ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shalini Pandey: ಅಂದು ಲಿಪ್‌ಲಾಕ್‌; ಇಂದು ಬೋಲ್ಡ್‌ ಫೋಟೊಶೂಟ್: ಪಡ್ಡೆಗಳ ನಿದ್ದೆಕದ್ದ ʼಅರ್ಜುನ್‌ ರೆಡ್ಡಿʼ ಖ್ಯಾತಿಯ ಶಾಲಿನಿ ಪಾಂಡೆ

ತೆಲುಗಿನ ʼಅರ್ಜುನ್ ರೆಡ್ಡಿʼ ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಟಿ ಶಾಲಿನಿ ಪಾಂಡೆ ಸದ್ಯ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಇದೀಗ ಅವರು ಬೋಲ್ಡ್ ಆಗಿ ಫೋಟೊಶೂಟ್ ಮಾಡಿಸಿಕೊಂಡಿದ್ದು ಅವರ ಮಾದಕ ಫೋಟೊಗಗಳು ವೈರಲ್ ಆಗಿವೆ.

Shalini Pandey
1/5

ಬಾಲಿವುಡ್, ಕಾಲಿವುಡ್‌, ಟಾಲಿವುಡ್‌ ಹೀಗೆ ಸಖತ್ ಬ್ಯುಸಿ ಇರುವ ನಟಿ ಶಾಲಿನಿ ಪಾಂಡೆ ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿದ್ದಾರೆ. ಆಗಾಗ ವಿಭಿನ್ನ ಫೋಟೊಶೂಟ್ ಮಾಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಇವರು ಈ ಭಾರಿ ಸಖತ್ ಹಾಟ್ ಆಗಿ ಪೋಸ್‌ ನೀಡಿದ್ದಾರೆ.

2/5

ಟಾಲಿವುಡ್‌ನ ʼಅರ್ಜುನ್ ರೆಡ್ಡಿ' ಸಿನಿಮಾದ ಮೂಲಕ ಖ್ಯಾತಿ ಪಡೆದ ಅವರು ಹಿಂದಿ, ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ʼಜೋರ್ಧಾರ್ ಜಯೇಶ್‌ ಭಾಯ್ʼ ಹಿಂದಿ ಚಿತ್ರದಲ್ಲಿ ರಣವೀರ್ ಸಿಂಗ್ ಜತೆ ನಟಿಸುವ ಮೂಲಕ ಶಾಲಿನಿ ಪಾಂಡೆ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದರು.

3/5

ಶಾಲಿನಿ ಪಾಂಡೆ ಇತ್ತೀಚೆಗೆ ಹಾಟ್ ಫೋಟೊಶೂಟ್ ಮಾಡಿಸಿದ್ದಾರೆ. ಜಲಧಾರೆಯಲ್ಲಿ ಎಂಜಾಯ್ ಮಾಡುವ ನಟಿಯ ಸೆಕ್ಸಿ ಲುಕ್ ಪಡ್ಡೆ ಹುಡುಗರ ಹಾರ್ಟ್ ಬೀಟ್ ಹೆಚ್ಚಾಗುವಂತೆ ಮಾಡಿದೆ. ನಟಿ ಬಿಳಿ ಬಣ್ಣದ ಡ್ರೆಸ್ ಧರಿಸಿ, ಮಳೆಯಲ್ಲಿ ಮಿಂದ ಜಲಕನ್ಯೆ ಥರ ಕಾಣಿಸಿಕೊಂಡಿದ್ದಾರೆ. ಸಖತ್ ಮಾದಕವಾಗಿರುವ ಈ ಫೋಟೊಗಳಿಗೆ ಫ್ಯಾನ್ಸ್ ಲೈಕ್ ಕಾಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ.

4/5

ವೈಟ್ ಕಲರ್ ಡ್ರೆಸ್ ಧರಿಸಿ ನಟಿ ಕ್ಯಾಮೆರಾ ಮುಂದೆ ಸಖತ್ ಪೋಸ್ ಕೊಟ್ಟಿದ್ದಾರೆ. ಸದ್ಯ ನಟಿಯ ಫೋಟೊಗಳು ಬಹಳಷ್ಟು ವೈರಲ್ ಆಗಿದ್ದು ಬಳಕೆದಾರರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಶಾಲಿನಿಯನ್ನು ಸೂಪರ್ ಹಾಟ್ ಎಂದು ನೆಟ್ಟಿಗರು ಕರೆದಿದ್ದಾರೆ.

5/5

ʼಅರ್ಜುನ್ ರೆಡ್ಡಿʼ ನಂತರ ಶಾಲಿನಿ ಪಾಂಡೆಗೆ ಟಾಲಿವುಡ್‌ನಲ್ಲಿ ಅನೇಕ ಆಫರ್‌ಗಳು ಬಂದಿವೆ. ತೆಲುಗಿನ ʼನಿಶಬ್ದಂʼ ಚಿತ್ರದಲ್ಲಿಯೂ ಶಾಲಿನಿ ಪಾಂಡೆ ನಟಿಸಿದ್ದಾರೆ. ಸದ್ಯ ಧನುಷ್ ನಟನೆಯ 'ಇಡ್ಲಿ ಕಡೈ' ಮತ್ತು ಹಿಂದಿಯ 'ರಾಹು ಕೇತು' ಸಿನಿಮಾದಲ್ಲಿ ಶಾಲಿನಿ ಬಣ್ಣ ಹಚ್ಚಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ.