ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಲೆಹೆಂಗಾಗೆ ಶೂ ಧರಿಸಿ ಸ್ಟೈಲಿಂಗ್‌ ರೂಲ್ಸ್ ಬ್ರೇಕ್‌ ಮಾಡಿದ ಕೀರ್ತಿ ಸುರೇಶ್‌

ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್‌ ಇಂಡೋ-ವೆಸ್ಟರ್ನ್‌ ಲೆಹೆಂಗಾಗೆ ಶೂ ಧರಿಸಿ (ಸ್ನೀಕರ್‌) ಟ್ರೆಡಿಷನಲ್‌ ರೂಲ್ಸ್ ಬ್ರೇಕ್‌ ಮಾಡಿದ್ದಾರೆ. ತಮ್ಮದೇ ಆದ ನಯಾ ಸ್ಟೈಲಿಂಗ್‌ ಕಾನ್ಸೆಪ್ಟ್ ಪರಿಚಯಿಸಿದ್ದಾರೆ. ಈ ಬಗ್ಗೆ ಫ್ಯಾಷನ್‌ ವಿಮರ್ಶಕರ ರಿವ್ಯೂ ಏನು? ಇಲ್ಲಿದೆ ಡಿಟೇಲ್ಸ್.

ಬಹುಭಾಷಾ ನಟಿ ಕೀರ್ತಿ ಸುರೇಶ್‌, ಚಿತ್ರಕೃಪೆ: ಫೋಟೋ ಬೈ ಮಾರನ್‌
1/5

ಲೆಹೆಂಗಾಗೆ ಶೂ ಧರಿಸಿ ಸ್ಟೈಲಿಂಗ್‌ ರೂಲ್ಸ್ ಬ್ರೇಕ್‌ ಮಾಡಿದ್ದಾರೆ ನಟಿ ಕೀರ್ತಿ ಸುರೇಶ್‌. ಅರರೆ., ಇದೇನಿದು? ಇದ್ಯಾವ ಬಗೆಯ ಸ್ಟೈಲಿಂಗ್‌ ಎಂದು ಯೋಚಿಸುತ್ತಿದ್ದೀರಾ! ಇದೊಂಥರ ಇಂಡೋ-ವೆಸ್ಟರ್ನ್‌ ಮಿಕ್ಸ್ -ಮ್ಯಾಚ್‌ ಲೆಹೆಂಗಾ ಸ್ಟೈಲಿಂಗ್‌! ಹೌದು, ಕೀರ್ತಿ ಸುರೇಶ್‌ ಟ್ರೆಡಿಷನಲ್‌ ಸ್ಟೈಲಿಂಗ್‌ಗೆ ಇತಿ ಶ್ರೀ ಹಾಡಿ, ಲೆಹೆಂಗಾವನ್ನು ಹೊಸ ಲುಕ್‌ನಲ್ಲಿ ಪ್ರೆಸೆಂಟ್‌ ಮಾಡಿದ್ದಾರೆ.

2/5

ಕೀರ್ತಿ ಫ್ಯಾಷನ್‌ ಲುಕ್‌

ಫ್ಯಾಷನ್‌ ವಿಮರ್ಶಕರ ಪ್ರಕಾರ, ಇನ್ನು, ಸಂಕ್ರಾಂತಿ ಸೀಸನ್ ಬಂದಿಲ್ಲ! ಆಗಲೇ ಕೀರ್ತಿ ಸುರೇಶ್‌ ಈ ಸೀಸನ್‌ಗೆ ಧರಿಸಬಹುದಾದ ಫ್ಯಾಷನ್‌ ಲುಕ್‌ ಬಿಡುಗಡೆಗೊಳಿಸಿದ್ದಾರೆ. ನಿಕೋ ಬ್ರಾಂಡ್‌ನ ಲೆಹೆಂಗಾದಲ್ಲಿ ಫ್ಯಾಷನ್‌ ಫೋಟೋಶೂಟ್‌ ಮಾಡಿಸಿದ್ದಾರೆ.

3/5

ಕೀರ್ತಿ ಸುರೇಶ್‌ ಇಂಡೋ-ವೆಸ್ಟರ್ನ್‌ ಲೆಹೆಂಗಾ

ಅಂದಹಾಗೆ, ಕೀರ್ತಿ ಧರಿಸಿರುವ ಯೆಲ್ಲೋ ಲಾಂಗ್‌ ಸ್ಕರ್ಟ್ ಲೆಹೆಂಗಾ ತೀರಾ ಟ್ರೆಡಿಷನಲ್‌ ಡಿಸೈನ್‌ ಹೊಂದಿಲ್ಲ. ಬ್ಲೌಸ್‌ ಕೂಡ ಥೇಟ್‌ ಕ್ರಾಪ್‌ ಟಾಪ್‌ನಂತಿದೆ. ಅಲ್ಲದೇ ಚೆಕ್ಸ್ ಪ್ರಿಂಟ್ಸ್‌ನಲ್ಲಿದೆ. ಇದು ಡಿಫರೆಂಟ್‌ ಲುಕ್‌ ನೀಡಿದೆ. ಇದರೊಂದಿಗೆ ಬ್ಲೌಸ್‌ನ ಡೋರಿಗಳು ಹಾಗೂ ಸಾಥ್‌ ನೀಡಿರುವ ಹಸಿರು ದುಪಟ್ಟಾ ಸೇರಿದಂತೆ ಎಲ್ಲವೂ ಮನಮೋಹಕವಾಗಿದೆ ಎನ್ನುತ್ತಾರೆ ಫ್ಯಾಷನ್‌ ಎಕ್ಸ್‌ಪರ್ಟ್ಸ್.

4/5

ಲೆಹೆಂಗಾಗೆ ಸ್ನೀಕರ್‌ ಧರಿಸಿದ ಕೀರ್ತಿ ಸುರೇಶ್‌

ಎಲ್ಲದಕ್ಕಿಂತ ಹೆಚ್ಚಾಗಿ ಸ್ಯಾಂಡಲ್‌ಗಳ ಬದಲಾಗಿ ಸ್ನೀಕರ್‌ ಧರಿಸಿರುವುದು ಇಡೀ ಲೆಹೆಂಗಾ ಲುಕ್‌ ಅನ್ನು ಬದಲಿಸಿದೆ. ಬಿಂದಾಸ್‌ ಲೇಡಿ ಲುಕ್‌ ನೀಡಿದೆ. ಮೃನಾಲಿನಿ, ಅಂಕಿತಾ, ಅಚ್ಚಾ ಮೆಹ್ತಾರ ಸ್ಟೈಲಿಂಗ್‌ ಕೀರ್ತಿಯವರನ್ನು ಸುಂದರವಾಗಿ ಬಿಂಬಿಸಿದೆ. ಒಟ್ಟಾರೆ, ಮುಂಬರುವ ಸಂಕ್ರಾಂತಿ ಫೆಸ್ಟೀವ್‌ ಸೀಸನ್‌ಗೆ ಯುವತಿಯರು ಈ ರೀತಿಯ ಸ್ಟೈಲಿಂಗ್‌ ಮಾಡಬಹುದು ಎಂಬುದನ್ನು ಉದಾಹರಣೆಯಾಗಿಸಲಾಗಿದೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರಾದ ರಾಜ್‌.

5/5

ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಪಾತ್ರಗಳ ಮೂಲಕ ಹೆಸರುವಾಸಿಯಾದ ಕೀರ್ತಿ ಸುರೇಶ್ ಅವರು, ಯುನಿಸೆಫ್ ಇಂಡಿಯಾದ ಸೆಲೆಬ್ರಿಟಿ ಅಡ್ವೊಕೇಟ್ ಆಗಿ ಇತ್ತೀಚೆಗೆ ನೇಮಕವಾಗಿದ್ದರು. ನಟಿಯು ದುರ್ಬಲ ಮಕ್ಕಳಿಗಾಗಿ ಯುನಿಸೆಫ್‌ನ ಪ್ರಯತ್ನಗಳನ್ನು ಬೆಂಬಲಿಸುವ ವಿಶೇಷ ಗುಂಪಿನ ಭಾಗವಾಗಿದ್ದಾರೆ.

ಶೀಲಾ ಸಿ ಶೆಟ್ಟಿ

View all posts by this author