ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Star Cannes Fashion: ಕಾನ್ಸ್‌ನಲ್ಲಿ ರೇಷ್ಮೆ ಸೀರೆಯಲ್ಲಿ ಮಿಂಚಿದ ಕನ್ನಡತಿ ದಿಶಾ ಮದನ್‌

Star Cannes Fashion: ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ನಟಿ, ಕನ್ನಡತಿ ದಿಶಾ ಮದನ್‌, 70 ವರ್ಷದ ಹಳೆಯ ವಿಂಟೇಜ್‌ ಲುಕ್‌ ನೀಡುವ ರೇಷ್ಮೆ ಸೀರೆಯಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿಂದಲೇ ಕನ್ನಡಿಗರಿಗೆ ಮನಪೂರ್ವಕ ಧನ್ಯವಾದ ಹೇಳಿದ್ದಾರೆ. ಅವರ ಕಾನ್ಸ್‌ ಲುಕ್‌ ಬಗ್ಗೆ ಇಲ್ಲಿದೆ ಡಿಟೇಲ್ಸ್.‌

ಚಿತ್ರಗಳು: ದಿಶಾ ಮದನ್‌, ನಟಿ ಮತ್ತು ಮಾಡೆಲ್‌
1/5

ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ನಟಿ & ಫ್ಯಾಷನ್‌ ಇನ್‌ಫ್ಲೂಯೆನ್ಸರ್‌ ದಿಶಾ ಮದನ್‌ ವಿಂಟೇಜ್‌ ಸೀರೆಯಲ್ಲಿ ಮಿಂಚಿದ್ದಾರೆ. ದಿಶಾ ಈಗಾಗಲೇ ಮೂರ್ನಾಲ್ಕು ಬಗೆಯ ಸೀರೆಗಳಲ್ಲಿ ಕಾಣಿಸಿಕೊಂಡಿದ್ದು, ರೆಡ್‌ ಕಾರ್ಪೆಟ್‌ ಮೇಲೆ ಹಳೆಯ ವಿಂಟೇಜ್‌ ರೇಷ್ಮೆ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀರೆಗೆ ಡಿಸೈನರ್‌ ಕಾರ್ಸೆಟ್‌ ಬ್ಲೌಸ್‌ ಮ್ಯಾಚ್‌ ಮಾಡಿ, ಹೆಜ್ಜೆ ಹಾಕಿದ್ದಾರೆ.

2/5

ಸೀರೆಗಳಲ್ಲಿ ದಿಶಾ ಮಿಂಚಿಂಗ್‌

ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಭಾಗವಹಿಸುವ ಸೆಲೆಬ್ರೆಟಿಗಳೆಲ್ಲರೂ ತಮ್ಮದೇ ಆದ ಹೊಸ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ, ಇದಕ್ಕೆ ತದ್ವಿರುದ್ಧವೆಂಬಂತೆ ದಿಶಾ ಮಾತ್ರ, ಎಲ್ಲಾ ಸಮಯದಲ್ಲೂ ಸೀರೆ ಹಾಗೂ ಸೀರೆಯಿಂದ ಸಿದ್ಧಪಡಿಸಿದ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

3/5

ರೆಡ್‌ ಕಾರ್ಪೆಟ್‌ಗೆ ವಿಂಟೇಜ್‌ ಸೀರೆ

ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನ ರೆಡ್‌ ಕಾರ್ಪೆಟ್‌ನಲ್ಲಿ, ದಿಶಾ ಮದನ್‌, ವಿಶೇಷವಾಗಿ ಕಾಣಿಸಿಕೊಂಡಿದ್ದು, ಸುಮಾರು 70 ವರ್ಷದ ಹಳೆಯ ವಿಂಟೇಜ್‌ ಲುಕ್‌ ನೀಡುವ, ರೇಷ್ಮೆ ಸೀರೆಯಲ್ಲಿ ಸಂಭ್ರಮಿಸಿದ್ದಾರೆ. ಈ ಸೀರೆಯೊಂದಿಗೆ ಅದೇ ಕಾಂಬಿನೇಷನ್‌ಗೆ ಮ್ಯಾಚ್‌ ಆಗುವಂತಹ ಡಿಸೈನರ್‌ ಕಾರ್ಸೆಟ್‌ ಧರಿಸಿದ್ದಾರೆ. ಸೀರೆಯನ್ನು ಇಂಡೋ-ವೆಸ್ಟರ್ನ್‌ ಲುಕ್‌ನಲ್ಲಿ ಪ್ರೆಸೆಂಟ್‌ ಮಾಡಿದ್ದಾರೆ. ಹಣೆಗೊಂದು ಚಿಕ್ಕ ಬಿಂದಿಯನ್ನು ಇಟ್ಟು ಹರ್ಷಿಸಿದ್ದಾರೆ. ಅಷ್ಟೇಕೆ? ಅಲ್ಲಿಂದಲೇ ಕನ್ನಡಿಗರಿಗೆ ಮನಪೂರ್ವಕ ಧನ್ಯವಾದ ತಿಳಿಸಿದ್ದಾರೆ. ಕಾನ್ಸ್‌ನಲ್ಲಿ ಗೌನ್‌ಗಳನ್ನು ಧರಿಸುವವರು ಹೆಚ್ಚು, ಆದರೆ, ನಾನು ನಮ್ಮ ದೇಶದ ಸಂಸ್ಕೃತಿ ಬಿಂಬಿಸುವ ಸೀರೆಯುಟ್ಟಿದ್ದೇನೆ. ಡಿಸೈನರ್‌ಗಳಾದ ಅನ್ಮೋಲ್‌ & ಬಿಂದು ಸಹಕಾರ ಇದಕ್ಕಿದೆ ಎಂದು ಮಾಧ್ಯಮದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

4/5

ದಿಶಾ ರೇಷ್ಮೆ ಸೀರೆ ಪ್ರೇಮ

ಲಕ್ಷ್ಮಿ ನಿವಾಸ ಧಾರವಾಹಿಯಲ್ಲಿ ನಟಿಸುತ್ತಿರುವ ದಿಶಾ ಫ್ಯಾಷನ್‌ ಇನ್‌ಫ್ಲೂಯೆನ್ಸರ್‌ ಕೂಡ. ಮೊದಲಿನಿಂದಲೂ ಅವರಿಗೆ ಸೀರೆಗಳೆಂದರೇ ಪ್ರೀತಿಯಂತೆ. ಇದಕ್ಕೆ ಪೂರಕ ಎಂಬಂತೆ, ಈಗಾಗಲೇ ಸೀರೆ ಮಾಹಿತಿ ಕುರಿತಂತೆ ಸಾಕಷ್ಟು ವಿಡಿಯೋಗಳನ್ನು ಮಾಡಿದ್ದಾರೆ.

5/5

ಕಾನ್ಸ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ನಟಿ, ಕನ್ನಡತಿ ದಿಶಾ ಮದನ್‌, 70 ವರ್ಷದ ಹಳೆಯ ವಿಂಟೇಜ್‌ ಲುಕ್‌ ನೀಡುವ ರೇಷ್ಮೆ ಸೀರೆಯಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.

ಶೀಲಾ ಸಿ ಶೆಟ್ಟಿ

View all posts by this author