ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shravana Special 2026: ಫೆಸ್ಟೀವ್‌ ಸೀಸನ್‌ನಲ್ಲಿ ಟ್ರೆಂಡಿಯಾದ ರೆಡಿಮೇಡ್‌ ವರಮಹಾಲಕ್ಷ್ಮೀಯರು

Shravana Special 2026: ಮುಂಬರುವ ವರಮಹಾಲಕ್ಷ್ಮೀ ಹಬ್ಬಕ್ಕೆ ಈಗಾಗಲೇ ನಾನಾ ಬಗೆಯ ರೆಡಿಮೇಡ್‌ ವರಮಹಾಲಕ್ಷ್ಮೀಯ ಉತ್ಸವ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಬಾರಿ ಯಾವ್ಯಾವ ಬಗೆಯವು ಬಂದಿವೆ? ಈ ಬಗ್ಗೆ ಇಲ್ಲಿದೆ ವರದಿ.

ಚಿತ್ರಕೃಪೆ: ಮಿಂಚು
1/5

ಮುಂಬರುವ ವರಮಹಾಲಕ್ಷ್ಮೀ ಹಬ್ಬಕ್ಕೆ ಈಗಾಗಲೇ ನಾನಾ ಬಗೆಯ ರೆಡಿಮೇಡ್‌ ವರಮಹಾಲಕ್ಷ್ಮೀಯ ಉತ್ಸವ ಮೂರ್ತಿಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಹೌದು, ದೇವಿಯನ್ನು ಸಿಂಗರಿಸಲು ಸಾಧ್ಯವಿಲ್ಲ ಅಥವಾ ಸಮಯವಿಲ್ಲ ಎನ್ನುವವರ ಮನೆಗೆ ಬರಲು ಈ ರೆಡಿಮೇಡ್‌ ವರಮಹಾಲಕ್ಷ್ಮೀ ಉತ್ಸವ ಮೂರ್ತಿಗಳು ರೆಡಿಯಾಗಿವೆ.

2/5

ತಾವರೆಯಲ್ಲಿ ಕುಳಿತ ವರಮಹಾಲಕ್ಷ್ಮೀ

ಅತ್ಯಾಕರ್ಷಕ ಡಿಸೈನ್‌ನ ನಾನಾ ಬಗೆಯ ವಿನ್ಯಾಸದ ಅರಳಿದ ತಾವರೆಯಲ್ಲಿ ಕುಳಿತ ಸುಂದರವಾಗಿ ಕಾಣಿಸುವ ವರಮಹಾಲಕ್ಷ್ಮೀ ಉತ್ಸವ ಮೂರ್ತಿಗಳು ಈ ಬಾರಿ ಮಿನಿ ಸೈಝಿನಿಂದಿಡದು ಆಳೆತ್ತರವದರೆಗೂ ದೊರೆಯುತ್ತಿವೆ. ಆಯಾ ಡಿಸೈನ್‌ ಹಾಗೂ ಅಲಂಕಾರಕ್ಕೆ ತಕ್ಕಂತೆ ಬೆಲೆ ನಿಗದಿಯಾಗಿದೆ ಎನ್ನುತ್ತಾರೆ ಮಾರಾಟಗಾರರು.

3/5

ಆದಿ ಲಕ್ಷ್ಮಿಯ ಅವತಾರದ ವರಮಹಾಲಕ್ಷ್ಮೀ

ಆದಿ ಶಕ್ತಿಯಂತೆ ಕಾಣಿಸುವ ನಿಂತ ವರಮಹಾಲಕ್ಷ್ಮೀ ಬೊಂಬೆಯಂತಿರುವ ಮೂರ್ತಿಗಳು ಕೂಡ ಈ ಬಾರಿ ನಾನಾ ಕಾನ್ಸೆಪ್ಸ್ಟನಲ್ಲಿ ಆಗಮಿಸಿವೆ.

ನಾನಾ ದೇವತೆಗಳ ರೂಪದ ವರಮಹಾಲಕ್ಷ್ಮೀಯರು

ಮಧುರೈ ಮೀನಾಕ್ಷಿ, ಕಂಚಿ ಕಾಮಾಕ್ಷಿ, ದಾವಣಿ-ಲಂಗ ಧರಿಸಿದ ಕನ್ಯಾ ಕುಮಾರಿಯಂತೆ ಕಾಣುವ ವರಮಹಾಲಕ್ಷ್ಮೀ ಉತ್ಸವ ಮೂರ್ತಿಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯ.

4/5

ಹೋಮ್ ಡೆಲಿವರಿ ಸೌಲಭ್ಯ ಲಭ್ಯ

ಆಯಾ ವರಮಹಾಲಕ್ಷ್ಮೀ ದೇವಿಯ ಸೈಝ್‌ ಹಾಗೂ ಅಲಂಕಾರಕ್ಕೆ ತಕ್ಕಂತೆ ಬೆಲೆ ನಿಗದಿಯಾಗಿರುತ್ತದೆ. ಚಿಕ್ಕ ಉತ್ಸವಮೂರ್ತಿ ಕಡಿಮೆಯೆಂದರೂ 1 ಸಾವಿರ ರೂ.ಗಳ ಬೆಲೆ ಇರುತ್ತದೆ. ಎತ್ತರ ಹಾಗೂ ಡೆಕೋರೇಷನ್‌ ಆಧಾರದ ಮೇಲೆ ಬೆಲೆ ನಿಗಧಿಯಾಗಿರುತ್ತದೆ. ಗರಿಷ್ಠ ಎಂದರೂ 30-40 ಸಾವಿರ ರೂ.ಗಳ ಬೆಲೆಯಿದೆ ಎನ್ನುತ್ತಾರೆ ಗಾಂಧಿ ಬಜಾರ್‌ ಶಾಪ್‌ವೊಂದರ ಮಾರಾಟಗಾರರು. ಅಲ್ಲದೇ ಗ್ರಾಹಕರಿಗೆ ಇವುಗಳ ಉಚಿತ ಹೋಮ್‌ ಡಿಲಿವಿರಿ ಸೌಲಭ್ಯ ಕೂಡ ನೀಡಲಾಗುತ್ತಿದೆ ಎನ್ನುತ್ತಾರೆ ಅವರು.

5/5

ರೆಡಿಮೇಡ್‌ ವರಮಹಾಲಕ್ಷ್ಮೀ ಖರೀದಿಸುವವರಿಗೆ ಟಿಪ್ಸ್

  • ಇವನ್ನು ಹಬ್ಬದ ನಂತರ ಮರಳಿ ತೆಗೆದು ಮತ್ತೇ ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
  • ಆದಷ್ಟೂ ಗುಣಮಟ್ಟದ ಅಲಂಕಾರಿಕ ಸಾಮಗ್ರಿ ಬಳಸಿದಂತಹ ಉತ್ಸವಮೂರ್ತಿ ಖರೀದಿಸಿ.
  • ಬಾಳಿಕೆ ಕುರಿತಂತೆ ಗೊತ್ತಿರಲಿ.

ಶೀಲಾ ಸಿ ಶೆಟ್ಟಿ

View all posts by this author