Season Fashion 2026: ಸ್ಟ್ರೀಟ್‌ವೇರ್ ಫ್ಯಾಷನ್‌ನಲ್ಲಿ ವೈಬ್ರೆಂಟ್ ಬಾಂಬರ್ ಜಾಕೆಟ್ ಹಂಗಾಮ
Vibrant Bomber Jackets: ಈ ಮಾನ್ಸೂನ್ ಸೀಸನ್‌ನ ಸ್ಟ್ರೀಟ್‌ವೇರ್ ಫ್ಯಾಷನ್‌ನಲ್ಲಿ ಸ್ಪೋರ್ಟಿ ಲುಕ್ ನೀಡುವ ವೈಬ್ರೆಂಟ್ ಬಾಂಬರ್ ಜಾಕೆಟ್‌ಗಳು ಟ್ರೆಂಡಿಯಾಗಿವೆ. ಯಾವ್ಯಾವ ಬಗೆಯವು ಟ್ರೆಂಡಿಯಾಗಿವೆ? ಮಿಕ್ಸ್ ಮ್ಯಾಚಿಂಗ್ ಸ್ಟೈಲಿಂಗ್ ಹೇಗೆ? ಈ ಬಗ್ಗೆ ಇಲ್ಲಿದೆ ವಿವರ.
ವೈಬ್ರೆಂಟ್ ವಾರ್ಸಿಟಿ ವೈಬ್ರೆಂಟ್ ಜಾಕೆಟ್‌ಗಳು ಮಾನ್ಸೂನ್ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.
ಟ್ರೆಂಡಿಯಾಗಿರುವ ವೈಬ್ರೆಂಟ್ ಬಾಂಬರ್ ಜಾಕೆಟ್‌ಗಳು :
ಈ ಸೀಸನ್‌ನಲ್ಲಿ ಅದರಲ್ಲೂ ಸ್ಟ್ರೀಟ್‌ವೇರ್ ಫ್ಯಾಷನ್‌ನಲ್ಲಿ ಕಲರ್‌ಫುಲ್ ವೈಬ್ರೆಂಟ್ ಬಾಂಬರ್ ಜಾಕೆಟ್‌ಗಳು ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟಿವೆ. ಕಾಲೇಜು ಹುಡುಗಿಯರನ್ನು ಸವಾರಿ ಮಾಡತೊಡಗಿವೆ.
ಸಮೈರಾ ರಾವ್ ಧರಿಸಿದ ವೈಬ್ರೆಂಟ್ ಜಾಕೆಟ್
ಇನ್ನು, ಇತ್ತೀಚೆಗೆ ನಟಿ ಸಮೈರಾ ರಾವ್ ಫ್ಯಾಷನ್ ಶೂಟ್‌ವೊಂದರಲ್ಲಿ ಧರಿಸಿದ ಸ್ಪೋರ್ಟಿ ಲುಕ್ ನೀಡುವ ಗ್ರೀನ್ ಹಾಗೂ ವೈಟ್ ಕಲರ್‌ನ ಕ್ರಾಪ್ ವಾರ್ಸಿಟಿ ಜಾಕೆಟ್ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅಪ್‌ಲೋಡ್ ಮಾಡಿದ ನಂತರ ಸಾಕಷ್ಟು ಕಾಲೇಜು ಹುಡುಗಿಯರನ್ನು ಸೆಳೆಯಿತು. ಅದರಲ್ಲೂ ಆ ಜಾಕೆಟ್‌ನ ವೈಬ್ರೆಂಟ್ ಕಲರ್ ಕಾಂಬಿನೇಷನ್ ಹಿಟ್ ಲಿಸ್ಟ್‌ಗೆ ಸೇರಿತು.
ವೆರೈಟಿ ವೈಬ್ರೆಂಟ್ ಬಾಂಬರ್ ಜಾಕೆಟ್‌ಗಳು
ರೆಡ್- ವೈಟ್, ಆರೆಂಜ್ - ವೈಟ್, ವೈಟ್ - ಬ್ಲ್ಯಾಕ್ ಕ್ರಾಪ್ಡ್ ವರ್ಸಿಟಿ ಬಾಂಬರ್ ಜಾಕೆಟ್‌ಗಳು ಈ ಸೀಸನ್‌ನಲ್ಲಿ ಸಖತ್ ಚಾಲ್ತಿಯಲ್ಲಿವೆ. ಅದರಲ್ಲೂ ಬ್ಲೌಸ್‌ನಂತೆ ಕಾಣಿಸುವ ಕ್ರಾಪ್ಡ್ ಜಾಕೆಟ್‌ಗಳು ಜಾಸ್ತಿ ಬೇಡಿಕೆ ಸೃಷ್ಟಿಸಿಕೊಂಡಿವೆ. ಅದರಲ್ಲೂ ಕಾಲೇಜು ಹುಡುಗ-ಹುಡುಗಿಯರು ಇಬ್ಬರು ಧರಿಸಬಹುದಾದ ಯೂನಿಸೆಕ್ಸ್ ಡಿಸೈನ್‌ನವು ಹಾಗೂ ಓವರ್‌ಸೈಝ್ ಬಾಂಬರ್ ಜಾಕೆಟ್‌ಗಳು ಈಗಾಗಲೇ ಜೆನ್ ಜಿ ಜನರೇಷನ್‌ನ ವಾರ್ಡ್‌ರೋಬ್ ಸೇರಿವೆ ಎನ್ನುತ್ತಾರೆ ಜೆನ್ ಜಿ ಸ್ಟೈಲಿಸ್ಟ್ ರಾಕಿ ಮತ್ತು ಜೀತು.
ಮಿಕ್ಸ್ ಮ್ಯಾಚಿಂಗ್ ಟಿಪ್ಸ್
ಸದ್ಯ ಸ್ಟ್ರೀಟ್ ಸ್ಟೈಲ್ ಫ್ಯಾಷನ್‌ನಲ್ಲಿ ಸ್ಪೋರ್ಟಿ ಲುಕ್ ನೀಡುವ ಈ ಶೈಲಿಯ ಜಾಕೆಟ್‌ಗಳನ್ನು ನಾನಾ ಬಗೆಯಲ್ಲಿ ಮಿಕ್ಸ್ ಮ್ಯಾಚ್ ಮಾಡಬಹುದು.
- ಯಾವುದೇ ಕೋ ಆರ್ಡ್ ಸೆಟ್ ಜೊತೆ ಧರಿಸಬಹುದು.
- ಯೂನಿಸೆಕ್ಸ್ ಜಾಕೆಟ್ ಆದಲ್ಲಿ ನೋಡಿಕೊಂಡು ಮಿಕ್ಸ್ ಮ್ಯಾಚ್ ಮಾಡಬೇಕು.
- ಸ್ಪೋರ್ಟಿ ಲುಕ್ ನೀಡಿದಲ್ಲಿ ಜೆನ್ ಜಿ ಲುಕ್ ನೀಡುವುದು.
- ಈ ಜಾಕೆಟ್‌ಗಳು ಯಂಗ್ ಲುಕ್ ನೀಡುವುದು.