ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Silk Saree Tips 2026: ಗ್ರ್ಯಾಂಡ್ ಸಿಲ್ಕ್ ಸೀರೆಗಳ ಸುರಕ್ಷತೆಗೆ ಇಲ್ಲಿವೆ 7 ಸಿಂಪಲ್ ಐಡಿಯಾ

ನಿಮ್ಮ ಬಳಿಯಿರುವ ಗ್ರ್ಯಾಂಡ್ ರೇಷ್ಮೆ ಸೀರೆಗಳನ್ನು ನೀವು ಕೊಳ್ಳುವುದಷ್ಟೇ ಅಲ್ಲ, ಅವುಗಳ ಸೂಕ್ತ ನಿರ್ವಹಣೆ ಕೂಡ ಮಾಡಬೇಕು. ಗ್ರ್ಯಾಂಡ್ ರೇಷ್ಮೆ ಸೀರೆಗಳನ್ನು ಕಾಪಾಡಿಕೊಳ್ಳಲು ಹಾಳಾಗದಂತೆ ಸುರಕ್ಷತೆಯಿಂದಿಡಿದಲು ಒಂದಿಷ್ಟು ಟಿಪ್ಸ್ ಫಾಲೋ ಮಾಡಿ ಎನ್ನುತ್ತಿದ್ದಾರೆ ಸೀರೆ ಸ್ಪೆಷಲಿಸ್ಟ್‌ಗಳು. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್
1/5

ಗ್ರ್ಯಾಂಡ್ ರೇಷ್ಮೆ ಸೀರೆಗಳನ್ನು ನೀವು ಕೊಳ್ಳುವುದಷ್ಟೇ ಅಲ್ಲ, ಅವುಗಳ ಸೂಕ್ತ ನಿರ್ವಹಣೆ ಕೂಡ ಮಾಡಬೇಕು. ಇಲ್ಲವಾದಲ್ಲಿ ಅವು ಮಾಸಬಹುದು. ಹಾಗಾಗಿ ಇವುಗಳನ್ನು ಸೂಕ್ತ ರೀತಿಯಲ್ಲಿ ಕಾಪಾಡಿಕೊಳ್ಳುವುದು ಅಗತ್ಯ ಎನ್ನುತ್ತಾರೆ ಸ್ಟೈಲಿಸ್ಟ್ ಜಯಾ.

ಸಿಲ್ಕ್ ಸೀರೆ ತೆಗೆದಿಡುವ ಮುನ್ನ ಹರಡಿ ಒಣಗಿಸಿ

ಯಾವುದೇ ರೇಷ್ಮೇ ಸೀರೆಯನ್ನು ಉಟ್ಟ ನಂತರ, ಬೆವರಿನ ವಾಸನೆ ಹೋಗಲಾಡಿಸಲು ನೆರಳಿನಲ್ಲಿ ಒಣಗಿಸಿ. ನಂತರ ಮಡಿಚಿಡಿ. ಎರಡು ತಿಂಗಳಿಗೊಮ್ಮೆ ವಾರ್ಡ್ರೋಬ್‌ನಲ್ಲಿರುವ ರೇಷ್ಮೆ ಸೀರೆಗಳನ್ನು ತೆಗೆದು ಕೆಲ ಹೊತ್ತು ಬಿಸಿಲಿನಲ್ಲಿ ಒಣಗಿಸಿಡಿ. ಸೀರೆಯು ಗಾಳಿಯಲ್ಲಿ ಹಾಗೂ ತಿಳಿ ಬಿಸಿಲಲ್ಲಿಒಣಗಿದಾಗ ವಾಸನೆ ಬರುವುದಿಲ್ಲ. ಮತ್ತೆ ಮಡಿಚಿಡಿ.

2/5

ಸೀರೆಯಲ್ಲಿ ಗೆರೆ ಮೂಡದಿರಲು ಹೀಗೆ ಮಾಡಿ

ಬೀರುವಿನಲ್ಲಿ ಬಹಳ ಕಾಲ ಮಡಿಚಿಟ್ಟ ಸೀರೆಗಳಲ್ಲಿ ಗೆರೆ ಮೂಡಿ ಹರಿದು ಹೋಗುವ ಸಂಭವವಿರುತ್ತದೆ. ಹಾಗಾಗಿ ಕಬ್ಬಿಣದ ಹ್ಯಾಂಗರ್‌ನಲ್ಲಿ ಹಾಕಿಡಬೇಡಿ. ಸೂಟ್ಕೇಸ್ ಹಾಗೂ ಪೆಟ್ಟಿಗೆಯಲ್ಲಿರಿಸಬೇಡಿ. ಬದಲಿಗೆ ಕಬೋರ್ಡ್‌ನಲ್ಲಿ ಕಾಟನ್‌ ಬಟ್ಟೆಯನ್ನು ಹಾಸಿ ಅದರ ಮೇಲೆ ಇರಿಸಿ.

ಕಾಟನ್ ಬಟ್ಟೆ ಅಥವಾ ಕೈಚೀಲದಲ್ಲಿ ಸುತ್ತಿಡಿ

ರೇಷ್ಮೆ ಸೀರೆಯ ಬಾರ್ಡರ್ ಬೆಲೆಬಾಳುವಂತಾದ್ದಾಗಿರುತ್ತದೆ. ಅಗಲವಾದ ಬಾರ್ಡರ್ಗಳಿರುವ ಸೀರೆಗಳನ್ನು ಒಂದು ತೆಳುವಾದ ಬಟ್ಟೆಯಲ್ಲಿ ಅಥವಾ ಅದಕ್ಕೆಂದೇ ದೊರಕುವ ಕೈ ಚೀಲದಲ್ಲಿ ಸುತ್ತಿಡಬೇಕು. ಧೂಳು ಬೀಳದಿರುವಂತಹ ಸ್ಥಳದಲ್ಲಿಟ್ಟರೆ ಸೀರೆಗಳ ಬಾರ್ಡರ್ ಹಾಳಾಗುವುದಿಲ್ಲ. ರೇಷ್ಮೆ ಸೀರೆಗಳನ್ನು ಎಂದಿಗೂ ಪ್ಲಾಸ್ಟಿಕ್ ಕವರ್‌ಗಳಲ್ಲಿಡಬೇಡಿ. ಇವುಗಳನ್ನು ಇರಿಸಲು ಪೇಪರ್‌ ಕವರ್‌ಗಳು ದೊರೆಯುತ್ತವೆ. ಅದರಲ್ಲಿರಿಡಿ.

3/5

ಸೀರೆಯೊಳಗೆ ಗುಳಿಗೆ ಇರಿಸಬೇಡಿ

ರೇಷ್ಮೆ ಸೀರೆಗಳನ್ನು ವಾರ್ಡ್ರೋಬ್‌ನಲ್ಲಿ ಮಡಿಚಿಡುವಾಗ ಜಿರಳೆ, ಇತರ ಕ್ರಿಮಿ ಕೀಟಗಳು ಬರದಂತೆ ನೋಡಿಕೊಳ್ಳಿ. ಸೀರೆಗಳನ್ನು ಜಿರಳೆಗಳಿಂದ ಕಾಪಾಡುವ ನುಸಿ ಗುಳಿಗೆಗಳನ್ನು ಸೀರೆಯೊಳಗೆ ಇರಿಸಬೇಡಿ. ಕಲೆಯಾಗುವ ಸಂಭವವಿರುತ್ತದೆ. ಬದಲಿಗೆ ಸೀರೆಗೆ ತಾಗದಂತೆ ಮೂಲೆಯಲ್ಲಿರಿಸಿ.

4/5

ಮನೆಯಲ್ಲಿ ಒಗೆಯಬೇಡಿ

ಯಾವುದೇ ಕಾರಣಕ್ಕೂ ಬೆಲೆಬಾಳುವ ರೇಷ್ಮೆ ಸೀರೆಗಳನ್ನು ಮನೆಯಲ್ಲಿ ಒಗೆಯಬೇಡಿ. ಬದಲಿಗೆ ಡ್ರೈವಾಷ್‌ಗೆ ನೀಡಿ. ಅಗತ್ಯವಿದ್ದರೆ ಮಾತ್ರ ವಾಷ್‌ ಮಾಡಿಸುವುದು ಉತ್ತಮ. ಇಲ್ಲವಾದಲ್ಲಿ ಸೀರೆಯ ರಂಗು ಮಸುಕಾಗಬಹುದು. ಹಳೆ ಸೀರೆಯಂತೆ ಕಾಣಬಹುದು.

5/5

ಐರನ್ ಮಾಡುವಾಗ ಎಚ್ಚರ

ಇನ್ನು ಸೀರೆಯ ಬಾರ್ಡರ್‌ಗೆ ಐರನ್‌ ಮಾಡುವಾಗ, ನೇರವಾಗಿ ಸೀರೆಯ ಮೇಲೆ ಮಾಡದೇ ಒಂದು ಪೇಪರ್‌ ಅನ್ನು ಮೇಲೆ ಹಾಕಿ ಮಾಡಬೇಕು. ಶಾಖ ಹೆಚ್ಚಾಗಕೂಡದು. ಬಾರ್ಡರ್‌ ಕಪ್ಪಾಗಬಹುದು. ಜಾಗ್ರತೆಯಿಂದ ಪ್ರೆಸ್‌ ಮಾಡಿ ಇರಿಸಿ.

ಸಿಲ್ಕ್ ಸೀರೆಗೆ ಫಾಲ್ ಹಾಕಿಸಿ

ರೇಷ್ಮೆ ಸೀರೆಗಳ ಬಾರ್ಡರ್ ಮಡಿಸಿ ಹೋಗದಂತೆ ಮಾಡಲು ಸೀರೆಗಳಿಗೆ ಫಾಲ್‌ ಹಾಕಿಸುವುದು ಉತ್ತಮ. ಪಾಲಿಸ್ಟರ್ ಫಾಲ್‌ ಬಳಸುವುದು ಉತ್ತಮ. ಆಗ ಬಾರ್ಡರ್‌ ಸುಕ್ಕಾಗುವುದಿಲ್ಲ.

ಶೀಲಾ ಸಿ ಶೆಟ್ಟಿ

View all posts by this author