Star Fashion 2025: ಕ್ಲಾಸಿ ಸೂಟ್‌ನಲ್ಲಿ ನಟ ಜಗನ್ ಮಾನ್ಸೂನ್ ಫ್ಯಾಷನ್
Star Fashion 2025: ಮಾನ್ಸೂನ್ ಸೀಸನ್‌ನಲ್ಲಿ ಕಿರುತೆರೆ ನಟ ಜಗನ್ನಾಥ್ ಅಲಿಯಾಸ್ ಜಗನ್ ಬೋಲ್ಡ್ ಬರ್ನ್ಟ್ ಆರೆಂಜ್ ಸೂಟ್‌ನಲ್ಲಿ ಕ್ಲಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಫ್ಯಾಷನೆಬಲ್ ಮೆನ್ಸ್ ಲುಕ್‌ಗೆ ಸೈ ಎಂದಿದ್ದಾರೆ. ಹೇಗಿದೆ ಅವರ ಈ ಲುಕ್? ಯುವಕರು ಇವರಂತೆ ಕಾಣಿಸಿಕೊಳ್ಳಲು ಸ್ಟೈಲಿಂಗ್ ಹೇಗೆ ಮಾಡಬೇಕು? ಎಂಬುದರ ಬಗ್ಗೆ ಫ್ಯಾಷನ್ ವಿಮರ್ಶಕರು ವಿವರಿಸಿದ್ದಾರೆ.
ನಟ ಜಗನ್ ಬೋಲ್ಡ್ ಬರ್ನ್ಟ್ ಆರೆಂಜ್ ಶೇಡ್‌ನ ಸೂಟ್‌ನಲ್ಲಿ ಕ್ಲಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಮಾನ್ಸೂನ್ ಸೀಸನ್‌ನಲ್ಲಿ ಲೇಯರ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ನಟ ಜಗನ್, ಈ ಫ್ಯಾಷನ್ ಶೂಟ್‌ನಲ್ಲಿ ಕೊಂಚ ಬೋಲ್ಡ್ ಆಗಿರುವ ಬರ್ನ್ಟ್ ಆರೆಂಜ್ ಕಲರ್‌ನ ಸೂಟ್‌ಗೆ ಸೈ ಎಂದಿದ್ದಾರೆ. ಮೆನ್ಸ್ ಫಾರ್ಮಲ್ ಲುಕ್‌ಗೆ ಓಕೆ ಎಂದಿದ್ದಾರೆ.
ಜಗನ್ ಫ್ಯಾಷನ್ & ಫಿಟ್ನೆಸ್ ಫೋಟೋಶೂಟ್ಸ್
ಅಂದಹಾಗೆ, ನಟ ಜಗನ್ ಅವರು ಸಾಕಷ್ಟು ಸೀರಿಯಲ್‌ಗಳಲ್ಲಿ ನಟಿಸಿದ್ದು, ತಮ್ಮದೇ ಆದ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ ಹೊಂದಿದ್ದಾರೆ. ಇನ್ನು ಅವರ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಆಗಾಗ್ಗೆ ತಮ್ಮ ಫಿಟ್ನೆಸ್ ಹಾಗೂ ಲೈಫ್‌ಸ್ಟೈಲ್ ಕುರಿತ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಕೆಲವಂತೂ ಅವರ ಬಾಡಿ ಫಿಟ್ನೆಸ್ ಫೋಟೋಗಳಂತೂ ಮೆನ್ಸ್ ಫಿಟ್ನೆಸ್ ಕುರಿತಂತೆ ಸಾಕಷ್ಟು ಅಭಿಮಾನಿಗಳನ್ನು ಸೆಳೆದಿತ್ತು.
ಜಗನ್ ಧರಿಸಿರುವ ಸೂಟ್
ಇನ್ನು, ನಟ ಜಗನ್ ಧರಿಸಿರುವ ಈ ಸೂಟ್ ಬಿಸ್ನೆಸ್ ಮೆನ್‌ಗಳಿಗೆ ಮಾತ್ರವಲ್ಲ, ಫಾರ್ಮಲ್ ಲುಕ್ ಬಯಸುವ ಪುರುಷರು ಕೂಡ ಧರಿಸಬಹುದು. ಜಗನ್ ಅವರ ಈ ಮಾನೋ ಕಾಲರ್, ಬ್ಯಾಗ್ ಪಾಕೆಟ್ ಸ್ಲಿಮ್ ಫಿಟ್ ಸೂಟ್ ತನ್ನ ಕಲರ್‌ನಿಂದಲೇ ಎಲ್ಲರನ್ನೂ ಸೆಳೆದಿದೆ. ಇನ್ನು ಇದಕ್ಕೆ ಕಾಂಬಿನೇಷನ್ ಮಾಡಿರುವ ಇನ್ನರ್ ಬ್ಲ್ಯಾಕ್ ಶರ್ಟ್ ಅವರ ಲುಕ್ ಅನ್ನು ಮತ್ತಷ್ಟು ಆಕರ್ಷಕವಾಗಿಸಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಬಿಸ್‌ನೆಸ್ ಕ್ಯಾಶುವಲ್ ಲುಕ್‌ಗೂ ಸೈ
ಇನ್ನು ಕಾರ್ಪೋರೇಟ್ ಕ್ಷೇತ್ರದ ಯುವಕರಿಗೆ ಮಾತ್ರವಲ್ಲ, ಬಿಸ್‌ನೆಸ್ ಕ್ಷೇತ್ರದವರೂ ಕೂಡ ಕ್ಯಾಶುವಲ್ ಆಗಿಯೂ ಇತ್ತೀಚೆಗೆ ಈ ಸೂಟ್‌ಗಳನ್ನು ಧರಿಸುವುದು ಕಾಮನ್ ಆಗುತ್ತಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ಜಗನ್ ಅವರಂತೆ ಕ್ಲಾಸಿ ಲುಕ್ ಪಡೆಯುವವರಿಗಾಗಿ ಟಿಪ್ಸ್
- ಆದಷ್ಟೂ ಬಾಡಿ ಮಾಸ್ ಇಂಡೆಕ್ಸ್‌ಗೆ ತಕ್ಕಂತೆ ಸೂಟ್ ಆಯ್ಕೆ ಮಾಡಿ.
- ಪರ್ಸನಾಲಿಟಿಗೆ ವಿನ್ಯಾಸ ಹೊಂದುವುದು ಅಗತ್ಯ.
- ಶೇಡ್ ಕೂಡ ಇಲ್ಲಿ ಮುಖ್ಯವಾಗುತ್ತದೆ.