Sohail Khan: ನಟ ಸೊಹೈಲ್ ಖಾನ್ ದಾಂಪತ್ಯ ಮುರಿದು ಬೀಳೋಕೆ ಕಾರಣ ಏನು? ಮಾಜಿ ಪತ್ನಿ ಹೇಳಿದ್ದೇನು?
Sohail Khan Divorce Case: ಚಿತ್ರರಂಗದಲ್ಲಿ ಸೆಲೆಬ್ರಿಟಿಗಳ ಡಿವೋರ್ಸ್ ಸರ್ವೇ ಸಾಮಾನ್ಯ. ಅದರಲ್ಲೂ ಬಾಲಿವುಡ್ನಲ್ಲಿ ಅತೀ ಹೆಚ್ಚಾಗಿ ಸ್ಟಾರ್ ಜೋಡಿಗಳು ವಿಚ್ಛೇದನ ಪಡೆದು ಬೇರ್ಪಡುತ್ತಿವೆ. ಹೀಗೆ ಡಿವೋರ್ಸ್ ಪಡೆದ ಜೋಡಿಗಳಲ್ಲಿ ನಟ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ಮತ್ತು ಸೀಮಾ ಸಜ್ದೇಹ್ ಜೋಡಿ ಕೂಡ ಒಂದು. ಇದೀಗ ತಮ್ಮ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಸೀಮಾ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ಸಂಪೂರ್ಣ ವರದಿ.



ನೆಟ್ಫ್ಲಿಕ್ಸ್ನ ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್ ಮೂಲಕ ಜನಪ್ರಿಯತೆ ಗಳಿಸಿದ ಸೀಮಾ ಸಜ್ದೇಹ್, 2022 ರಲ್ಲಿ ನಟ-ಚಲನಚಿತ್ರ ನಿರ್ಮಾಪಕ ಸೊಹೈಲ್ ಖಾನ್ ಅವರಿಂದ ವಿಚ್ಛೇದನ ಪಡೆದಿದ್ದರು. ಇದೀಗ ಸುಮಾರು ಮೂರು ವರ್ಷಗಳ ನಂತರ ಮೊದಲ ಬಾರಿಗೆ ತಮ್ಮ ವಿಚ್ಛೇದನದ ಬಗ್ಗೆ ಬಹಿರಂಗವಾಗಿ ಸೀಮಾ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವಿಚ್ಛೇದನದ ಬದುಕು, ಮಕ್ಕಳ ಜೊತೆಗಿನ ಅವಿನಾಭಾವ ಸಂಬಂಧ, ದಾಂಪತ್ಯ ಬದುಕು ಮತ್ತು ವಿವಾಹೇತರ ಸಂಬಂಧಗಳು ಈ ಬಗ್ಗೆ ಮಾತನಾಡಿದ್ದಾರೆ.

ದಾಂಪತ್ಯದಲ್ಲಿ ನಿರಂತರ ಸಂಘರ್ಷವು ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಸೀಮಾ ಒತ್ತಿ ಹೇಳಿದರು. "ನೀವು ನಿರಂತರವಾಗಿ ಪರಸ್ಪರ ಜಗಳವಾಡುತ್ತಿದ್ದಾಗ, ಅದು ನಿಮ್ಮ ಮಕ್ಕಳ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ. ಅವರಿಗೆ ನೀವು ಬೇಡ ಎಂದೆನಿಸುತ್ತದೆ. ಮಕ್ಕಳನ್ನು ಕಳೆದುಕೊಳ್ಳುವ ಭೀತಿ ಇದ್ದೇ ಇರುತ್ತದೆ.

ಇದೇ ವೇಳೆ ಅವರು ವಿವಾಹೇತರ ಸಂಬಂಧಗಳ ಬಗ್ಗೆ ಮಾತನಾಡಿದ ಅವರು, ಪ್ರಾಮಾಣಿಕವಾಗಿ ನಾನು ಹೇಳುತ್ತಿದ್ದೇನೆ...ಸಿಂಪಲ್ ಅಫೇರ್ಗಳು ವೈವಾಹಿಕ ಬದುಕನ್ನು ಅಂತ್ಯಗೊಳಿಸುವುದಿಲ್ಲ. ನೀವು ಇನ್ನೊಬ್ಬರ ಬಗ್ಗೆ ಯೋಚಿಸುವುದು ಕೂಡ ಮೋಸವೇ. ಹೀಗಿರುವಾಗ ಪರಸ್ಪರ ಬದುಕುತ್ತಿರುವ ರೀತಿ ಮಾತ್ರ ದಾಂಪತ್ಯ ಕೊನೆಗೊಳ್ಳಲು ಕಾರಣವಾಗುತ್ತದೆ. ಜೀವನವು ಬಹಳ ಚಿಕ್ಕದು. ಅದನ್ನು ಬದುಕಿ ಮತ್ತು ಸಂತೋಷವಾಗಿರಿ. ನಗು ಅತ್ಯುತ್ತಮ ಔಷಧ, ಮತ್ತು ನೀವು ಒಟ್ಟಿಗೆ ನಗುವುದನ್ನು ನಿಲ್ಲಿಸಿದ ದಿನ, ಅಂದು ಎಲ್ಲವೂ ಮುಗಿಯಿತು ಎಂದರ್ಥ" ಎಂದಿದ್ದಾರೆ.

ನೀವು ಆ ವ್ಯಕ್ತಿಯನ್ನು ಮತ್ತೆ ಇಷ್ಟಪಡುವ ಹಂತವನ್ನು ತಲುಪಲು ನಿಮಗೆ ಸಾಧ್ಯವಾಗುತ್ತದೆ. ನೀವು ಆ ವ್ಯಕ್ತಿಯನ್ನು ದ್ವೇಷಿಸಬಾರದು... ನೀವು ಮದುವೆಯಲ್ಲಿ ತುಂಬಾ ಸಂತೃಪ್ತರಾಗುತ್ತೀರಿ. ಆ ಸಮಯದಲ್ಲಿ ನೀವು ನನ್ನನ್ನು ಕೇಳಿದ್ದರೆ, ನಾನು ಕೂಡ ಸೊಹೈಲ್ನನ್ನು ದೂಷಿಸುತ್ತಿದೆ. ಆಮೇಲೆ ಎಲ್ಲವೂ ನನಗೆ ಅರ್ಥವಾಗ ತೊಡಗಿತು. ಬದುಕನ್ನು ನೋಡುವ ದೃಷ್ಟಿ ಬದಲಾಯ್ತು ಎಂದು ಸೀಮಾ ತಿಳಿಸಿದ್ದಾರೆ.

"ನಾನು ಬೇರೆಡೆಗೆ ಹೋಗಿರಬಹುದು, ಸೊಹೈಲ್ ಬೇರೆಡೆಗೆ ಹೋಗಿರಬಹುದು, ಆದರೆ ನಮಗೆ ಇಬ್ಬರು ಮಕ್ಕಳಿದ್ದಾರೆ, ಮತ್ತು ಕೊನೆಯಲ್ಲಿ, ಅದು ಅವರ ಕುಟುಂಬವಾಗಿದ್ದರೆ, ಅದು ನನ್ನದೂ ಕೂಡ. ನಾವು ಒಂದು ಕುಟುಂಬ. ನಾನು ಜೀವನಪರ್ಯಂತ ಸಂಪರ್ಕ ಹೊಂದಿದ್ದೇನೆ. ನಾನು ಆ ಮನೆಯಲ್ಲಿ ಹಲವು ವರ್ಷಗಳನ್ನು ಕಳೆದಿದ್ದೇನೆ ಎಂದಿದ್ದಾರೆ. ಡಿವೋರ್ಸ್ ನಂತರ ಸೀಮಾ ವಿಕ್ರಮ್ ಅಹುಜಾ ಜೊತೆ ಡೇಟಿಂಗ್ನಲ್ಲಿದ್ದಾರೆ ಎನ್ನಲಾಗಿದೆ. ಸೊಹೈಲ್ರನ್ನು ವರಿಸುವ ಮುನ್ನ ವಿಕ್ರಮ್ ಅಹುಜಾ ಜೊತೆ ಸೀಮಾ ನಿಶ್ಚಿತಾರ್ಥವಾಗಿತ್ತು.