ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಗ್ಲಾಮರಸ್‌ ಕಾರ್ಸೆಟ್‌ ಗೌನ್‌ನಲ್ಲಿ ನಟಿ ರಾಶಿ ಖನ್ನಾ

Actress Raashi Khanna: ಬಾಲಿವುಡ್‌ ನಟಿ ರಾಶಿ ಖನ್ನಾ ಬಾಡಿಕಾನ್‌ ಕಾರ್ಸೆಟ್‌ ಡ್ರೇಪ್ಡ್‌ ಗೌನ್‌ನಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಕ್ಲೀವೆಜ್‌ ಕಾಣಿಸುವಂತಹ ಡೀಪ್‌ ಡಿಸೈನ್‌ನ ಬಾಡಿಕಾನ್‌ ಕಾರ್ಸೆಟ್‌ ಡ್ರೇಪ್ಡ್‌ ಗೌನ್‌ನಲ್ಲಿ ರಾಶಿ ಖನ್ನಾ ಕಾಣಿಸಿಕೊಂಡಿದ್ದು, ಫ್ಯಾಷನ್‌ ಪ್ರಿಯರ ಹುಬ್ಬೇರಿದೆ.‌ ಇದ್ಯಾವ ಬಗೆಯ ಡಿಸೈನರ್‌ವೇರ್‌? ವಿಶೇಷತೆಯೇನು? ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ರಾಶಿ ಖನ್ನಾ, ನಟಿ, ಫೋಟೋಗ್ರಾಫಿ: ಪಿಕ್ಸೆಲ್‌ ಎಕ್ಸ್ಪೊಷರ್ಸ್
1/5

ಗ್ಲಾಮರಸ್‌ ಕಾರ್ಸೆಟ್‌ ಗೌನ್‌ನಲ್ಲಿ ಬಾಲಿವುಡ್‌ ನಟಿ ರಾಶಿ ಖನ್ನಾ ಕಾಣಿಸಿಕೊಂಡಿದ್ದಾರೆ. ಹೌದು, ಕ್ಲೀವೆಜ್‌ ಕಾಣಿಸುವಂತಹ ಡೀಪ್‌ ಡಿಸೈನ್‌ನ ಬಾಡಿಕಾನ್‌ ಕಾರ್ಸೆಟ್‌ ಡ್ರೇಪ್ಡ್‌ ಗೌನ್‌ನಲ್ಲಿ ರಾಶಿ ಖನ್ನಾ ಕಾಣಿಸಿಕೊಂಡಿದ್ದು, ಫ್ಯಾಷನ್‌ ಪ್ರಿಯರ ಹುಬ್ಬೇರಿದೆ.

2/5

ಏನಿದು ಕಾರ್ಸೆಟ್ ಡ್ರೇಪ್ಡ್ ಗೌನ್‌?

ಸಿಂಪಲ್ಲಾಗಿ ಹೇಳುವುದಾದರೇ ಕಾರ್ಸೆಟ್‌ ಮೈಗೆ ಅಂಟಿಕೊಂಡಂತಿರುವ ಬಾಡಿಕಾನ್‌ ಶೋಲ್ಡರ್‌ಲೆಸ್‌ ಟಾಪ್‌ ಎನ್ನಬಹುದು. ಇದಕ್ಕೆ ಯಾವುದೇ ಸ್ಲೀವ್‌ ವಿನ್ಯಾಸ ಇರುವುದಿಲ್ಲ, ಶೋಲ್ಡರ್‌ ಡಿಸೈನ್‌ ಕೂಡ ಇರುವುದಿಲ್ಲ. ಬಾಡಿಫಿಟ್‌ ಆಗಿರುತ್ತದೆ. ಈ ಕಾರ್ಸೆಟನ್ನು ಯಾವುದೇ ಉಡುಪಿಗಾದರೂ ಧರಿಸಬಹುದು. ಹೆಚ್ಚಾಗಿ ಇದನ್ನು ಗ್ಲಾಮರಸ್‌ ಲುಕ್‌ಗಾಗಿಯೇ ಧರಿಸಲಾಗುತ್ತದೆ. ಅದರಲ್ಲೂ ಬಾಲಿವುಡ್‌ ಸೆಲೆಬ್ರೆಟಿಗಳು ಈ ಕಾರ್ಸೆಟ್‌ ಪ್ರಿಯರು ಎನ್ನುತ್ತಾರೆ ಡಿಸೈನರ್ಸ್.

3/5

ಡ್ರೇಪ್ಡ್ ಶೈಲಿಯ ಕಾರ್ಸೆಟ್‌ ಗೌನ್‌

ತಕ್ಷಣಕ್ಕೆ ಇದು ನೋಡಲು ಗೌನ್‌ ಎಂದೆನಿಸುವುದಿಲ್ಲ! ಬದಲಿಗೆ ನೋಡಲು ಸೀರೆಯನ್ನು ಉಟ್ಟಿದ್ದಾರೆ, ಸೆರಗನ್ನು ಸೊಂಟಕ್ಕೆ ಸಿಕ್ಕಿಸಿದ್ದಾರೆ ಎಂದೆನಿಸುತ್ತದೆ. ಅಲ್ಲದೇ, ಡ್ರೇಪ್ಡ್ ಸ್ಕರ್ಟ್ ಶೈಲಿಯಲ್ಲೂ ಇದು ಕಾಣಿಸುತ್ತದೆ. ಆದರೆ, ಇದು ಅದಲ್ಲ! ಕಾರ್ಸೆಟ್‌ ಗೌನ್‌ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

4/5

ಶಿಫಾನ್‌ ಫ್ಯಾಬ್ರಿಕ್‌ನ ಔಟ್‌ಫಿಟ್‌

ಶಿಫಾನ್‌ ಫ್ಯಾಬ್ರಿಕ್‌ನ ಮೇಲೆಲ್ಲಾ ಪ್ರಿಂಟೆಡ್‌ ವಿನ್ಯಾಸ ಮಾಡಲಾಗಿದೆ. ಪಾಸ್ಟೆಲ್‌ ಶೇಡ್‌ ಇದ್ದು, ರಾಶಿಯವರ ಬಾಡಿ ಮಾಸ್‌ ಇಂಡೆಕ್ಸನ್ನು ಹೈಲೈಟ್‌ ಮಾಡುವಲ್ಲಿ ಯಶಸ್ವಿಯಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ ಹುಮೈರಾ.

5/5

ರಾಶಿ ಖನ್ನಾ ಸಿಂಪಲ್‌ ಮೇಕಪ್‌

ಕತ್ತಿನ ಸರಪಳಿಯಂತಹ ನೆಕ್ಲೇಸ್‌ ಹೊರತುಪಡಿಸಿದಲ್ಲಿ, ರಾಶಿ ಇನ್ಯಾವುದೇ ಜ್ಯುವೆಲರಿ ಧರಿಸಿಲ್ಲ. ತೀರಾ ಸಿಂಪಲ್‌ ಮೇಕಪ್‌ನಲ್ಲಿದ್ದಾರೆ. ಇದು ಅವರನ್ನು ಹೈಲೈಟ್‌ ಮಾಡಿದೆ. ಆಕರ್ಷಕವಾಗಿ ಬಿಂಬಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಶೀಲಾ ಸಿ ಶೆಟ್ಟಿ

View all posts by this author