೂಟ್‌ ಅಥವಾ ಸೆಟ್‌ ಇದಕ್ಕೆ ಸಾಕ್ಷಿಯೆನ್ನಬಹುದು. ಧರಿಸಿದಾಗ ನೋಡಲು ಎದ್ದು ಕಾಣಿಸುವ ಈ ಎಥ್ನಿಕ್‌ವೇರ್‌ ಈ ಸೀಸನ್‌ನಲ್ಲಿ ಮಾನಿನಿಯರನ್ನು ಸೆಳೆದಿವೆ. ಫೆಸ್ಟೀವ್‌ ಸೀಸನ್‌ಗೆ ಸೇರಿವೆ.

3/5

ಉಲ್ಲಾಸ ಹೆಚ್ಚಿಸುವ ವಿಂಟರ್‌ ಎಥ್ನಿಕ್‌ವೇರ್ಸ್

ಅಂದಹಾಗೆ, ಈ ಹಿಂದೆ ವಿಂಟರ್‌ ಸೀಸನ್‌ ಎಂದಾಕ್ಷಣಾ ಕೇವಲ ಡಾರ್ಕ್‌ ಶೇಡ್‌ಗಳ ಎಥ್ನಿಕ್‌ವೇರ್‌ಗಳು ಚಾಲ್ತಿಯಲ್ಲಿರುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಫ್ಯಾಷನ್‌ ಎಕ್ಸ್‌ಪರ್ಟ್ಸ್ ಈ ಕಾನ್ಸೆಪ್ಟ್ ಬದಲಿಸಿ, ಬ್ರೈಟ್‌ ಹಾಗೂ ಲೈಟ್‌ ಶೇಡ್‌ಗಳ ಎಥ್ನಿಕ್‌ವೇರ್‌ಗಳನ್ನು ಟ್ರೆಂಡಿಯಾಗಿಸಿದ್ದಾರೆ. ಇದಕ್ಕೆ ಕಾರಣವೂ ಇದೆ. ಈ ಸೀಸನ್‌ನಲ್ಲಿ ವಿಂಟರ್‌ ಬ್ಲ್ಯೂನಿಂದಾಗಿ ಡಲ್‌ ಆಗಿ ಕಾಣಿಸುವುದು ಸಾಮಾನ್ಯವಾಗಿದೆ. ವೈಬ್ರೆಂಟ್‌ ಹಾಗೂ ಬ್ರೈಟ್‌ -ಲೈಟ್‌ ಶೇಡ್‌ನ ಎಥ್ನಿಕ್‌ವೇರ್‌ ಧರಿಸಿದಲ್ಲಿ ಎಂತಹವರು ನೋಡಲು ಆಕರ್ಷಕವಾಗಿ ಕಾಣಿಸುವರು ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

4/5

ವೈಬ್ರೆಂಟ್‌ ಸನ್‌ ಕಲರ್‌ ಕುರ್ತಾ ಸೂಟ್‌-ಲೆಹೆಂಗಾ ಸೂಟ್‌

ಇನ್ನು, ನಟಿ ಕುಬ್ರಾ ಸೆಟ್‌ ಧರಿಸಿರುವ ಈ ಕುರ್ತಾ-ಲೆಹೆಂಗಾ ಸೂಟ್‌ ಅಥವಾ ಸೆಟ್‌ ಹೊಸ ಕಾನ್ಸೆಪ್ಟ್ ಅಲ್ಲ, ಆದರೆ, ಈ ವಿಂಟರ್‌ ಸೀಸನ್‌ನಲ್ಲಿ ಇವು ಮರಳಿವೆ. ಮ್ಯಾಂಗೋ ಬ್ರಾಂಡ್‌ನ ಈ ಎಥ್ನಿಕ್‌ವೇರ್‌ ಕುಬ್ರಾ ಅವರನ್ನು ಕಂಪ್ಲೀಟ್‌ ಎಥ್ನಿಕ್‌ ಲುಕ್‌ನಲ್ಲಿ ಬಿಂಬಿಸಿದೆ. ಇವರನ್ನು ನೋಡಿದ ಫ್ಯಾಷನ್‌ ಪ್ರೇಮಿಗಳು ಇದೇ ಕಾನ್ಸೆಪ್ಟ್‌ನ ಡಿಸೈನರ್‌ವೇರ್‌ಗಳನ್ನು ಆಯ್ಕೆ ಮಾಡಿಕೊಳ್ಳತೊಡಗಿದ್ದಾರೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

5/5

ವೈಬ್ರೆಂಟ್‌ ಹಳದಿ ಶೇಡ್‌ನ ಎಥ್ನಿಕ್‌ವೇರ್‌ಗಳು ಈ ವಿಂಟರ್‌ ಸೀಸನ್‌ನಲ್ಲಿ ಯುವತಿಯರು, ಮಹಿಳೆಯರನ್ನು ಸೆಳೆಯುತ್ತಿದ್ದು, ಖರೀದಿಗೆ ಗ್ರಾಹಕರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.

ಶೀಲಾ ಸಿ ಶೆಟ್ಟಿ

View all posts by this author