Season Fashion 2026: ಗಾಢ ಬಣ್ಣಗಳಲ್ಲಿ ಮರಳಿದ ತ್ರೀ ಪೀಸ್ ಕುರ್ತಾ ಫ್ಯಾಷನ್
ದಶಕಗಳ ಹಿಂದೆ ಟ್ರೆಂಡಿಯಾಗಿದ್ದ ಡಾರ್ಕ್ ಶೇಡ್‌ನ ತ್ರೀ ಪೀಸ್ ಕುರ್ತಾಗಳು ಮರಳಿವೆ. ಸಾಕಷ್ಟು ವಿನ್ಯಾಸದಲ್ಲಿ ಆಗಮಿಸಿರುವ ಈ ಕುರ್ತಾಗಳು ಉದ್ಯೋಗಸ್ಥ ಮಹಿಳೆಯರು, ಹೋಮ್‌ಮೇಕರ್ಸ್ ಹೀಗೆ ಎಲ್ಲಾ ವಯಸ್ಸಿನ ಮಾನಿನಿಯರನ್ನು ಸವಾರಿ ಮಾಡತೊಡಗಿವೆ.ಈ ಕುರಿತ ಡಿಟೇಲ್ಸ್ ಇಲ್ಲಿದೆ.
ತ್ರೀ ಪೀಸ್ ಕುರ್ತಾ ಫ್ಯಾಷನ್ ಮರಳಿದೆ. ಅದರಲ್ಲೂ ಗಾಢ ಬಣ್ಣದವು ಟ್ರೆಂಡಿಯಾಗಿವೆ.
ಮರಳಿದ ತ್ರೀ ಪೀಸ್ ಕುರ್ತಾ
ಬಾಲಿವುಡ್ ಸಿನಿಮಾಗಳ ಮೂಲಕ ದಶಕಗಳ ಹಿಂದೆ ಸಾಕಷ್ಟು ಟ್ರೆಂಡಿಯಾಗಿದ್ದ ಡಾರ್ಕ್ ಶೇಡ್‌ನ ತ್ರೀ ಪೀಸ್ ಕುರ್ತಾಗಳು ಕೊಂಚ ಹೊಸ ರೂಪದಲ್ಲಿ ಮರಳಿವೆ. ಸಾಕಷ್ಟು ವಿನ್ಯಾಸದಲ್ಲಿ ಆಗಮಿಸಿರುವ ಈ ಕುರ್ತಾಗಳು ಉದ್ಯೋಗಸ್ಥ ಮಹಿಳೆಯರು, ಹೋಮ್‌ಮೇಕರ್ಸ್ ಹೀಗೆ ಎಲ್ಲಾ ವಯಸ್ಸಿನ ಮಾನಿನಿಯರನ್ನು ಸವಾರಿ ಮಾಡತೊಡಗಿವೆ.
ಟ್ರೆಂಡಿ ವಿನ್ಯಾಸದ ಕುರ್ತಾಗಳು
ಸ್ಟ್ರೇಟ್ ಕಟ್ ಕುರ್ತಾ, ಎ ಲೈನ್ ಕುರ್ತಾ, ಚೈನಾ ಕಾಲರ್ ಕುರ್ತಾ, ವೀ ನೆಕ್‌ಲೈನ್ ಕುರ್ತಾ, ಲಾಂಗ್ ಸ್ಲಿಟ್ ಕುರ್ತಾ, ಕಟೌಟ್ ಕುರ್ತಾ ಹೀಗೆ ಸಾಕಷ್ಟು ವಿನ್ಯಾಸದ ಕುರ್ತಾಗಳು ತ್ರೀ ಪೀಸ್ ಸೆಟ್‌ನಲ್ಲಿ ಬಿಡುಗಡೆಗೊಂಡಿವೆ. ಎಂಬೋಸಿಂಗ್ ಡಿಸೈನ್, ಎಂಬ್ರಾಯ್ಡರಿ, ಪ್ಯಾಚ್ ವರ್ಕ್ ಹೀಗೆ ನಾನಾ ವಿನ್ಯಾಸದಲ್ಲಿ ಮೂಡಿ ಬಂದಿವೆ ಎನ್ನುತ್ತಾರೆ ಡಿಸೈನರ್ ಜೀನತ್.
ಗಾಢ ಬಣ್ಣದ ತ್ರೀ ಪೀಸ್ ಕುರ್ತಾ ಸೆಟ್ಸ್
ಅಚ್ಚರಿಯೆಂದರೇ ಈ ಮೊದಲು ಕೇವಲ ಪಾಸ್ಟೆಲ್ ಶೆಡ್‌ಗಳಲ್ಲಿ ಟ್ರೆಂಡಿಯಾಗಿದ್ದ ಈ ತ್ರೀ ಪೀಸ್ ಕುರ್ತಾಗಳು ಈ ಫೆಸ್ಟೀವ್ ಸೀಸನ್‌ನಲ್ಲಿ ಗಾಢ ಬಣ್ಣದಲ್ಲಿ ಬಂದಿವೆ. ನೋಡಿದಾಗ ಗ್ರ್ಯಾಂಡ್ ಲುಕ್‌ಗೂ ಸಾಥ್ ನೀಡುವಂತಿವೆ ಎನ್ನುತ್ತಾರೆ ಡಿಸೈನರ್ ಜಿಮ್ಮಿ.
ತ್ರೀ ಪೀಸ್ ಕುರ್ತಾ ಪ್ರಿಯರಿಗೆ ಟಿಪ್ಸ್
- ಫಿಟ್ಟಿಂಗ್ ಇರುವಂತವನ್ನು ಆಯ್ಕೆ ಮಾಡಿ.
- ಸಿಂಪಲ್ ಮೇಕೋವರ್ ಸಾಕು!
- ಪ್ರಿಂಟೆಡ್‌ಗಿಂತ ಟ್ರೆಂಡ್‌ನಲ್ಲಿರುವ ಸಾದಾ ಕಲರ್‌ನವನ್ನು ಸೆಲೆಕ್ಟ್ ಮಾಡಿ.
- ನಿಮ್ಮ ಪರ್ಸನಾಲಿಟಿಗೆ ಮ್ಯಾಚ್ ಆಗುವಂತಹ ವಿನ್ಯಾಸವನ್ನು ಚೂಸ್ ಮಾಡಿ.