Star Fashion 2025: ವೈಬ್ರೆಂಟ್ ಟ್ರೆಂಚ್ ಕೋಟ್ ಡ್ರೆಸ್ನಲ್ಲಿ ನಟಿ ಶರ್ಮಿಳಾ ಮಾಂಡ್ರೆಯ ಟ್ರಾವೆಲ್ ಫ್ಯಾಷನ್
Star Fashion 2025: ವೈಬ್ರೆಂಟ್ ರಾಣಿ ಪಿಂಕ್ ಕಲರ್ನ ಟ್ರೆಂಚ್ ಕೋಟ್ ಔಟ್ಫಿಟ್ನಲ್ಲಿ ನಟಿ ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ. ಅವರ ಈ ಟ್ರಾವೆಲ್ ಲುಕ್ ಹೇಗಿದೆ? ಧರಿಸಿರುವ ಔಟ್ಫಿಟ್ ವಿಶೇಷತೆಯೇನು? ಈ ಎಲ್ಲದರ ಕುರಿತಂತೆ ಫ್ಯಾಷನ್ ವಿಮರ್ಶಕರು ಇಲ್ಲಿ ವಿಶ್ಲೇಷಿಸಿದ್ದಾರೆ.

ಚಿತ್ರಗಳು: ಶರ್ಮಿಳಾ ಮಾಂಡ್ರೆ, ನಟಿ


ವೈಬ್ರೆಂಟ್ ರಾಣಿ ಪಿಂಕ್ ಕಲರ್ನ ಟ್ರೆಂಚ್ಕೋಟ್ ಔಟ್ಫಿಟ್ನಲ್ಲಿ ನಟಿ ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದು, ಅವರ ಈ ಟ್ರಾವೆಲ್ ಫ್ಯಾಷನ್ ಎಲ್ಲರನ್ನು ಆಕರ್ಷಿಸಿದೆ.

ಶರ್ಮಿಳಾ ಜಾರ್ಜಿಯಾ ಟ್ರಾವೆಲ್ ಫ್ಯಾಷನ್
ನಟಿ ಶರ್ಮಿಳಾ ಮಾಂಡ್ರೆ ತಮ್ಮ ಜಾರ್ಜಿಯಾ ಪ್ರವಾಸದಲ್ಲಿ ಕಾಣಿಸಿಕೊಂಡಂತಹ ನಾನಾ ಲುಕ್ಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನೋಡುಗರ ಮನ ಸೆಳೆದಿದೆ.
ಇದಕ್ಕೆ ಕಾರಣ ಟ್ರಾವೆಲ್ ಫ್ಯಾಷನ್ನಲ್ಲಿ ಅವರು ಧರಿಸಿದ್ದ, ವೈಬ್ರೆಂಟ್ ಶೇಡ್ನ ರಾಣಿ ಪಿಂಕ್ ಕಲರ್ನ ಉಡುಗೆ. ಹೌದು, ಅವರು ಧರಿಸಿದ್ದ ಟ್ರೆಂಚ್ ಕೋಟ್ ಡ್ರೆಸ್ ಅವರನ್ನು ಆಕರ್ಷಕವಾಗಿ ಬಿಂಬಿಸಿದೆ. ತಾರೆಯರು ಟ್ರಾವೆಲ್ನಲ್ಲಿ ಇಂತಹ ಕಲರ್ನಲ್ಲಿ ಕಾಣಿಸಿಕೊಳ್ಳುವುದು ತೀರಾ ಕಡಿಮೆ! ಇದು ಅಪರೂಪದ ಕಲರ್ ಕಾಂಬಿನೇಷನ್ನ ಈ ಔಟ್ಫಿಟ್ ಎನ್ನಬಹುದು. ಹಾಗಾಗಿ ಇದು ಅವರನ್ನು ಹೈಲೈಟ್ ಮಾಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಪ್ರಯೋಗಾತ್ಮಕ ಕಲರ್ನ ಔಟ್ಫಿಟ್
ಅಂದಹಾಗೆ, ಟ್ರಾವೆಲ್ ಫ್ಯಾಷನ್ಗಳಲ್ಲಿ ನಟಿಯರು ಆದಷ್ಟೂ ಡಾರ್ಕ್ ಶೇಡ್ ಇಲ್ಲವೇ ಕಂಪ್ಲೀಟ್ ವೆಸ್ಟರ್ನ್ ಲುಕ್ ನೀಡುವಂತಹ ಔಟ್ಫಿಟ್ಗಳನ್ನು ಧರಿಸುವುದು ಕಾಮನ್. ಆದರೆ, ಶರ್ಮಿಳಾ ಮಾಂಡ್ರೆಯವರು ಈ ಬಾರಿಯ ಟ್ರಾವೆಲ್ ಫ್ಯಾಷನ್ನಲ್ಲಿ ಕಂಪ್ಲೀಟ್ ಡಿಫರೆಂಟ್ ಔಟ್ಲುಕ್ಗೆ ಅದರಲ್ಲೂ ಪ್ರಯೋಗಾತ್ಮಕ ಫ್ಯಾಷನ್ಗೆ ಪ್ರಾಮುಖ್ಯತೆ ನೀಡಿದ್ದಾರೆ. ಇದು ಅವರಿಗೆ ಡಿಫರೆಂಟ್ ಲುಕ್ ನೀಡಿದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.

ಸ್ಯಾಟಿನ್ ಟ್ರೆಂಚ್ ಜಾಕೆಟ್ ಸ್ಪೆಷಾಲಿಟಿ
ಇದುವರೆಗೂ ಫ್ಯಾಷನ್ ಮಾಡೆಲ್ಗಳು ಹಾಗೂ ಬಾಲಿವುಡ್ ಸೆಲೆಬ್ರೆಟಿಗಳ ಲಿಸ್ಟ್ನಲ್ಲಿದ್ದ ಮಾನೋಕ್ರೋಮ್ ಶೇಡ್ನ ಸ್ಯಾಟಿನ್ ಸಾಫ್ಟ್ ಟ್ರೆಂಚ್ ಕೋಟ್ ಔಟ್ಫಿಟ್ಗಳು ರಾಯಲ್ ಲುಕ್ ನೀಡುತ್ತವೆ.

ಕಲರ್ಫುಲ್ ಟ್ರಾವೆಲ್ ಫ್ಯಾಷನ್
ಒಟ್ಟಿನಲ್ಲಿ, ನಟಿ ಶರ್ಮಿಳಾ ಮಾಂಡ್ರೆಯವರ ಈ ವೈಬ್ರೆಂಟ್ ಔಟ್ಫಿಟ್ ಅವರ ಟ್ರಾವೆಲ್ ಫ್ಯಾಷನನ್ನು ಕಲರ್ಫುಲ್ ಆಗಿಸಿದೆ ಎನ್ನಬಹುದು.