Season Fashion 2026: ಮಾನ್ಸೂನ್ ಮಿಕ್ಸ್ ಮ್ಯಾಚ್ ಫ್ಯಾಷನ್‌ನಲ್ಲಿ ಟರ್ಟಲ್ ನೆಕ್ ಡ್ರೆಸ್
ಮಾನ್ಸೂನ್ ಸೀಸನ್‌ನಲ್ಲಿ ನಾನಾ ಕಲರ್‌ಗಳ ಟರ್ಟಲ್ ನೆಕ್‌ಲೈನ್ ಡ್ರೆಸ್ ಹಾಗೂ ಟೀ ಶರ್ಟ್‌ಗಳು ಬಂದಿವೆ. ಮಿಕ್ಸ್ ಮ್ಯಾಚ್ ಫ್ಯಾಷನ್‌ನಲ್ಲಿ ಜೆನ್ ಜಿ ಹುಡುಗಿಯರನ್ನು ಸವಾರಿ ಮಾಡುತ್ತಿವೆ.ಲೈಟ್‌ವೇಟ್ ಉಡುಪುಗಳ ಕೆಟಗರಿಯಲ್ಲಿ ಕತ್ತನ್ನು ಸುತ್ತುವರಿದ ಫುಲ್‌ಸ್ಲೀವ್ ಸ್ವೆಟರ್ ಸ್ಟೈಲ್‌ನ ಟೀ ಶರ್ಟ್, ಪುಲ್ಓವರ್, ಫ್ರಾಕ್, ಟಾಪ್‌ಗಳು ಕ್ಯಾಶುವಲ್ ಉಡುಪುಗಳಲ್ಲಿ ಕಾಣಿಸಿಕೊಂಡಿವೆ.
ಮಿಕ್ಸ್ ಮ್ಯಾಚ್ ಫ್ಯಾಷನ್
ಮಾನ್ಸೂನ್ ಸೀಸನ್‌ಗೆ ಟರ್ಟಲ್ ನೆಕ್‌ಲೈನ್ ಡ್ರೆಸ್ ಹಾಗೂ ಟೀ ಶರ್ಟ್‌ಗಳು ಮಿಕ್ಸ್ ಮ್ಯಾಚ್ ಫ್ಯಾಷನ್‌ನಲ್ಲಿ ಕಾಣಿಸಿಕೊಂಡಿವೆ. ಅದರಲ್ಲೂ ಕಾರ್ಪೋರೇಟ್ ಹಾಗೂ ಜೆನ್ ಜಿ ಹುಡುಗಿಯರನ್ನು ಸವಾರಿ ಮಾಡುತ್ತಿವೆ.
ಚಾಲ್ತಿಯಲ್ಲಿರುವ ಟರ್ಟಲ್ ನೆಕ್ ಡ್ರೆಸ್‌ಗಳು
ಲೈಟ್‌ವೇಟ್ ಉಡುಪುಗಳ ಕೆಟಗರಿಯಲ್ಲಿ ಕತ್ತನ್ನು ಸುತ್ತುವರಿದ ಫುಲ್‌ಸ್ಲೀವ್ ಸ್ವೆಟರ್ ಸ್ಟೈಲ್‌ನ ಟೀ ಶರ್ಟ್, ಪುಲ್ಓವರ್, ಫ್ರಾಕ್, ಟಾಪ್‌ಗಳು ಕ್ಯಾಶುವಲ್ ಉಡುಪುಗಳಲ್ಲಿ ಕಾಣಿಸಿಕೊಂಡಿವೆ.
ಆಕರ್ಷಕವಾಗಿ ಕಾಣಿಸುವ ಔಟ್‌ಫಿಟ್
ಅಂದಹಾಗೆ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಟರ್ಟಲ್ ನೆಕ್ ಡಿಸೈನರ್‌ವೇರ್‌ಗಳು ಇದೀಗ ಕಾರ್ಪೋರೇಟ್ ಕ್ಷೇತ್ರದವರನ್ನು ಕೂಡ ಅತಿ ಹೆಚ್ಚು ಆಕರ್ಷಿಸಿದೆ. ನೋಡಲು ಅಫೀಶಿಯಲ್ ಲುಕ್ ನೀಡುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಕ್ಯಾಶುವಲ್ ಧರಿಸುವವರಿಗೆ ಇದು ಈ ಸೀಸನ್‌ಗೆ ಹೇಳಿ ಮಾಡಿಸಿದ ಔಟ್‌ಫಿಟ್ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ವ್ಯಕ್ತಿತ್ವಕ್ಕೆ ತಕ್ಕಂತೆ ಟರ್ಟಲ್ ನೆಕ್ ಡ್ರೆಸ್
ಉದ್ದ ಕತ್ತು ಇರುವವರಿಗೆ ಈ ನೆಕ್‌ಲೈನ್ ಉಡುಗೆಗಳು ಸುಂದರವಾಗಿ ಕಾಣುತ್ತವೆ. ಮಾಡೆಲ್ ಲುಕ್ನೀಡುತ್ತವೆ. ಇನ್ನು, ಕತ್ತು ಚಿಕ್ಕ ಇರುವವರಿಗೆ ಇದು ಸೂಟ್ಆಗದು. ಸೀಸನ್‌ಗೆ ತಕ್ಕಂತೆ ಶೇಡ್ಸ್ ಹಾಗೂ ಕಲರ್‌ಗಳನ್ನು ಆಯ್ಕೆ ಮಾಡಿದಲ್ಲಿ ಟ್ರೆಂಡಿಯಾಗಿಯೂ ಕಾಣಿಸಬಹುದು. ಇನ್ನು ಕ್ರಾಪ್ ಟಾಪ್‌ನವು ಕಾಲೇಜು ಹುಡುಗಿಯರಿಗೆ ಸೂಟ್ ಆಗುತ್ತವೆ. ಸ್ಲೀವ್ ಲೆಸ್ ಟರ್ಟಲ್ ನೆಕ್ ಕಾರ್ಡಿಗಾನ್ ಇಲ್ಲವೇ ಬ್ಲೇಝರ್ ಜತೆ ಧರಿಸಿದಾಗಲೂ ನೋಡಲು ಆಕರ್ಷಕವಾಗಿ ಕಾಣಿಸುತ್ತವೆ. ಅಷ್ಟೇಕೆ! ಸ್ಟ್ರಾಪ್ ಡ್ರೆಸ್‌ಅನ್ನು ಕೂಡ ಇದರ ಮೇಲೆ ಧರಿಸಬಹುದು ಎಂದು ಸ್ಟೈಲಿಸ್ಟ್ ಜಾಯ್ ಟಿಪ್ಸ್ ನೀಡುತ್ತಾರೆ.
ಮಿಕ್ಸ್ ಮ್ಯಾಚ್ ಮಾಡುವುದು ಹೇಗೆ?
- ಇವನ್ನು ಬ್ಲೇಝರ್, ಕಾರ್ಡಿಗಾನ್ ಇಲ್ಲವೇ ಶ್ರಗ್ಸ್ ಜತೆಯಲ್ಲಿ ಧರಿಸಬಹುದು.
- ಇವನಿಂಗ್ ಸ್ಕರ್ಟ್ಸ್ ಅಥವಾ ಮಿನಿ ಸ್ಕರ್ಟ್ಸ್ ಜತೆಯೂ ಧರಿಸಬಹುದು. ಇದರ ಜತೆಗೆ ಹೈ ಹೀಲ್ಸ್ ಸಖತ್ ಮ್ಯಾಚಿಂಗ್ ಆಗುತ್ತವೆ.
- ಬ್ಯಾಗಿ ಸ್ವೆಟ್ ಪ್ಯಾಂಟ್ಸ್, ಸ್ಲಿಂಕಿ ಟರ್ಟಲ್ ನೆಕ್ ಕ್ಲಾಸಿಕ್ ಕೊಂಬೊ ಲುಕ್ ನೀಡುತ್ತವೆ. ಟೀನೇಜ್ ಹುಡುಗಿಯರಿಗೆ ಹಾಗೂ ವರ್ಕಿಂಗ್ ವುಮೆನ್‌ಗೆ, ಕಾರ್ಪೋರೇಟ್ ಕ್ಷೇತ್ರದಲ್ಲಿಕಾರ್ಯ ನಿರ್ವಹಿಸುವವರಿಗೆ ಪರ್ಫೆಕ್ಟ್ ಸೂಟ್ ಆಗುತ್ತವೆ.
- ಟರ್ಟಲ್ ನೆಕ್ ಕಂಪ್ಲೀಟ್ ಕತ್ತನ್ನು ಆವರಿಸಿಕೊಳ್ಳುತ್ತವೆ. ಹಾಗಾಗಿ ಯಾವುದೇ ಆಕ್ಸೆಸರೀಸ್ ಧರಿಸುವುದು ಬೇಡ. ಧರಿಸಲೇ ಬೇಕಿದ್ದಲ್ಲಿ ಲಾಂಗ್ ಚೈನ್‌ನಂತವನ್ನು ಹಾಕಿಕೊಳ್ಳಬಹುದು.