Shopping Trend 2026: ಶಾಪಿಂಗ್ ಪ್ರಿಯರ ಫ್ಲೀ ಮಾರ್ಕೆಟ್ ಎಂಬ ಹೈ ಟೆಕ್ ಸಂತೆ!
Flea Market: ಇತ್ತೀಚೆಗೆ ಮಾಲ್‌ಗಳು ಹಾಗೂ ಅಪಾರ್ಟ್‌ಮೆಂಟ್‌ಗಳ ಕ್ಯಾಂಪಸ್‌ನಲ್ಲಿ ಫ್ಲೀ ಮಾರ್ಕೆಟ್ ಕಾನ್ಸೆಪ್ಟ್ ಲಗ್ಗೆ ಇಟ್ಟಿದೆ. ದೇಸಿ ಫ್ಯಾಷನ್‌ವೇರ್ಸ್, ಆಕ್ಸೆಸರೀಸ್ ಮತ್ತು ಸ್ಥಳೀಯ ಲೋಕಲ್ ಉತ್ಪನ್ನಗಳನ್ನು ಖರೀದಿಸಲು ಇವು ಸಾಥ್ ನೀಡುತ್ತಿವೆ. ಏನೆನೆಲ್ಲಾ ಲಭ್ಯ? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.
ಫ್ಲೀ ಮಾರ್ಕೆಟ್‌ಗಳು ಶಾಪಿಂಗ್ ಪ್ರಿಯರ ನಯಾ ಶಾಪಿಂಗ್ ಸ್ಪಾಟ್‌ಗಳಾಗಿವೆ. ಜತೆಗೆ ಹೈ ಟೆಕ್ ಸಂತೆ ಎಂಬ ಹೆಸರು ಪಡೆದಿವೆ.
ಇತ್ತೀಚೆಗೆ ಮಾಲ್‌ಗಳಲ್ಲಿ ಹಾಗೂ ಅಪಾರ್ಟ್ಮೆಂಟ್ ಕ್ಯಾಂಪಸ್‌ಗಳಲ್ಲಿ ಈ ಕಾನ್ಸೆಪ್ಟ್ ಸಾಮಾನ್ಯವಾಗಿದ್ದು, ದೇಸಿ ಫ್ಯಾಷನ್‌ವೇರ್ಸ್, ಆಕ್ಸೆಸರೀಸ್ ಮತ್ತು ಸ್ಥಳೀಯ ಲೋಕಲ್ ಉತ್ಪನ್ನಗಳನ್ನು ಖರೀದಿಸಲು ಇವು ಸಾಥ್ ನೀಡುತ್ತಿವೆ.
ಮಾಲ್‌ಗಳಲ್ಲಿ ಫ್ಲೀ ಮಾರ್ಕೆಟ್ ಕಾರುಬಾರು
ಬೆಂಗಳೂರಿನ ಬಹುತೇಕ ಮಾಲ್‌ಗಳಲ್ಲಿ ವಾರದ ಕೊನೆಯಲ್ಲಿ ನಾನಾ ಹೆಸರಲ್ಲಿ ಅಥವಾ ಸೀಸನ್ ಹೆಸರಲ್ಲಿ ಫ್ಲೀ ಮಾರ್ಕೆಟ್‌ಗಳು ನಡೆಯುತ್ತವೆ. ಹೆಚ್ಚಾಗಿ ಮಾಲ್‌ನ ಹೊರಭಾಗದಲ್ಲಿ ನಡೆಯುವ ಈ ಹೈ ಟೆಕ್ ಸಂತೆಯಲ್ಲಿ ಕಡಿಮೆಯೆಂದರೂ 20 ಕ್ಕಿಂತ ಹೆಚ್ಚು ಅಂಗಡಿಗಳು ಅಥವಾ ಸ್ಟಾಲ್‌ಗಳಿರುತ್ತವೆ. ನೋಡಲು ಒಂದೇ ಶೈಲಿಯ ಶಾಪ್‌ಗಳಿದ್ದರೂ, ನಾನಾ ಬಗೆಯ ಫ್ಯಾಷನ್‌ಗೆ ಸಂಬಂಧಿಸಿದ ಹಾಗೂ ಡೆಕೋರೇಟಿವ್ ಐಟಂಗಳು ದೊರೆಯುತ್ತವೆ. ಅತಿ ಹೆಚ್ಚಾಗಿ ಫ್ಯಾಷನ್‌ವೇರ್‌ಗಳು ಸಿಗುತ್ತವೆ ಎನ್ನುತ್ತಾರೆ ಫ್ಲೀ ಮಾರ್ಕೆಟ್ ಆಯೋಜಕರು.
ಆಕರ್ಷಕ ಫ್ಯಾಷನ್‌ವೇರ್ –ಆಕ್ಸೆಸರಿಸ್
ಇನ್ನು ಈ ಶಾಪ್‌ಗಳಲ್ಲಿ ಯಾವುದೂ ಬ್ರ್ಯಾಂಡೆಡ್ ಐಟಂಗಳು ದೊರೆಯುವುದಿಲ್ಲ! ಬದಲಿಗೆ ಮಧ್ಯಮವರ್ಗದವರ ಕೈಗೆಟಕಬಹುದಾದ ದೇಸಿ ಹಾಗೂ ಸ್ಥಳಿಯ ಬೋಟಿಕ್‌ಗಳಿಂದ ಸಿದ್ಧಪಡಿಸಿದ ಫ್ಯಾಷನ್‌ವೇರ್‌ಗಳು ಸಿಗುತ್ತವೆ. ಇನ್ನು ಚಿಕನ್ಕಾರಿ ಹಾಗೂ ಕಾಶ್ಮೀರಿ ಕುರ್ತಾದಂತಹ ಅಪ್ಪಟ ದೇಸಿ ವರ್ಕ್ ಇರುವಂತವು, ಹ್ಯಾಂಡ್ಲೂಮ್ ಸೀರೆಗಳು, ಹ್ಯಾಂಡ್ಮೇಡ್ ಡಿಸೈನ್‌ನ ಫ್ಯಾಬ್ರಿಕ್‌ಗಳಿಂದಿಡಿದು ನಾನಾ ಫ್ಯಾಷನ್‌ವೇರ್‌ಗಳು ದೊರೆಯುತ್ತವೆ. ಇನ್ನು ಆಕ್ಸೆಸರೀಸ್ ವಿಷಯಕ್ಕೆ ಬಂದಲ್ಲಿ, ಸಿನಿಮಾಗಳಲ್ಲಿ ಟ್ರೆಂಡಿಯಾದ ಜುಮ್ಕಾಗಳಿಂದಿಡಿದು ಸ್ಕಾರ್ಫ್ ವರೆಗೂ ನಾನಾ ಡಿಸೈನ್‌ವು ಇಲ್ಲಿ ಬಂದಿರುತ್ತವೆ ಎನ್ನುತ್ತಾರೆ ಸ್ಟಾಲ್‌ವೊಂದರ ಮಾರಾಟಗಾರರು.
ಫ್ಲೀ ಮಾರ್ಕೆಟ್ ಶಾಪಿಂಗ್ ಪ್ರಿಯರಿಗೆ ಟಿಪ್ಸ್
- ಫ್ಲೀ ಮಾರ್ಕೆಟ್ ಸೀಸನ್‌ವೈಸ್ ಆದ್ದರಿಂದ ಗ್ಯಾರಂಟಿ ಇರುವುದಿಲ್ಲ.
- ಟ್ರಯಲ್ ನೋಡಲು ಅವಕಾಶವಿರುವುದಿಲ್ಲ!
- ಎಕ್ಸ್‌ಚೇಂಜ್ ಮಾಡುವ ಅವಕಾಶವೂ ಕಡಿಮೆ ಇರುತ್ತದೆ.
- ಆಯಾ ಸ್ಟಾಲ್ ಅಥವಾ ಶಾಪ್ ವಿಸಿಟಿಂಗ್ ಕಾರ್ಡ್ ಪಡೆದುಕೊಳ್ಳಿ.
- ಹೆಸರನ್ನು ನೋಂದಾಯಿಸಿದಲ್ಲಿ ವಾಟ್ಸ್‌ಆ್ಯಪ್ ಗ್ರೂಪ್ ಮೂಲಕ ಮುಂದಿನ ಫ್ಲೀ ಮಾರ್ಕೆಟ್ ಎಲ್ಲಿ ಎಂಬುದರ ವಿಷಯ ತಿಳಿದುಕೊಳ್ಳಬಹುದು.