Vaishnavi Gowda: ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ವೈಷ್ಣವಿ ಗೌಡ; ಹುಡುಗ ಯಾರು ಗೊತ್ತಾ?
ಕಿರುತೆರೆ ನಟಿ ವೈಷ್ಣವಿ ಗೌಡ ಅವರು ಹಸೆಮಣೆ ಏರಲಿದ್ದಾರೆ. ಅವರು ಅನೂಕೂಲ್ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಎಂಗೇಜ್ಮೆಂಟ್ಗೆ ಚಿತ್ರರಂಗದ ಹಲವು ಗಣ್ಯರು ಸೇರಿದಂತೆ ಆಪ್ತರು ಭಾಗವಹಿಸಿದ್ದರು. ಅವರ ನಿಶ್ಚಿತಾರ್ಥದ ಕೆಲ ಫೋಟೋಗಳು ಇಲ್ಲಿವೆ.



ಕಿರುತೆರೆ ನಟಿ ವೈಷ್ಣವಿ ಗೌಡ ಅವರು ಅನುಕೂಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅವರ ಎಂಗೇಜ್ಮೆಂಟ್ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ವೈಷ್ಣವಿ ಗೌಡ ಅಭಿಮಾನಿಗಳು ಜೋಡಿಗೆ ಶುಭಾಶಗಳನ್ನು ಕೋರುತ್ತಿದ್ದಾರೆ.

ವೈಷ್ಣವಿ ಗೌಡ ಅವರ ಎಂಗೇಜ್ಮೆಂಟ್ ಸದ್ದಿಲ್ಲದೆ ನಡೆದಿದೆ. ಸದ್ಯ ವೈಷ್ಣವಿ ಸೀತಾರಾಮ ಧಾರವಾಹಿಯಲ್ಲಿ ನಟಿಸುತ್ತಿದ್ದು, ತಮ್ಮ ಕೆಲಸದಿಂದ ಬ್ರೇಕ್ ಪಡೆದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಸಾಂಪ್ರದಾಯಿಕವಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದ್ದು, ಸಂಜೆ ಬರ್ಥ್ ಡೇ ಪಾರ್ಟಿ ಇತ್ತು ಎನ್ನಲಾಗಿದೆ.

ವೈಷ್ಣವಿ ಗೌಡ ಅವರ ಮನೆಯವರೇ ಈ ಸಂಬಂಧವನ್ನು ಹುಡುಕಿದ್ದಾರೆ ಎನ್ನಲಾಗಿದೆ. ಈ ಮದುವೆ ಫಿಕ್ಸ್ ಆಗಿ ಹಲವು ತಿಂಗಳುಗಳೇ ಕಳೆದಿದ್ದು, ಈಗ ನಿಶ್ಚಿತಾರ್ಥ ಆಗಿದೆ. ಮದುವೆಯ ದಿನಾಂಕ ಇನ್ನೂ ಬಹಿರಂಗಗೊಳಿಸಿಲ್ಲ. ಬೆಳಗ್ಗೆ ನಡೆದ ಶಾಸ್ತ್ರದಲ್ಲಿ ಕ್ರೀಮ್ ಕಲರ್ ಬಣ್ಣದ ಉಡುಗೆಯಲ್ಲಿ ಇವರಿಬ್ಬರು ಕಾಣಿಸಿಕೊಂಡಿದ್ದರು. ಸಂಜೆ ವೈಷ್ಣವಿ ಗೌಡ ಅವರು ಕ್ರೀಮ್ ಕಲರ್ ಗೌನ್ನಲ್ಲಿ ಮಿಂಚಿದ್ದರೆ, ಅನುಕೂಲ್ ಅವರು ಬ್ಲ್ಯಾಕ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದರು.

ನಟಿ ನಿಶ್ಚಿತಾರ್ಥದಲ್ಲಿ ಸ್ನೇಹಿತರಾದ ನಟಿ ಅಮೂಲ್ಯ ಹಾಗೂ ಕುಟುಂಬ, ನಿರೂಪಕಿ ಚೈತ್ರಾ ವಾಸುದೇವನ್ ಸೇರಿದಂತೆ ಹಲವು ಕಿರುತೆರೆ ಕಲಾವಿದರು ಹಾಗೂ ಸಿನಿಮಾ ಇಂಡಸ್ಟ್ರಿಯವರು ಭಾಗಿಯಾಗಿದ್ದರು.

ವೈಷ್ಣವಿ ಗೌಡ ಅವರು ಮದುವೆಯಾಗುತ್ತಿರೋ ಅನುಕೂಲ್ ಅವರು ಬೇರೆ ರಾಜ್ಯದವರು ಎನ್ನಲಾಗಿದೆ. ಇನಸ್ಟಾಗ್ರಾಂನಲ್ಲಿ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿರುವ ನಟಿ “ಅವನದ್ದು ಆಕಾಶ, ಸೇವೆ, ನನ್ನದು ಸ್ಕ್ರಿಪ್ಟ್, ವೇದಿಕೆ. ವಿಧಿ ಒಂದು ಸುಂದರ ಲವ್ಸ್ಟೋರಿ ಹೆಣೆದಿದೆ” ಎಂದು ಹೇಳಿದ್ದಾರೆ. ಅನುಕೂಲ್ ಅವರು ಭಾರತೀಯ ವಾಯುಸೇನೆಯಲ್ಲಿದ್ದಾರೆ ಎಂಬುದನ್ನು ವೈಷ್ಣವಿ ಬಹಿರಂಗ ಪಡಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ವೈಷ್ಣವಿ ಅವರು ತನಗೆ 300 ಕ್ಕೂ ಅಧಿಕ ಮದುವೆ ಪ್ರಪೋಸಲ್ಸ್ಗಳು ಬಂದಿವೆ ಎಂದು ಹೇಳಿದ್ದರು. ವೈಷ್ಣವಿ ಗೌಡ ಅವರು ಬಯಸಿದಂತೆ ಈಗ ಅವರು ಪ್ರೀತಿಸುವ ಹುಡುಗ ಸಿಕ್ಕಿದ್ದಾನೆ. ಆದಷ್ಟು ಬೇಗ ವೈಷ್ಣವಿ ಹಾಗೂ ಅನುಕೂಲ್ ಮಿಶ್ರಾ ಅವರ ಮದುವೆ ನಡೆಯಲಿದೆ.

ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಮನೆಮಾತಾಗಿದ್ದ ವೈಷ್ಣವಿ ಇದೀಗ ಸೀತಾರಾಮ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮದುವೆಯ ನಂತರೂ ಅವರು ವೃತ್ತಿಯಲ್ಲಿ ಮುಂದುವರಿಯುತ್ತಾರಾ ಎಂಬುದನ್ನು ಅವರು ಎಲ್ಲಿಯೂ ಹೇಳಿಕೊಂಡಿಲ್ಲ.