ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rukmini Vasanth: ಕಲಾಂಕಾರಿ ಎಥ್ನಿಕ್‌ವೇರ್‌ನಲ್ಲಿ ಕಂಗೊಳಿಸಿದ ನಟಿ ರುಕ್ಮಿಣಿ ವಸಂತ್‌

Star Fashion 2025: ನೇರಳೆ ಬಣ್ಣದ ಕಲಾಂಕಾರಿ ಎಥ್ನಿಕ್‌ವೇರ್‌ನಲ್ಲಿ ಕಾಂತಾರ ಚಾಪ್ಟರ್‌ 1 ಚಿತ್ರದ ನಾಯಕ ನಟಿ ರುಕ್ಮುಣಿ ವಸಂತ್‌ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದ್ಯಾವ ಬಗೆಯ ಔಟ್‌ಫಿಟ್‌? ವಿಶೇಷತೆ ಏನು? ಅವರ ಲುಕ್‌ ಬಗ್ಗೆ ಫ್ಯಾಷನ್‌ ವಿಮರ್ಶಕರು ಹೇಳುವುದೇನು? ಇಲ್ಲಿದೆ ವಿವರ.

ಚಿತ್ರಗಳು: ರುಕ್ಮಿಣಿ ವಸಂತ್‌, ನಟಿ., ಫೋಟೋಗ್ರಾಫಿ: ಸೌರಭ್‌ ಸೋನ್ಕರ್‌
1/5

ಕಾಂತಾರ ಚಾಪ್ಟರ್‌ 1 ನಟಿ ರುಕ್ಮಿಣಿ ವಸಂತ್‌ ಎಥ್ನಿಕ್‌ವೇರ್‌, ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ, ಅಭಿಮಾನಿಗಳನ್ನು ಸೆಳೆದು ಮೆಚ್ಚುಗೆ ಗಳಿಸಿದೆ.

2/5

ಅಭಿಮಾನಿಗಳನ್ನು ಆಕರ್ಷಿಸಿದ ಎಥ್ನಿಕ್‌ವೇರ್‌

ಹೌದು, ಚಿತ್ರ ಬಿಡುಗಡೆಯ ನಂತರ ಸಾಕಷ್ಟು ಎಥ್ನಿಕ್‌ವೇರ್‌ಗಳಲ್ಲೆ ಕಾಣಿಸಿಕೊಳ್ಳುತ್ತಿದ್ದ ರುಕ್ಮಿಣಿ ವಸಂತ್‌, ಇದೀಗ ಗಾಢ ನೇರಳೆ ಬಣ್ಣದ ಕಲಾಂಕಾರಿ ಎಥ್ನಿಕ್‌ವೇರ್‌ನಲ್ಲಿ ಮಿಂಚಿದ್ದಾರೆ. ಅಪ್‌ಲೋಡ್‌ ಮಾಡಿದ ಕೆಲವೇ ಕ್ಷಣಗಳಲ್ಲಿ ಫ್ಯಾಷನ್‌ ಪ್ರಿಯರನ್ನು ಮಾತ್ರವಲ್ಲ, ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ.

3/5

ರುಕ್ಮಿಣಿಯ ನೇರಳೆ ಬಣ್ಣದ ಡಿಸೈನರ್‌ವೇರ್‌

ಅಂದಹಾಗೆ, ನಟಿ ರುಕ್ಮಿಣಿ ವಸಂತ್‌ ಧರಿಸಿರುವ ನೇರಳೆ ಬಣ್ಣದ ಔಟ್‌ಫಿಟ್‌ ಲೆಹೆಂಗಾ ಆಗಿದ್ದು, ಈ ಗಾಢ ವರ್ಣದ ಎಥ್ನಿಕ್‌ವೇರ್‌ಗೆ ಮ್ಯಾಚ್‌ ಆಗುವಂತೆ ಪೆನ್‌ ಕಲಾಂಕಾರಿ ವಿನ್ಯಾಸದ ದಾವಣಿ ಅಥವಾ ದುಪಟ್ಟಾ ಮ್ಯಾಚ್‌ ಮಾಡಲಾಗಿದೆ. ಇದು ಫೆಸ್ಟೀವ್‌ ಲುಕ್‌ ನೀಡಿದೆ.

4/5

ರುಕ್ಮಿಣಿ ಸ್ಟೈಲಿಂಗ್‌ ಟೀಮ್‌ ಜಾದೂ

ರುತುಜಾ, ಕೀರ್ತಿ ಮದುಸೂಧನ್‌ ಹಾಗೂ ಪೂಜಾ ಅವರ ಸ್ಟೈಲಿಂಗ್‌ ಟೀಮ್‌ ಇವರ ಬ್ಯೂಟಿಫುಲ್‌ ಸ್ಟೈಲಿಂಗ್‌ಗೆ ಸಾಥ್‌ ನೀಡಿದೆ. ಇನ್ನು, ಅಭಿಲಾಷಾ ಅವರ ಮೇಕಪ್‌ ಹಾಗೂ ಯಶ್‌ದೀಪ್‌ ಅವರ ಹೇರ್‌ಸ್ಟೈಲಿಂಗ್‌ ರುಕ್ಮಿಣಿಯವರನ್ನು ಮತ್ತಷ್ಟು ಸುಂದರವಾಗಿ ಬಿಂಬಿಸಿದೆ. ಕುಂದನ್‌ ಕಾಲಿ ಜ್ಯುವೆಲರಿಗಳು ಅವರ ಡಿಸೈನರ್‌ವೇರನ್ನು ಮತ್ತಷ್ಟು ಮನಮೋಹವಾಗಿಸಿದೆ.

5/5

ಫ್ಯಾಷನ್‌ ವಿಮರ್ಶಕರ ರಿವ್ಯೂ

ಇನ್ನು, ಫ್ಯಾಷನ್‌ ವಿಮರ್ಶಕರು ಹೇಳುವಂತೆ, ರುಕ್ಮಿಣಿಯವರ ಈ ಲುಕ್‌ ಫೆಸ್ಟೀವ್‌ ಸೀಸನ್‌ಗೆ ಸಾಥ್‌ ನೀಡಿದೆ. ಅಲ್ಲದೇ, ನೋಡುಗರನ್ನು ಸೆಳೆಯುವಲ್ಲಿ ಕಂಪ್ಲೀಟ್‌ ಯಶಸ್ವಿಯಾಗಿದೆ ಎಂದಿದ್ದಾರೆ.

ಶೀಲಾ ಸಿ ಶೆಟ್ಟಿ

View all posts by this author