Saree Fashion 2025: ಸಿಕ್ವೀನ್ಸ್ನಲ್ಲೂ ಬಂತು ನಯಾ ವಿನ್ಯಾಸದ ರೆಡಿ ಸೀರೆ
Saree Fashion 2025: ಇದೀಗ ಸಿಕ್ವಿನ್ಸ್ ಫ್ಯಾಬ್ರಿಕ್ನಲ್ಲಿ ರೆಡಿ ಸೀರೆಗಳು ಲಗ್ಗೆ ಇಟ್ಟಿವೆ. ಉಡುಗೆಯಂತೆ ಅತಿ ಸುಲಭವಾಗಿ ಧರಿಸಬಹುದಾದ ಈ ಸೀರೆಗಳು ಸೆಲೆಬ್ರೆಟಿಗಳನ್ನು ಸವಾರಿ ಮಾಡುತ್ತಿವೆ. ಇದ್ಯಾವ ಬಗೆಯ ಸೀರೆ? ಆಯ್ಕೆ ಹಾಗೂ ಸ್ಟೈಲಿಂಗ್ ಹೇಗೆ? ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ನಿಕ್ಕಿ ತಂಬೋಲಿ, ಬಾಲಿವುಡ್ ನಟಿ., ಫೋಟೋಗ್ರಾಫಿ: ರೋಹಿತ್ ಫೋಟೋಗ್ರಾಫಿ


ಇದೀಗ ಸಿಕ್ವಿನ್ಸ್ ಫ್ಯಾಬ್ರಿಕ್ನಲ್ಲಿ ನಯಾ ಲಯಕ್ ನೀಡುವ ಗ್ಲಾಮರಸ್ ರೆಡಿ ಸೀರೆಗಳು ಲಗ್ಗೆ ಇಟ್ಟಿವೆ. ಹೌದು, ಔಟ್ಫಿಟ್ಗಳಂತೆ ಅತಿ ಸುಲಭವಾಗಿ ಧರಿಸಬಹುದಾದ ಈ ಸಿಕ್ವೀನ್ಸ್ ರೆಡಿ ಸೀರೆಗಳು ಸದ್ಯ ಸೆಲೆಬ್ರೆಟಿಗಳನ್ನು ಸವಾರಿ ಮಾಡುತ್ತಿವೆ. ಇದಕ್ಕೆ ಉದಾಹರಣೆಯೆಂಬಂತೆ, ಇತ್ತೀಚೆಗೆ ನಟಿ ನಿಕ್ಕಿ ತಂಬೋಲಿ ಧರಿಸಿದ್ದ ಟ್ರೆಂಡ್ ಲಿಸ್ಟ್ನಲ್ಲಿದ್ದ ಸಿಕ್ವೀನ್ಸ್ ರೆಡಿ ಸೀರೆ ಸಖತ್ ಪಾಪುಲರ್ ಆಗಿದೆ. ಈಗಾಗಲೇ ಮಾರುಕಟ್ಟೆಗಳಲ್ಲಿ ಇದೇ ಶೈಲಿಯ ಲೋಕಲ್ ಬ್ರಾಂಡ್ಗಳಲ್ಲಿ ನಾನಾ ಕಲರ್ಗಳಲ್ಲಿ ಈ ಶೈಲಿಯ ರೆಡಿ ಸೀರೆಗಳು ರಾರಾಜಿಸುತ್ತಿವೆ.

ಸಿಕ್ವಿನ್ಸ್ ರೆಡಿ ಸೀರೆಯ ವಿಶೇಷತೆ
ಅಂದಹಾಗೆ, ಸಿಕ್ವೀನ್ಸ್ ರೆಡಿ ಸೀರೆಗಳ ವಿಶೇಷತೆ ಏನೆಂದರೆ, ಇವು ಗ್ಲಾಮರಸ್ ಲುಕ್ ನೀಡುವುದರೊಂದಿಗೆ ನೋಡಲು ಆಕರ್ಷಕವಾಗಿ ಕಾಣಿಸುತ್ತವೆ. ಇಂಡೋ-ವೆಸ್ಟರ್ನ್ ಸ್ಟೈಲಿಂಗ್ಗೆ ಇವು ಹೇಳಿ ಮಾಡಿಸಿದ ಸೀರೆ. ಅದರಲ್ಲೂ ಗ್ಲಾಮರಸ್ ಲುಕ್ ನೀಡುವ ಸೀರೆಗಳಿವು. ನೋಡಲು ಥೇಟ್ ಗ್ರ್ಯಾಂಡ್ ಔಟ್ಫಿಟ್ನಂತೆಯೂ ಕಾಣಿಸುತ್ತವೆ. ಅಲ್ಲದೇ, ಪಾರ್ಟಿವೇರ್ಗಳ ಕೆಟಗರಿಯಲ್ಲಿ ಇವು ಸಖತ್ ಲುಕ್ ನೀಡುತ್ತವೆ ಎನ್ನುತ್ತಾರೆ ಫ್ಯಾಷನ್ ಸ್ಟೈಲಿಸ್ಟ್ಗಳು.

ಪಾರ್ಟಿಗೆ ಹೇಳಿ ಮಾಡಿಸಿದ ಸೀರೆಗಳಿವು
ಯಾವುದೇ ಪಾರ್ಟಿಗೆ ಇವು ಹೇಳಿ ಮಾಡಿಸಿದ ಸೀರೆಗಳು ಎನ್ನಬಹುದು! ಯಾಕೆಂದರೆ, ಇವು ನೈಟ್ ಪಾರ್ಟಿಯಲ್ಲಿ ಲೈಟ್ನಲ್ಲಿ ಮಿನುಗುತ್ತವೆ. ಜತೆಗೆ ಪಾರ್ಟಿಯ ರಂಗೇರಿಸುತ್ತವೆ. ಬಾಲಿವುಡ್ ಪಾರ್ಟಿಗಳಲ್ಲಿ ಈ ಸಿಕ್ವೀನ್ಸ್ ರೆಡಿ ಸೀರೆಗಳು ಸದ್ಯ ಹಂಗಾಮ ಎಬ್ಬಿಸಿವೆ. ಯಾರೂ ನೋಡಿದರೂ ಈ ಸಿಕ್ವೀನ್ಸ್ ರೆಡಿ ಸೀರೆಗಳಲ್ಲಿ ಗ್ಲಾಮರಸ್ ಆಗಿ ಕಾಣುತ್ತಿರುವುದನ್ನು ನೋಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್ಗಳು.

ಸಿಕ್ವೀನ್ಸ್ ರೆಡಿ ಸೀರೆಗಳ ಆಯ್ಕೆ ಹಾಗೂ ಸ್ಟೈಲಿಂಗ್ ಹೀಗಿರಲಿ
* ನಿಮ್ಮ ಪರ್ಸನಾಲಿಟಿಗೆ ತಕ್ಕಂತೆ ನೋಡಿ ಆಯ್ಕೆ ಮಾಡಿ.
* ಟ್ರಯಲ್ ನೋಡಿ ಖರೀದಿಸಿ.
* ಈ ಗ್ಲಾಮರಸ್ ಲುಕ್ ನೀಡುವ ಸೀರೆಗೆ ಹೆಚ್ಚು ಆಕ್ಸೆಸರೀಸ್ ಬೇಕಾಗಿಲ್ಲ!
* ಆದಷ್ಟೂ ಇಂಡೋ-ವೆಸ್ಟರ್ನ್ ಲುಕ್ ನೀಡಿ.
* ಖರೀದಿಸುವಾಗ ನಿರ್ವಹಣೆ ಬಗ್ಗೆ ತಿಳಿದುಕೊಳ್ಳಿ.
* ಇತರೆ ಸೀರೆಯೊಂದಿಗೆ ಇರಿಸಬೇಡಿ.

ಇದೀಗ ಸಿಕ್ವಿನ್ಸ್ ಫ್ಯಾಬ್ರಿಕ್ನಲ್ಲಿ ರೆಡಿ ಸೀರೆಗಳು ಲಗ್ಗೆ ಇಟ್ಟಿವೆ. ಇತ್ತೀಚೆಗೆ ನಟಿ ನಿಕ್ಕಿ ತಂಬೋಲಿ ಧರಿಸಿದ್ದ ಟ್ರೆಂಡ್ ಲಿಸ್ಟ್ನಲ್ಲಿದ್ದ ಸಿಕ್ವೀನ್ಸ್ ರೆಡಿ ಸೀರೆ ಸಖತ್ ಪಾಪುಲರ್ ಆಗಿದೆ.