ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shravana Shopping 2026: ಎಲ್ಲೆಡೆ ಶುರುವಾಯ್ತು ಶ್ರಾವಣದ ಶಾಪಿಂಗ್

Shravana Shopping 2026: ಎಲ್ಲೆಡೆ ಶ್ರಾವಣ ಮಾಸದ ಶಾಪಿಂಗ್ ಆರಂಭಗೊಂಡಿದೆ. ಈ ಮಾಸದಲ್ಲಿ ಹಬ್ಬ-ಹರಿದಿನಗಳನ್ನು ಆಚರಿಸುವವರು ಭರ್ಜರಿ ಶಾಪಿಂಗ್‌ ಮಾಡತೊಡಗಿದ್ದಾರೆ. ಪರಿಣಾಮ, ಎಲ್ಲೆಡೆ ಮಾರುಕಟ್ಟೆಗಳು ಕೂಡ ಜನರಿಂದ ಗಿಜಿಗುಡುತ್ತಿವೆ. ಈ ಕುರಿತಂತೆ ಇಲ್ಲಿದೆ ವರದಿ.

ಚಿತ್ರಗಳು: ಮಿಂಚು
1/5

ಎಲ್ಲೆಡೆ ಶ್ರಾವಣ ಶಾಪಿಂಗ್ ಆರಂಭಗೊಂಡಿದೆ. ಮುಂಬರುವ ದಿನಗಳಲ್ಲಿ ಹಬ್ಬ-ಹರಿದಿನಗಳನ್ನು ಆಚರಿಸುವವರು ಈಗಾಗಲೇ ಭರ್ಜರಿ ಶಾಪಿಂಗ್ ಮಾಡತೊಡಗಿದ್ದಾರೆ. ಪರಿಣಾಮ, ಎಲ್ಲೆಡೆ ಮಾರುಕಟ್ಟೆಗಳು ಕೂಡ ಜನರಿಂದ ಗಿಜಿಗುಡುತ್ತಿವೆ.

2/5

ಗಿಜಿಗುಡುತ್ತಿರುವ ಪೂಜಾಲಂಕಾರ ಸಾಮಗ್ರಿಗಳ ಶಾಪ್‌ಗಳು

ಈ ಹಬ್ಬದ ಸೀಸನ್‌ನಲ್ಲಿ ಪೂಜಾಲಂಕಾರದ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳು ಗಿಜಿಗುಡುತ್ತಿವೆ. ಪೂಜೆಯ ಅಲಂಕಾರಕ್ಕೆ ಬಳಸುವ ಕೃತಕ ಹೂ ತೋರಣಗಳು, ಮಾವಿನ ಎಲೆಗಳು, ಬಾಳೆಯ ಕಂಬಗಳು, ದೀಪಗಳು, ಕೊಡುಗೆ ನೀಡುವಂತಹ ಅತ್ಯಾಕರ್ಷಕ ವಸ್ತುಗಳು ಸೇರಿದಂತೆ ನಾನಾ ಬಗೆಯವು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ.

ಹೆಚ್ಚಾದ ವರಮಹಾಲಕ್ಷ್ಮಿ ಉತ್ಸವಮೂರ್ತಿಗಳ ಮಾರಾಟ

ವೆರೈಟಿ ಡಿಸೈನ್‌ನ ಅಲಂಕೃತ ವರಮಹಾಲಕ್ಷಿ ದೇವಿಯ ಉತ್ಸವ ಮೂರ್ತಿಗಳ ಮಾರಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಕಂಪ್ಲೀಟ್ ರೆಡಿಯಾಗಿರುವ ರೆಡಿಮೇಡ್ ಉತ್ಸವ ಮೂರ್ತಿಗಳನ್ನು ಮಹಿಳೆಯರು ಹೆಚ್ಚೆಚ್ಚು ಕೊಳ್ಳತೊಡಗಿದ್ದಾರೆ ಎನ್ನುತ್ತಾರೆ ಮಾರಾಟಗಾರರು.

3/5

ಎಥ್ನಿಕ್‌ವೇರ್ಸ್ ಶಾಪ್‌ಗಳಲ್ಲಿ ಜನಜಂಗುಳಿ

ರೇಷ್ಮೆ ಸೀರೆ, ದಾವಣಿ-ಲಂಗ, ಉದ್ದ ಲಂಗ ಹಾಗೂ ಮೆನ್ಸ್ ವೇರ್‌ಗಳಲ್ಲಿ ಪಂಚೆ-ಶಲ್ಯ, ಕುರ್ತಾ ಸೇರಿದಂತೆ ನಾನಾ ಬಗೆಯ ಎಥ್ನಿಕ್‌ವೇರ್ಸ್ ದೊರೆಯುವ ಶಾಪ್‌ಗಳಲ್ಲಿ ಜನಜಂಗುಳಿ ಹೆಚ್ಚಾಗಿದೆ. ಕೇವಲ ಹೆಂಗಸರು ಮಾತ್ರವಲ್ಲ, ಇಡೀ ಕುಟುಂಬವೇ ಸೀರೆ ಸೆಂಟರ್, ಶಾಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಾರೆ ಸೀರೆ ಮಾರಾಟಗಾರರಾದ ರಾಘವ್.

4/5

ಹೆಚ್ಚಾದ ಜ್ಯುವೆಲರಿಗಳ ಖರೀದಿ

ಶ್ರಾವಣದಲ್ಲಿ ಹಬ್ಬಗಳಿಗೆ, ಬಂಗಾರ ಖರೀದಿ ಮಾಡುವ ಮಾನಿನಿಯರ ಸಂಖ್ಯೆ ಹೆಚ್ಚಾಗಿದೆ. ಇನ್ನು, ಬಂಗಾರ ಮಾತ್ರವಲ್ಲ, ಬೆಳ್ಳಿ ಪೂಜಾ ಸಾಮಗ್ರಿಗಳ ಖರೀದಿ ಭರಾಟೆಯೂ ಸಾಗಿದೆ. ಬೆಳ್ಳಿ ತಟ್ಟೆ, ಬಟ್ಟಲು, ದೇವಿಯ ಮುಖವಾಡ, ದೀಪ, ಮಂಗಳಾರತಿ ತಟ್ಟೆ ಹೀಗೆ ನಾನಾ ಸಾಮಗ್ರಿಗಳ ಮಾರಾಟದಲ್ಲಿ ಹೆಚ್ಚಳ ಕಂಡುಬರುತ್ತಿದೆ ಎನ್ನುತ್ತಾರೆ ಮಲ್ಲೇಶ್ವರದ ಆಭರಣ ಶಾಪ್ವೊಂದರ ಮಾಲೀಕರು.

5/5

ಡೆಕೋರೇಷನ್ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿ

ಶ್ರಾವಣ ಮಾಸದಲ್ಲಿ, ಒಳ್ಳೆಯ ದಿನಗಳು ಹೆಚ್ಚಾಗಿರುವುದರಿಂದ ಎಲೆಕ್ಟ್ರಾನಿಕ್ಸ್ ಗೃಹೋಪಯೋಗಿ ವಸ್ತುಗಳನ್ನು ಖರೀದಿ ಮಾಡುವುದು ಹೆಚ್ಚಾಗಿದೆ. ಅದರಲ್ಲೂ, ಅಡುಗೆ ಮನೆಯ ಎಲೆಕ್ಟ್ರಾನಿಕ್ ಐಟಂಗಳನ್ನು ಖರೀದಿಸುವವರು ಅಧಿಕಗೊಂಡಿದ್ದಾರೆ ಎನ್ನುತ್ತಾರೆ ಮಾರಾಟಗಾರರಾದ ರಾಜ್.

ಶೀಲಾ ಸಿ ಶೆಟ್ಟಿ

View all posts by this author